ಯಶ್ ಹಾದಿಯಲ್ಲಿ 'ಛತ್ರಪತಿ' ರಿಷಬ್ ಶೆಟ್ಟಿ: ಈಗ ಕೈಗೆತ್ತಿಕೊಂಡಿರುವ ಹೊಸ ಜವಾಬ್ದಾರಿ ಏನು?

Published : Oct 31, 2026, 04:07 PM IST

ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ 'ದಿ ಪ್ರೈಡ್ ಆಫ್ ಭಾರತ್' ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಲಿದ್ದಾರೆ. ಎರಡು ಭಾಗಗಳಲ್ಲಿ ಮೂಡಿಬರಲಿದೆ.

PREV
15
ಮಹಾರಾಜರ ಬಯೋಪಿಕ್

ಎರಡು ಭಾಗಗಳಲ್ಲಿ ಅದ್ದೂರಿಯಾಗಿ ಮೂಡಿಬರಲಿರುವ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ಐತಿಹಾಸಿಕ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೇವಲ ನಾಯಕನಾಗಿ ನಟಿಸುತ್ತಿರುವುದು ಮಾತ್ರವೇ ಅಲ್ಲ, ಜೊತೆಗೆ ಚಿತ್ರದ ಸಹ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.

25
ಯಶ್ ಹಾದಿಯಲ್ಲಿ ರಿಷಬ್

ಈ ಮೂಲಕ ಅವರು ಯಶ್ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಸ್ತುತ ಭರದಿಂದ ಪ್ರೀ-ಪ್ರೊಡಕ್ಷನ್ ಕೆಲಸಗಳು ಸಾಗುತ್ತಿದ್ದು, 2027ರ ಆರಂಭದಲ್ಲೇ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ.

35
ಅಪರೂಪದ ತೈಲವರ್ಣ ಚಿತ್ರ ಉಡುಗೊರೆ

ಈ ಚಿತ್ರವನ್ನು ಟಿ-ಸೀರೀಸ್ ಹಾಗೂ ಲೆಜೆಂಡ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಪ್ರಾಜೆಕ್ಟ್‌ನ ಅಧಿಕೃತ ಘೋಷಣೆ ವೇಳೆ ನಿರ್ಮಾಪಕ ಭೂಷಣ್ ಕುಮಾರ್ ನಟ ರಿಷಬ್ ಶೆಟ್ಟಿಯವರಿಗೆ ಶಿವಾಜಿ ಮಹಾರಾಜರ ಶತಮಾನದಷ್ಟು ಹಳೆಯ ಅಪರೂಪದ ತೈಲವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.

45
ಆಕರ್ಷಕ ವ್ಯಕ್ತಿತ್ವ

ಈ ಸಂದರ್ಭದಲ್ಲಿ ಭೂಷಣ್ ಕುಮಾರ್, ‘ರಿಷಬ್ ಶೆಟ್ಟಿಯವರ ಆಕರ್ಷಕ ವ್ಯಕ್ತಿತ್ವ ಮತ್ತು ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುವ ಅವರ ಅಸಾಧಾರಣ ಸಾಮರ್ಥ್ಯ ಶಿವಾಜಿ ಮಹಾರಾಜರ ಶೌರ್ಯವನ್ನು ತೆರೆಗೆ ತರಲು ಅತ್ಯಂತ ಸೂಕ್ತವಾಗಿದೆ’ ಎಂದಿದ್ದಾರೆ.

55
ನಿರ್ಮಾಣಕ್ಕೂ ಸಾಥ್

ಸಂದೀಪ್ ಸಿಂಗ್ ನಿರ್ದೇಶನ ಮಾಡುತ್ತಿದ್ದು, ರಿಷಬ್ ಶೆಟ್ಟಿ ಜೊತೆಗೆ ಶಿವ್ ಚನಾನಾ ಹಾಗೂ ಕಬೀರ್ ಸದಾನಂದ್ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories