ಸೌಂದರ್ಯ ತೋರಿಸೋದೇ ತಪ್ಪಾ? ಆ ವೆಬ್​ಸೈಟ್​ನಲ್ಲಿ ಹಾಕ್ತಾರೆ, ಆಮೇಲೆ: ಬಿಕ್ಕಿ ಬಿಕ್ಕಿ ಅತ್ತ ನಟಿ Khushi Mukharjee

Published : Mar 16, 2026, 11:03 PM IST

ಗ್ಲಾಮರಸ್ ಡ್ರೆಸ್‌ಗಳಿಂದ ಟ್ರೋಲ್ ಆಗುತ್ತಿರುವ ನಟಿ ಖುಷಿ ಮುಖರ್ಜಿ, ತಮ್ಮ ಫೋಟೋ ಮತ್ತು ವಿಡಿಯೋಗಳು ಪೋರ್ನ್ ವೆಬ್‌ಸೈಟ್‌ಗಳಲ್ಲಿ ದುರ್ಬಳಕೆಯಾಗುತ್ತಿವೆ ಎಂದು ಕಣ್ಣೀರು ಹಾಕಿದ್ದಾರೆ.  ಗ್ಲಾಮರ್ ಲೋಕದಲ್ಲಿ ಇದೆಲ್ಲಾ ಮಾಮೂಲು ಎಂದಿದ್ದ ನಟಿ, ಈಗ ಸೌಂದರ್ಯ ಪ್ರದರ್ಶನವೇ ತಪ್ಪೇ ಎಂದು ಪ್ರಶ್ನಿಸುತ್ತಿದ್ದಾರೆ

PREV
16
ಎಲ್ಲವೂ ಬೇಕು

ಗ್ಲಾಮರಸ್​ ಲೋಕಕ್ಕೆ ಬಂದ ಮೇಲೆ ಅದು ಬೇಡ, ಇದು ಬೇಡ ಎನ್ನಲು ಆಗಲ್ಲ. ಫೇಮಸ್​​ ಆಗ್ಬೇಕು ಎಂದೇ ಬಂದಿರುವಾಗ ಇದೆಲ್ಲಾ ಮಾಮೂಲು ಎನ್ನುತ್ತಲೇ ತಮ್ಮ ಡ್ರೆಸ್​ನಿಂದ ಇನ್ನಿಲ್ಲದಂತೆ ಟ್ರೋಲ್​​ ಆಗ್ತಿರೋ ನಟಿ ಖುಷಿ ಮುಖರ್ಜಿ. ಈಕೆಯ ಅಂಗಾಂಗ ಪ್ರದರ್ಶನ ಎಲ್ಲಾ ಗಡಿಗಳನ್ನೂ ದಾಟಿ ಹೋಗಿದೆ.

26
ಸೌಂದರ್ಯ ತೋರಿಸೋದೇ ತಪ್ಪಾ

ಇದೀಗ ಈಕೆಯ ವಿಡಿಯೋಗಳನ್ನು ಪೋ*ರ್ನ್​ ವೆಬ್​ಸೈಟ್​ನಲ್ಲಿ ಹಾಕುತ್ತಿದ್ದಾರಂತೆ. ಅದಕ್ಕಾಗಿ ಕಣ್ಣೀರು ಹಾಕಿದ್ದಾರೆ ನಟಿ. ನಾನು ನನ್ನ ಸೌಂದರ್ಯ ತೋರಿಸ್ತಿರೋದೇ ತಪ್ಪಾ? ನನ್ನದೇ ತಪ್ಪು ಎನ್ನುವ ರೀತಿ ಮಾತನಾಡುತ್ತಿದ್ದಾರೆ. ನನ್ನ ಫೋಟೋ, ವಿಡಿಯೋಗಳನ್ನು ಮಿಸ್​ಯೂಸ್​ ಮಾಡಿಕೊಳ್ಳಲಾಗುತ್ತಿದೆ. ಪೊಲೀಸ್​ ಠಾಣೆಗೆ ಹೋದರೂ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಕಾಮಿಡಿ ಕ್ವೀನ್​ ರಾಖಿ ಎನ್ನುವ ಇನ್​ಸ್ಟಾಗ್ರಾಮ್​ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

36
ಎಲ್ಲಾ ಮಾಡಲೇಬೇಕು ಎಂದ ನಟಿ

ಈ ಹಿಂದೆ ನಟಿ, ಗ್ಲಾಮರಸ್​ ಇಂಡಸ್ಟ್ರಿಗೆ ಬಂದ ಮೇಲೆ ಫೇಮಸ್​ ಆಗಬೇಕು ಎಂದು ಇದೆಲ್ಲಾ ಮಾಡಿದ್ರೆ ತಪ್ಪೇನಿಲ್ಲ ಎಂದಿದ್ದರು. ಊಟ ನಿಮ್ಮ ಇಚ್ಛೆಯಂತೆ ಮಾಡಿ, ಡ್ರೆಸ್​ ಬೇರೆಯವರ ಇಚ್ಛೆಯಂತೆ ಹಾಕಿಕೊಳ್ಳಿ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ನನಗೆ ಇಷ್ಟಬಂದ ಡ್ರೆಸ್​ ಹಾಕುವ ಹಕ್ಕು ನನಗೆ ಇದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು. ನೀವು ನನ್ನ ಬಗ್ಗೆ ಒಳ್ಳೆಯದ್ದೇ ಹೇಳಿ, ಕೆಟ್ಟದ್ದೇ ಹೇಳಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ. ಅಷ್ಟಕ್ಕೂ ನಟಿ ಈ ಹಿಂದೆ ಬೇಕಾದಷ್ಟು ಬಾರಿ ಇಂಥ ಡ್ರೆಸ್​ ಹಾಕಿ, ಉದ್ದೇಶಪೂರ್ವಕವಾಗಿ ಆ ಡ್ರೆಸ್​ ಹಾರಿಹೋಗುವಂತೆ ಮಾಡಿ, ಪ್ರದರ್ಶನ ಮಾಡಿರೋದು ಇದೆ.

46
ನಟಿಯ ಕುರಿತು

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ಬಹುಭಾಷಾ ನಟಿಯಾಗಿದ್ದು, ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ 'ಅಂಜಲಾ ತುರಾಯ್‌', ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ 'ಹಾರ್ಟ್ ಎಟಾಕ್‌', ತೆಲುಗಿನಲ್ಲೇ 'ದೊಂಗ ಪ್ರೇಮ' ಚಿತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೂ ಬಂದಿದ್ದ ನಟಿ ಕನ್ನಡದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು.

56
ಎಲ್ಲದಕ್ಕೂ ಸೈ

ಪಾತ್ರಕ್ಕೆ ತಕ್ಕಂತೆ ಯಾವ ರೀತಿಯ ಡ್ರೆಸ್​ ಬೇಕಾದರೂ ಧರಿಸಲು ಸಿದ್ಧ ಎಂದಿದ್ದರು ಈ ಮುಂಬೈ ಬೆಡಗಿ! ಈ ಹಿಂದೆ ಇವರು ತಮಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕ ಬಗೆಯನ್ನೂ ವಿವರಿಸಿದ್ದರು.ನನ್ನದು ಮಾಡೆಲಿಂಗ್ ವೃತ್ತಿ. ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ವಿವಿಧ ಶೋಗಳಲ್ಲಿ ಭಾಗವಹಿಸುತ್ತೇನೆ. ಹಲವು ಉತ್ಪನ್ನಗಳಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ. ಒಮ್ಮೆ ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಹೋಗಿದ್ದಾಗ ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಬಂತು ಎಂದಿದ್ದರು. ಐಟಂ ಸಾಂಗ್​ ಕೊಟ್ಟರೂ ರೆಡಿ, ಪಾತ್ರಕ್ಕಾಗಿ ಬಟ್ಟೆ ಬಿಚ್ಚಲೂ ರೆಡಿ ಎನ್ನುವ ಮಾತುಗಳನ್ನೂ ಆಡಿದ್ದರು ನಟಿ!

66
ಯೋಗ ಮಾಡ್ತಾರಂತೆ

ನಟಿ ಪ್ರತಿದಿನ ಸುಮಾರು 3 ಗಂಟೆಗಳ ಯೋಗ ಮಾಡುತ್ತಾರಂತೆ. ನೃತ್ಯ ತರಬೇತಿ ಪಡೆಯುತ್ತಿದ್ದಾರಂತೆ. ಯೋಗವು ನನ್ನ ಫಿಟ್‌ನೆಸ್ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ನೃತ್ಯದಿಂದಲೂ ಮೈಮನಕ್ಕೆ ಖುಷಿ ಕೊಡುತ್ತದೆ ಎಂದಿದ್ದಾರೆ. ಧ್ಯಾನವು ನನ್ನ ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಮತ್ತು ಭಾವನಾತ್ಮಕ ನಿಯಂತ್ರಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿರುವ ನಟಿ, ಇದು ಎಲ್ಲಾ ನಟರು ಪರದೆಯ ಮೇಲೆ ಪಾತ್ರಗಳನ್ನು ನಿರ್ವಹಿಸುವಾಗ ಯೋಗ, ಧ್ಯಾನ ತುಂಬಾ ಮಹತ್ವದ್ದು ಎಂದಿದ್ದಾರೆ. ಒಟ್ಟಿನಲ್ಲಿ ಈಕೆಯ ಡ್ರೆಸ್​ ಮಾತ್ರ ಸದ್ಯ ಭಾರಿ ಸದ್ದು ಮಾಡುತ್ತಿದೆ. ನಟಿ ಸದ್ಯ ಮೂತ್ರ ವಿಸರ್ಜನ್​ ಮನಾ ಹೈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories