ಕನ್ನಡದ ಸೂರ್ಯಕಾಂತಿ ಚಿತ್ರದ ನಟಿಗೆ 'ಅಡ್ಜಸ್ಟ್‌ ಮಾಡ್ಕೋತೀಯಾ..' ಅಂತಾ ಕೇಳಿದ್ದನಂತೆ ನಿರ್ದೇಶಕ!

Published : Aug 18, 2023, 07:08 PM ISTUpdated : Aug 18, 2023, 07:14 PM IST

ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ಚೇತನ್‌ ಜೊತೆ ನಟಿಸಿದ್ದ ರೆಜಿನಾ ಕ್ಯಾಸಂಡ್ರಾ ಆ ಬಳಿ ಸ್ಯಾಂಡಲ್‌ವುಡ್‌ನಿಂದ ಮರೆಯಾಗಿ ಹೋಗಿದ್ದರು. ಸದ್ಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಈಕೆ ಈಗ ಕಾಸ್ಟಿಂಗ್‌ ಕೌಚ್‌ ಆರೋಪ ಹೊರಿಸಿದ್ದಾರೆ.

PREV
112
ಕನ್ನಡದ ಸೂರ್ಯಕಾಂತಿ ಚಿತ್ರದ ನಟಿಗೆ 'ಅಡ್ಜಸ್ಟ್‌ ಮಾಡ್ಕೋತೀಯಾ..' ಅಂತಾ ಕೇಳಿದ್ದನಂತೆ ನಿರ್ದೇಶಕ!

2005ರಿಂದಲೂ ಸಿನಿಮಾ ರಂಗದಲ್ಲಿರುವ ತಮಿಳು-ತೆಲುಗು ಚಿತ್ರರಂಗದ ಖ್ಯಾತ ನಟಿ ಈಗ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಸ್ಟಿಂಗ್‌ ಕೌಚ್‌ ಕುರಿತಾಗಿ ಸಾಕಷ್ಟು ನಟಿಯರು ಮುಕ್ತವಾಗಿ ಮಾತನಾಡುತ್ತಿದ್ದಾರೆ.

 

212

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ 32 ವರ್ಷದ ನಟಿ ರೆಜಿನಾ ಕ್ಯಾಸಂಡ್ರಾ ನಿರ್ದೇಶಕರೊಬ್ಬರ ವಿರುದ್ಧ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ. ಆದರೆ, ಈ ನಿರ್ದೇಶಕ ಯಾರು ಎನ್ನುವ ಮಾಹಿತಿಯನ್ನು ಅವರು ನೀಡಿಲ್ಲ.

312

ಮೀ ಟೂ ಮಾತ್ರವಲ್ಲ ಕಾಸ್ಟಿಂಗ್‌ ಕೌಚ್‌ ಎನ್ನುವುದು ಕೂಡ ಸಿನಿಮಾ ರಂಗದಲ್ಲಿ ವ್ಯಾಪಕವಾಗಿದೆ. ಸಿನಿಮಾ ರಂಗಕ್ಕೆ ಕಾಲಿಡುವ ಆರಂಭದ ದಿನಗಳಲ್ಲಿ ನನಗೂ ಇದರ ಅನುಭವ ಆಗಿತ್ತು ಎಂದು ಕನ್ನಡದಲ್ಲಿ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿರುವ ರೆಜಿನಾ ಹೇಳಿದ್ದಾರೆ.

412

ರೆಜಿನಾ ಕ್ಯಾಸಂಡ್ರಾ ಮೂಲ ತಮಿಳುನಾಡು ಆಗಿದ್ದರೂ, ಈಕೆ ಜನಪ್ರಿಯವಾಗಿರುವ ತೆಲುಗು ಚಿತ್ರರಂಗದಲ್ಲಿ. ತೆಲುಗಿನ ಸಾಕಷ್ಟು ಯುವ ನಟರ ಜೊತೆ ಈಕೆ ನಟಿಸಿದ್ದು, ಗ್ಲಾಮರ್‌  ಮೂಲಕವೂ ಪಡ್ಡೆ ಹುಡುಗರ ನಿದ್ರೆ ಕಸಿದಿದ್ದಾರೆ.
 

512

ಪ್ರಸ್ತುತ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾಗಿರುವ ಈಕೆ, ಕೆಲ ಹಿಂದಿ ಚಿತ್ರಗಳು ಹಾಗೂ ವೆಬ್‌ ಸಿರೀಸ್‌ಗಳಲ್ಲೂ ನಟಿಸಿದ್ದಾರೆ. ಆದರೆ, ಫಿಲ್ಮ್‌ ಕೆರಿಯರ್‌ನಲ್ಲಿ ದೊಡ್ಡ ಮಟ್ಟದ ಹಿಟ್‌ ಚಿತ್ರಗಳ ಸಂಖ್ಯೆ ಕಡಿಮೆ ಇದೆ.
 

612

ರೆಜಿನಾ ಕ್ಯಾಸಂಡ್ರಾ ಬಿಗ್‌ ಸ್ಟಾರ್‌ಗಳ ಚಿತ್ರದಲ್ಲಿ ನಟಿಸಿಲ್ಲವಾದರೂ, ಯುವ ನಟರ ಜೊತೆಗಿನ ಆಫರ್‌ ಕಡಿಮೆಯಾಗಿಲ್ಲ. ಕೊನೆಯ ಬಾರಿಗೆ ಈಕೆ ಶಾಕಿನಿ ಡಾಕಿನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

'ರೂಮ್‌ಗೆ ಕರೆದ, ಕೈ ಹಿಡಿದು ಎಳೆದುಕೊಂಡ..' ಕಾಸ್ಟಿಂಗ್‌ ಕೌಚ್‌ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ನಿರೂಪಕಿ!

712

ಅದರೊಂದಿಗೆ ಈಕೆ ತಮಿಳಿನಲ್ಲಿಯೂ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತಮಿಳಯ ಚಾನೆಲ್‌ನ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ.

812

ನನ್ನ ಸಿನಿಮಾ ಜೀವನ ಆರಂಭವಾಗಿದ್ದು 2005ರಲ್ಲಿ. ಅಂದು ಅವಕಾಶಗಳಿಗಾಗಿ ನಾನು ಕೆಲವೊಂದು ವ್ಯಕ್ತಿಗಳನ್ನು ಕೇಳಿದ್ದೆ. ಈ ಹಂತದಲ್ಲಿ ನಿರ್ದೇಶಕರೊಬ್ಬರನ್ನು ನಾನು ಭೇಟಿಯಾಗಿದ್ದೆ ಎಂದು ರೆಜಿನಾ ಕ್ಯಾಸಂಡ್ರಾ ಹೇಳಿದ್ದಾರೆ.

912

ಆ ನಿರ್ದೇಶಕನ ಜೊತೆ ಮಾತನಾಡುವ ವೇಳೆ, 'ಖಂಡಿತವಾಗಿ ನಾನು ನಿನಗೆ ಅವಕಾಶ ನೀಡುತ್ತೇನೆ. ಆದರೆ, ನೀನು ಸ್ವಲ್ಪ ಅಡ್ಜಸ್ಟ್‌ ಮಾಡಿಕೊಳ್ಳಬೇಕು. ಹಾಗಿದ್ದಲ್ಲಿ ಈಗಲೇ ಶೂಟಿಂಗ್‌ ಆರಂಭ ಮಾಡುತ್ತೇನೆ' ಎಂದು ಹೇಳಿದ್ದರು.
 

1012

ಅಂದು ನಾನು ಅವರಿಗೆ ಒಕೆ ಎಂದು ಹೇಳಿ ಬಂದಿದ್ದೆ. ಆಗ ಅಡ್ಜಸ್ಟ್‌ಮೆಂಟ್‌ ಅಂದರೆ ಸೆಕ್ಸ್‌ ಅನ್ನೋದು ಗೊತ್ತಿರಲಿಲ್ಲ. ಆತ ಮತ್ತೆ ಫೋನ್‌ ಮಾಡಿದಾಗ, ನನ್ನ ಮ್ಯಾನೇಜರ್‌ ನಿಮ್ಮೊಂದಿಗೆ ಮಾತನಾಡುತ್ತಾರೆ ಅಂತಾ ಹೇಳಿ ಸುಮ್ಮನಾಗಿದ್ದೆ. ಬಳಿಕ ಸಂಭಾವನೆ ಕಡಿಮೆಯಾಯಿತು ಎಂದು ಹೇಳಿ ಮಾತು ಮುಗಿಸಿದ್ದೆ.

1112

ಈ ಘಟನೆ ನಡೆದು ಅಂದಾಜು 12 ವರ್ಷವಾಗಿದೆ. ನನಗೆ 20 ವರ್ಷವಾಗಿದ್ದ ನಡೆದ ಘಟನೆ ಅಂದು. ಇಂದಿಗೂ ಈ ಘಟನೆ ನೆನೆಸಿಕೊಂಡರೆ ಆಘಾತವಾಗುತ್ತದೆ ಎಂದು ಹೇಳಿದ್ದಾರೆ.
 

1212

ಮೀ ಟೂ ವಿವಾದಗಳ ಬಳಿಕ ಸಿನಿಮಾ ರಂಗದ ಖ್ಯಾತ ನಟಿಯರು ಕಾಸ್ಟಿಂಗ್‌ ಕೌಚ್‌ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ತೆಲುಗು ಕಿರುತೆರೆಯ ನಿರೂಪಕಿ ವರ್ಷಿಣಿ ಸೌಂದರ್‌ರಾಜನ್‌ ಕೂಡ ಇದೇ ಆರೋಪ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories