ಪಬ್‌ಗೆ ಬಂದ್ರೂ, ಮಾಡರ್ನ್‌ ಡ್ರೆಸ್‌ನಲ್ಲಿಯೂ ಪತ್ನಿ ಧರ್ಮ ಬಿಡದ Rakshita Prem ನಾದಿನಿ, ರಾಣಾ ಮಡದಿ!

Published : Nov 26, 2025, 08:47 AM IST

ಬೆಂಗಳೂರಿನಲ್ಲಿ ನಟಿ ರಕ್ಷಿತಾ ಪ್ರೇಮ್‌ ಸಹೋದರ, ರಾಣಾ ಅವರು ಹೊಸದಾಗಿ ಪಬ್‌ ಆರಂಭಿಸಿದ್ದಾರೆ. ಈ ಉದ್ಘಾಟನೆಗೆ ಕನ್ನಡ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಆ ವೇಳೆ ಮಾಡರ್ನ್‌ ಡ್ರೆಸ್‌ ಹಾಕಿದ್ರೂ ಕೂಡ ರಾಣಾ ಪತ್ನಿಯ ನಡೆ ಎಲ್ಲರಿಗೂ ಮೆಚ್ಚುಗೆ ತಂದಿದೆ. ಹಾಗಿದ್ದರೆ ಏನದು? 

PREV
15
ಅದ್ದೂರಿಯಾಗಿ ಪಬ್‌ ಆರಂಭ

ರಕ್ಷಿತಾ ಪ್ರೇಮ್‌ ತಮ್ಮ ರಾಣಾ ಅವರು ಹೊಸದಾಗಿ ಪಬ್‌ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿಯೇ ಪಬ್‌ ಆರಂಭವಾಗಿದೆ. ದೊಡ್ಡ ಮಟ್ಟದಲ್ಲಿ ಉದ್ಘಾಟನೆ ಆಗಿದೆ. 

25
ಸೆಲೆಬ್ರಿಟಿಗಳ ಆಗಮನ

ನಟ ಕಿಚ್ಚ ಸುದೀಪ್‌, ದಿಶಾ ಮದನ್, ನವೀನ್‌ ಶಂಕರ್, ಅಮೃತಾ ಅಯ್ಯಂಗಾರ್, ಮೇಘನಾ ರಾಜ್‌, ರಾಗಿಣಿ ದ್ವಿವೇದಿ, ಕಾರ್ತಿಕ್‌ ಶರ್ಮಾ ಮುಂತಾದವರು ಪಬ್‌ಗೆ ಬಂದು ಶುಭ ಹಾರೈಸಿದ್ದಾರೆ. 

35
ದೊಡ್ಡ ಮಟ್ಟದಲ್ಲಿ ಪಬ್‌ ಆರಂಭ

ದೊಡ್ಡ ಮಟ್ಟದಲ್ಲಿ ಪಬ್‌ ಆರಂಭವಾಗಿದೆ. ಇದರ ಜಾಗ ಕೂಡ ದೊಡ್ಡದಿದೆ. ಡ್ಯಾನ್ಸರ್‌ಗಳು ಕೂಡ ಇದ್ದಾರೆ, ಇನ್ನು ಡೆಕೋರೇಶನ್‌ ಸಖತ್‌ ಆಗಿದೆ, ಕೂರಲು ಜಾಗ ಕೂಡ ದೊಡ್ಡದಾಗಿದೆ.

45
ಎಲ್ಲಿ ನೋಡಿದ್ರೂ ಹೊಸತನ

ಕೂರಲು ಇರುವ ಜಾಗದಿಂದ ಹಿಡಿದು, ಗೋಡೆಗಳ ಮೇಲಿನ ಫೋಟೋಗಳು ಎಲ್ಲವೂ ವಿಜೃಂಭಣೆಯಿಂದ ಕೂಡಿದೆ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಒಡೆತನದ ಪಬ್‌ ಇದ್ದು, ಈಗ ರಾಣಾ ಕೂಡ ಎಂಟ್ರಿ ಕೊಟ್ಟಿದ್ದಾರೆ.

55
ರಕ್ಷಿತಾ ಕೇಸರ್ಕರ್‌ ಯಾಕೆ ಎಲ್ರಿಗೂ ಇಷ್ಟವಾದರು?

ಪತಿಯ ಪಬ್‌ ಉದ್ಘಾಟನೆಗೆ ಮಾಡರ್ನ್‌ ಡ್ರೆಸ್‌ನಲ್ಲಿಯೇ ಬಂದ ರಕ್ಷಿತಾ ಅವರು ಕರಿಮಣಿ ಅಥವಾ ಮಾಂಗಲ್ಯ ಹಾಕೋದು ಮರೆತಿರಲಿಲ್ಲ. ಇದು ವೀಕ್ಷಕರಿಗೆ ಇಷ್ಟ ಆಗಿದೆ, ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. 

Read more Photos on
click me!

Recommended Stories