ಅವಮಾನಗೊಂಡ ಕೇವಲ ಎರಡೂವರೆ ವರ್ಷಗಳಲ್ಲೇ ರಜನಿಕಾಂತ್ ಜೀವನ ಬದಲಾಯಿತು. ಎವಿಎಂ ಚೆಟ್ಟಿಯಾರ್ ಬಳಿ ಇದ್ದ ಇಟಾಲಿಯನ್ ಫಿಯೆಟ್ ಕಾರನ್ನು 4.25 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದರು. ಅದೇ ಅವರ ಜೀವನದ ಮೊದಲ ಕಾರು.
ಕಾರಿಗೆ ಡ್ರೈವರ್ ನೇಮಿಸಲು ನಿರ್ಧರಿಸಿದ ಅವರು, ಸಾಮಾನ್ಯ ಡ್ರೈವರ್ ಬೇಡ, ವಿದೇಶಿ ಕಾರು ಓಡಿಸಲು ವಿದೇಶಿ ಡ್ರೈವರ್ ಬೇಕು ಎಂದಿದ್ದರು. ಆಗ ಆಂಗ್ಲೋ-ಇಂಡಿಯನ್ ಆಗಿದ್ದ ರಾಬಿನ್ಸನ್ ಎಂಬುವವರನ್ನು ಡ್ರೈವರ್ ಆಗಿ ಕೆಲಸಕ್ಕೆ ಸೇರಿಸಿಕೊಂಡರು. ಅವರಿಗೆ ಸ್ಪೆಷಲ್ ಯೂನಿಫಾರ್ಮ್, ಬೆಲ್ಟ್, ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಕೂಡ ಕೊಡಿಸಿದರು. ಮರುದಿನ ರಾಬಿನ್ಸನ್ ಕಾರಿನ ಬಾಗಿಲು ತೆಗೆದು 'ರಿಪೋರ್ಟಿಂಗ್ ಸರ್' ಎಂದು ಗೌರವದಿಂದ ಸ್ವಾಗತಿಸಿದರು. ರಜಿನಿ ಕೂಡ ತಮ್ಮದೇ ಸ್ಟೈಲ್ನಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ನೇರವಾಗಿ ಸ್ಟುಡಿಯೋಗೆ ಹೊರಟರು.
ಎರಡೂವರೆ ವರ್ಷಗಳ ಹಿಂದೆ ಯಾವ ಜಾಗದಲ್ಲಿ ನಿರ್ಮಾಪಕರು ತಮ್ಮ ಐಷಾರಾಮಿ ಕಾರಿನಲ್ಲಿ ಬಂದು ರಜನಿಯನ್ನು ಅವಮಾನಿಸಿದ್ದರೋ, ಅದೇ ಜಾಗಕ್ಕೆ ತಮ್ಮ ಇಟಾಲಿಯನ್ ಫಿಯೆಟ್ ಕಾರಿನಲ್ಲಿ ಬಂದು ಇಳಿದರು. ಕಾರಿನಿಂದ ಇಳಿದು ತಮ್ಮದೇ ಸ್ಟೈಲ್ನಲ್ಲಿ ಸಿಗರೇಟ್ ಸೇದುತ್ತಾ ನಿಂತರು. ಅವರನ್ನು ನೋಡಲು ಸ್ಟುಡಿಯೋದಲ್ಲಿ ಇದ್ದವರೆಲ್ಲಾ ಹೊರಬಂದರು. ಬಳಿಕ ಅಲ್ಲಿಂದ ನೇರವಾಗಿ ತಮ್ಮ ಗುರು ಕೆ. ಬಾಲಚಂದರ್ ಅವರ ಕವಿತಾಲಯ ಆಫೀಸ್ಗೆ ತೆರಳಿದರು. ಹೊಸ ಕಾರು ಖರೀದಿಸಿರುವುದಾಗಿ ಹೇಳಿ, ಅದನ್ನು ಮುಟ್ಟಿ ಆಶೀರ್ವದಿಸುವಂತೆ ಕೇಳಿಕೊಂಡರು. ಬಾಲಚಂದರ್ ಖುಷಿಯಿಂದ ಕಾರನ್ನು ಆಶೀರ್ವದಿಸಿದರು.
ಯಾರಾದರೂ ಅವಮಾನಿಸಿದರೆ ಅವರ ಮೇಲೆ ಕೋಪಗೊಳ್ಳುವ ಬದಲು, ನಮ್ಮ ಕೆಲಸದ ಮೂಲಕವೇ ಉತ್ತರ ಕೊಡಬೇಕು ಎಂಬುದು ರಜನಿಕಾಂತ್ ಜೀವನದಲ್ಲಿ ನಡೆದ ಈ ಘಟನೆಯಿಂದ ಸಿಗುವ ದೊಡ್ಡ ಪಾಠ. ಇಂದು ಸೂಪರ್ಸ್ಟಾರ್ ಪಟ್ಟದಲ್ಲಿರುವ ರಜಿನಿ ಯಶಸ್ಸಿನ ಹಿಂದೆ ಹೀಗೆ ಹಲವು ಕಹಿ ಅನುಭವಗಳು ಮತ್ತು ಸವಾಲುಗಳಿವೆ.