ಲಕ್ಷ್ಮೀ ನಿವಾಸ ಸೀರಿಯಲ್ನಿಂದ ಹೊರ ಬಂದಿರುವ ವಿಶ್ವ ಪಾತ್ರಧಾರಿ ಭವಿಷ್ ಗೌಡ ಮತ್ತು ಪುಟ್ಟಕ್ಕನ ಮಕ್ಕಳು ಸೀರಿಯಲ್ನಿಂದ ಹೊರ ಬಂದಿರುವ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಮದ್ವೆಯಾಗಿ ಹೊಸ ಜೀವನ ಶುರು ಮಾಡಿದ್ದಾರೆ. ಏನಿದು ಸ್ಟೋರಿ?
ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಸದ್ಯ ವಿಶ್ವನ ಪಾತ್ರಕ್ಕೆ ಮಹತ್ವ ಸಿಗುತ್ತಿದೆ. ಸೈಕೋ ಪತಿ ಜಯಂತ್ನಿಂದ ತಪ್ಪಿಸಿಕೊಂಡು ಬಂದಿರುವ ಜಾಹ್ನವಿ ವಿಶ್ವನ ಮನೆಯಲ್ಲಿ ಆಶ್ರಯ ಪಡೆದಿರುವ ವಿಷಯ ಜಯಂತ್ಗೆ ಬಹುತೇಕ ತಿಳಿದಿದೆ. ಇದೀಗ ವಿಶ್ವನನ್ನೇ ಮುಗಿಸೋ ಪ್ಲ್ಯಾನ್ ಮಾಡ್ತಿದ್ದಾನೆ ಅವನು. ಇದರಲ್ಲಿ ವಿಶ್ವನ ತಪ್ಪೇ ಇಲ್ಲ, ಅವನಿಗೆ ಏನೂ ಗೊತ್ತೇ ಇರಲಿಲ್ಲ. ಆದರೂ ಸೈಕೋ ಜಯಂತ್ಗೆ ಅವನ ಮೇಲೆ ಸಿಟ್ಟು. ಇಂಥ ಸಮಯದಲ್ಲಿಯೇ ವಿಶ್ವನ ಪಾತ್ರ ಬದಲಾಗಿದೆ. ಈ ಸ್ಥಾನಕ್ಕೆ ಶ್ರೀರಸ್ತು ಶುಭಮಸ್ತುವಿನಲ್ಲಿ ಅಭಿ ಪಾತ್ರಧಾರಿಯ ಎಂಟ್ರಿಯಾಗಿದೆ.
27
ಪುಟ್ಟಕ್ಕನ ಮಕ್ಕಳು ತೊರೆದಿದ್ದ ಸಂಜನಾ ಬುರ್ಲಿ
ಅದೇ ಇನ್ನೊಂದೆಡೆ, ಪುಟ್ಟಕ್ಕನ ಮಕ್ಕಳುವಿನಲ್ಲಿ ಹವಾ ಸೃಷ್ಟಿಸಿದ್ದ ಸ್ನೇಹಾ ಡಿಸಿಯಾಗುತ್ತಲೇ ಸತ್ತೇ ಹೋದಳು. ಹೆಣ್ಣುಮಕ್ಕಳ ಆದರ್ಶವಾಗಿದ್ದ ಈ ಪಾತ್ರವನ್ನು ಸಾಯಿಸಿದ್ದು ವೀಕ್ಷಕರಲ್ಲಿ ಸಕತ್ ಸಿಟ್ಟು ತರಿಸಿತ್ತು. ಅಷ್ಟಕ್ಕೂ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ (Sanjana Burli) ಅವರು ಶಿಕ್ಷಣ ಮುಂದುವರೆಸಬೇಕು, ಆದ್ದರಿಂದ ತಾವು ಸೀರಿಯಲ್ ಬಿಡುತ್ತಿರುವುದಾಗಿ ಹೇಳಿಕೆ ಕೊಟ್ಟಿದ್ದರು. ಅವರು ಸೀರಿಯಲ್ನಿಂದ ಹೊರ ಹೋದ ಕಾರಣ, ಅನಿವಾರ್ಯವಾಗಿ ಕಥೆ ಬದಲಿಸಿ, ಸ್ನೇಹಾ ಪಾತ್ರವನ್ನು ಸಾಯಿಸಬೇಕಾಗಿ ಬಂತು ಎಂದು ನಿರ್ದೇಶಕರು ಹೇಳಿದ್ದರು.
37
ಕುತೂಹಲದ ಮದುವೆ
ಇದೀಗ ಕುತೂಹಲ ಎನ್ನುವಂತೆ ಇದೇ ವಿಶ್ವ ಮತ್ತು ಇದೇ ಸ್ನೇಹಾ ಮದುವೆಯಾಗಿದ್ದಾರೆ! ಅಂದ ಹಾಗೆ ಇವರೇನು ರಿಯಲ್ ಲೈಫ್ನಲ್ಲಿ ಮದುವೆಯಾಗಿದ್ದಲ್ಲ ಮತ್ತೆ. ಇದು ಇವರಿಬ್ಬರೂ ನಟಿಸ್ತಿರೋ ಗಂಧದ ಗುಡಿ ಸೀರಿಯಲ್ ಸ್ಟೋರಿ.
ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ. ಜೀ ಕನ್ನಡದಿಂದ ಈ ಇಬ್ಬರೂ ತಾರೆಯರು ಕಲರ್ಸ್ ಕನ್ನಡಕ್ಕೆ ಹಾರಿದ್ದಾರೆ. ಗಂಧದ ಗುಡಿ ಸೀರಿಯಲ್ನಲ್ಲಿ ಇವರಿಬ್ಬರೂ ಪತಿ-ಪತ್ನಿಯಾಗಿದ್ದಾರೆ. ಪೊಲೀಸ್ ಸ್ಟೇಷನ್ನಲ್ಲಿ ಇವರಿಬ್ಬರ ಮದುವೆ ನಡೆಯುವುದರೊಂದಿಗೆ ಸೀರಿಯಲ್ ಶುರುವಾಗುತ್ತದೆ.
57
ವಿಶ್ವ- ಸ್ನೇಹಾ ಜೋಡಿ
ಇದರಲ್ಲಿ ವಿಶ್ವ ಪಾತ್ರಧಾರಿ ಭವಿಷ್ ಗೌಡ (Bhavish Gowda) ಅವರು ನಾಯಕನಾಗಿದ್ದು, ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ನಾಯಕಿಯಾಗಿದ್ದಾರೆ. ಇವರಿಬ್ಬರ ಮದುವೆಯಾಗುತ್ತದೆ. ಆದರೆ ನಾಯಕ ತನ್ನ ಸ್ನೇಹಿತರ ಜೊತೆ ಪಾಳು ಮನೆಯಲ್ಲಿ ವಾಸವಾಗಿದ್ದಾನೆ. ಅಲ್ಲಿಗೆ ಬಂದಾಗ ನಾಯಕಿ ಶಾಕ್ ಆಗುತ್ತಾಳೆ. ಆಕೆಯನ್ನು ಬರ ಮಾಡಿಕೊಳ್ಳುವುದು ಕೂಡ ಈ ಗಂಡು ಮಕ್ಕಳೇ.
67
ರೋಸಿ ಹೋದ ಪತ್ನಿ
ಆ ಮನೆಯಲ್ಲಿನ ಅವ್ಯವಸ್ಥೆ ನೋಡಿ ನಾಯಕಿ ರೋಸಿ ಹೋಗುತ್ತಾಳೆ. ಯಾವ ವ್ಯವಸ್ಥೆಯೂ ಸರಿ ಇಲ್ಲ. ಯಾವ ವಸ್ತುಗಳೂ ಸರಿ ಇಲ್ಲ. ಎಲ್ಲವೂ ಹಾಳು. ಮನೆಯ ಬಾಗಿಲಿನಿಂದ ಹಿಡಿದು ಅವರ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳೂ ಮುಟ್ಟಿದರೆ ಬಿದ್ದು ಹೋಗುವ ಸ್ಥಿತಿಯಲ್ಲಿ ಇವೆ.
77
ಬದಲಾಯಿಸ್ತಾಳಾ ನಾಯಕಿ?
ಇದನ್ನು ನೋಡಿ ನಾಯಕಿಗೆ ಸುಸ್ತಾಗಿ ಹೋಗುತ್ತದೆ. ಇಡೀ ಮನೆ ಬದಲಿಸಬೇಕು ಎಂದು ಗಂಡನಿಗೆ ಹೇಳುತ್ತಾಳೆ. ಆ ಮನೆಯನ್ನು ಆಕೆ ಗಂಧದ ಗುಡಿಯಾಗಿ ಹೇಗೆ ಬದಲಿಸುತ್ತಾಳೆ ಎನ್ನುವುದು ಸೀರಿಯಲ್ ಸ್ಟೋರಿ. ಈ ಸೀರಿಯಲ್ ಶೀಘ್ರದಲ್ಲಿ ಬರಲಿದೆ ಎಂದು ವಾಹಿನಿ ಪ್ರೊಮೋ ಶೇರ್ ಮಾಡಿದೆ.