ವಿದೇಶದಲ್ಲಿ ಸೋಮೇಶ್ವರದ ಸುಲೋಚನಾ ಕಮಾಲ್; ಶೇ.160 ಲಾಭ ಗಳಿಸಿದ Su From So

Published : Aug 04, 2025, 01:32 PM IST

ಜೆ.ಪಿ.ತುಮಿನಾಡ್ ಅವರ Su From So ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕೆಜಿಎಫ್ 2 ನಂತರ ಜರ್ಮನಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರವಾಗಿದೆ. ಬುಕ್‌ಮೈಶೋನಲ್ಲಿಯೂ ಅಧಿಕ ಟಿಕೆಟ್ ಮಾರಾಟದ ದಾಖಲೆ ಬರೆದಿದೆ.

PREV
15

ಜೆ.ಪಿ.ತುಮಿನಾಡ್ ನಿರ್ದೇಶಿಸಿ, ನಟಿಸಿರುವ Su From So ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಚಿತ್ರ ಬಿಡುಗಡೆಯಾದ ಎರಡ್ಮೂರು ದಿನಗಳಲ್ಲಿಯೇ ಹಾಕಿದ ಬಂಡವಾಳವೆಲ್ಲಾ ಹಿಂದಿರುಗಿದ್ದು, ಚಿತ್ರತಂಡ ಗೆಲುವಿನ ಖುಷಿಯಲ್ಲಿದೆ. ವಿದೇಶದಲ್ಲಿಯೂ Su From So ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. Su From So ಸಿನಿಮಾ ಬರೆದಿರುವ ದಾಖಲೆ ಮತ್ತು ಬಾಕ್ಸ್ ಆಫಿಸ್ ಕಲೆಕ್ಷನ್ ಎಷ್ಟು ಎಂದು ನೋಡೋಣ ಬನ್ನಿ.

25

ಜರ್ಮನಿಯಲ್ಲಿ ಬಿಡುಗಡೆಯಾದ ಮೊದಲ ವಾರ ಸು ಫ್ರಂ ಸೋಗೆ ಒಳ್ಳೆಯ ಆರಂಭ ಸಿಕ್ಕಿದೆ. ಕೆಜಿಎಫ್‌ 2 ಬಳಿಕ ಅತಿದೊಡ್ಡ ಆರಂಭ ಕಂಡ ಚಿತ್ರವಾಗಿ ಸು ಫ್ರಂ ಸೋ ಹೊರಹೊಮ್ಮಿದೆ. ಮೊದಲ ವಾರಾಂತ್ಯದಲ್ಲಿ €30,000+ ಗಳಿಸಿದ ಮೊದಲ ಕನ್ನಡ ಚಿತ್ರವಾಗಿದೆ. ಮೊದಲ ವಾರಾಂತ್ಯದಲ್ಲಿ (ಶುಕ್ರವಾರ+ಶನಿವಾರ+ಭಾನುವಾರ) 12ಕ್ಕೂ ಅಧಿಕ ಬಾರಿ ಪ್ರದರ್ಶನ ಕಂಡಿದ್ದು, ಹ್ಯಾಂಬರ್ಗ್‌ನಲ್ಲಿ ಕನ್ನಡದ ಸಿನಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

35

ಬುಕ್‌ಮೈಶೋನಲ್ಲಿ ಅತ್ಯಧಿಕ ಟಿಕೆಟ್ ಮಾರಾಟದ ದಾಖಲೆ

ಭಾರತದಲ್ಲಿ 9,000ಕ್ಕೂ ಅಧಿಕ ಪ್ರದರ್ಶನ

ಫಾಸ್ಟ್‌ ಫಿಲ್ಲಿಂಗ್ ಸಿನಿಮಾ: 4500 ಕ್ಕೂ ಅಧಿಕ ಶೋ

ಮೊದಲ ವಾರದಲ್ಲಿ 774.88K ಟಿಕೆಟ್ ಸೇಲ್

ಬುಕ್‌ಮೈಶೋನಲ್ಲಿಯೇ 10 ಲಕ್ಷಕ್ಕೂ ಅಧಿಕ ಟಿಕೆಟ್‌ಗಳ ಮಾರಾಟ

45

ಬುಕ್‌ಮೈಶೋದಲ್ಲಿ ಟಿಕೆಟ್ ಮಾರಾಟವಾದ ಅಂಕಿಅಂಶಗಳ ಪ್ರಕಾರ, ಸೋಮೇಶ್ವರದ ಸುಲೇಚನಾ ಖಾತೆಗೆ 79 ಕೋಟಿ ರೂಪಾಯಿಗೂ ಅಧಿಕ ಜಮೆಯಾಗಿದೆ. ಕೆಲ ವರದಿಗಳ ಪ್ರಕಾರ, Su From So ಸಿನಿಮಾ 4 ರಿಂದ 5 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಈ ಸಿನಿಮಾಗೆ ರಾಜ್‌ ಬಿ ಶೆಟ್ಟಿ, ರವಿ ರೈ ಕಳಸ ಮತ್ತು ಶಶಿಧರ್ ಶೆಟ್ಟಿ ಬರೋಡಾ ಜಂಟಿಯಾಗಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ನಿರ್ಮಾಣದ ಜೊತೆಯಲ್ಲಿ ರಾಜ್ ಬಿ ಶೆಟ್ಟಿ ಅವರು ಕರುಣಾಕರ್ ಗುರೂಜಿಯಾಗಿ ನಟಿಸಿ

55

Su From So ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ವಾರ ಬಿಡುಗಡೆಯಾಗಿದ್ದ ನಾಲ್ಕು ಸಿನಿಮಾಗಳು ಮುಂದೂಡಿಕೆಯಾಗಿವೆ. ಕಮರಟ್ಟು 2, ಲವ್ ಮ್ಯಾಟೇರ್ರು, ನಾನ್‌ ವೆಜ್ ಮತ್ತು ನಮೋ ವೆಂಕಟೇಶ್‌ ಸಿನಿಮಾಗಳ ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories