ರಶ್ಮಿಕಾ ಮಂದಣ್ಣ ಅವರ ಹಿಂದಿ ಉಚ್ಛಾರಣೆಯನ್ನು ಟೀಕಿಸುವವರ ವಿರುದ್ಧ ಬಾಲಿವುಡ್ ಹಿರಿಯ ಕಥೆಗಾರ ಜಾವೇದ್ ಅಖ್ತರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಷಾ ಶ್ರೇಷ್ಠತೆಯ ಅಹಂಕಾರ ಸರಿಯಲ್ಲ ಎಂದು ಅವರು ಟ್ರೋಲಿಗರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಏನದು ವಿವಾದ ಇಲ್ಲಿ ತಿಳಿಯಿರಿ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿಲ್ಲ; ಬಾಲಿವುಡ್‌ನಲ್ಲೂ ಸ್ಟಾರ್ ನಟರ ಜೊತೆ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಆದರೆ, ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ಮಾತನಾಡುವ ಹಿಂದಿ ಉಚ್ಛಾರಣೆ (Accent) ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಟೀಕೆಗಳು, ಟ್ರೋಲ್‌ಗಳು ಕೇಳಿಬರುತ್ತಲೇ ಇರುತ್ತವೆ.
ಇದೀಗ ಈ ವಿಚಾರವಾಗಿ ನಟಿ ರಶ್ಮಿಕಾ ಮಂದಣ್ಣ ಪರವಾಗಿ ಬಾಲಿವುಡ್‌ನ ಹಿರಿಯ ಚಿತ್ರಸಾಹಿತಿ ಹಾಗೂ ಕಥೆಗಾರ ಜಾವೇದ್ ಅಖ್ತರ್ (Javed Akhtar) ಧ್ವನಿ ಎತ್ತಿದ್ದಾರೆ. ಹಿಂದಿ ಭಾಷಾ ಶ್ರೇಷ್ಠತೆಯ ಗುಂಗಿನಲ್ಲಿರುವವರಿಗೆ ಖಡಕ್ ಆಗಿ ತಪರಾಕಿ ಹಾಕಿದ್ದಾರೆ.
25
ಟ್ರೋಲರ್ಸ್‌ಗೆ ಜಾವೇದ್ ಅಖ್ತರ್ ನೀಡಿದ ಖಡಕ್ ತಿರುಗೇಟು ಏನು?
ರಶ್ಮಿಕಾ ಅವರ ಹಿಂದಿ ಸಂಭಾಷಣೆಯನ್ನು ಅಣಕಿಸುವವರ ವಿರುದ್ಧ 'X' (ಟ್ವಿಟರ್) ಖಾತೆಯಲ್ಲಿ ಸಿಡಿದೆದ್ದಿರುವ ಜಾವೇದ್ ಅಖ್ತರ್, ‘ರಶ್ಮಿಕಾ ಅವರ ಉಚ್ಛಾರಣೆಯಲ್ಲಿ ತಪ್ಪು ಹುಡುಕುವವರಿಗೆ, ವಿಶ್ವದ ಅತ್ಯಂತ ಹಳೆಯ ಆಡುಭಾಷೆಯಾದ ತಮಿಳಿನ ಕೆಲವೇ ಕೆಲವು ಸಾಲುಗಳನ್ನು ಮಾತನಾಡಲು ಕೊಡಿ; ನೋಡೋಣ ಅವರು ಹೇಗೆ ಉಚ್ಛರಿಸುತ್ತಾರೆಂದು! ಈ ನಕಲಿ ಮತ್ತು ಆಧಾರರಹಿತ ಭಾಷಾ ಶ್ರೇಷ್ಠತೆಯ ಅಹಂಕಾರವನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಮಾತೃಭಾಷೆಯಲ್ಲದ ಭಾಷೆಯೊಂದನ್ನು ಕಲಿತು, ಅದರಲ್ಲಿ ಸ್ವತಃ ಡಬ್ಬಿಂಗ್ ಮಾಡಿ ನಟಿಸುವಾಗ ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳದೆ, ಕೇವಲ ಪ್ರಾದೇಶಿಕ ಆಕ್ಸೆಂಟ್ ಅನ್ನು ಗುರಿಯಾಗಿಸಿಕೊಂಡು ಟೀಕಿಸುವುದು ಅನ್ಯಾಯ ಎಂದು ಜಾವೇದ್ ಅಖ್ತರ್ ಬಲವಾಗಿ ಪ್ರತಿಪಾದಿಸಿದ್ದಾರೆ.
Those who have any problem with the pronounciation of Tamil actor Rashmika should be given a few lines of Tamil which is the oldest spoken language in the world and let’s see how well they pronounce Tamil . This fake and baseless linguistic superiority is not acceptable.
— Javed Akhtar (@Javedakhtarjadu) October 25, 2026
35
'ನಾನು ಸೌತ್ ಇಂಡಿಯನ್, ಆಕ್ಸೆಂಟ್ ಇದ್ದೇ ಇರುತ್ತೆ': ರಶ್ಮಿಕಾ ನೇರ ಮಾತು
ಇತ್ತೀಚೆಗೆ ಜನಪ್ರಿಯ ಚಾಟ್ ಶೋ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ, ತಮ್ಮ ಹಿಂದಿ ಉಚ್ಛಾರಣೆ ಮೇಲಿನ ಟೀಕೆಗಳ ಬಗ್ಗೆ ಮಾತನಾಡಿದ್ದರು. 'ನನ್ನ ಹಿಂದಿ ಮಾತಿನಲ್ಲಿ ದಕ್ಷಿಣ ಭಾರತೀಯ ಆಕ್ಸೆಂಟ್ ಇದೆ ಎಂದು ಹಲವರು ಹೇಳುತ್ತಾರೆ. ಆದರೆ ನಾನೊಬ್ಬ ದಕ್ಷಿಣ ಭಾರತದವಳು. ಹಾಗಾಗಿ ನನ್ನ ಮಾತಿನಲ್ಲಿ ಆ ಪ್ರಭಾವ (South Indian Accent) ಇರುವುದು ಸಹಜ. ಅದಿಲ್ಲದೆ ಬೇರೆ ರೀತಿ ಇರಲು ಹೇಗೆ ಸಾಧ್ಯ? ಇದನ್ನು ಸಮಸ್ಯೆಯೆಂದು ನೋಡುವುದೇ ತಪ್ಪು' ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದರು.
'ಅನಿಮಲ್', 'ಚಾವಾ', 'ಸಿಕಂದರ್', 'ಥಮ್ಮಾ' ಮುಂತಾದ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ, ತಮ್ಮ ಸಿನಿಮಾಗಳಿಗೆ ತಾವೇ ಡಬ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.
'ನಾನು ನನ್ನ ನಿರ್ದೇಶಕರಿಗೆ ಯಾವಾಗಲೂ ಬೇರೆ ಡಬ್ಬಿಂಗ್ ಕಲಾವಿದರನ್ನು ಬಳಸಿಕೊಳ್ಳುವ ಆಯ್ಕೆ ನೀಡುತ್ತೇನೆ. ಆದರೆ, ನಿರ್ದೇಶಕರು ನನ್ನ ನೈಜ ಧ್ವನಿಯನ್ನೇ ಇಷ್ಟಪಟ್ಟು ನನ್ನಿಂದಲೇ ಡಬ್ ಮಾಡಿಸುತ್ತಾರೆ.
‘ವಿಭಿನ್ನ ಭಾಷೆಗಳಿಗೆ ನನ್ನ ಸ್ವಂತ ಧ್ವನಿಯಲ್ಲಿ ಡಬ್ ಮಾಡುವುದು ನನಗೆ ಹೆಮ್ಮೆಯ ವಿಷಯ. ಟ್ರೋಲ್‌ಗಳಿಗೆ ಹೆದರಿ ನಾನೆಂದೂ ಒಂದು ಭಾಷೆಯ ಗಡಿಗೆ ಸೀಮಿತವಾಗುವುದಿಲ್ಲ; ಎಲ್ಲ ಭಾಷೆಗಳಲ್ಲೂ ನಟಿಸುತ್ತೇನೆ’ ಎಂದು ರಶ್ಮಿಕಾ ಆತ್ಮವಿಶ್ವಾಸದಿಂದ ಹೇಳಿದ್ದಾರೆ.
55
ಜಾವೇದ್ ಅಖ್ತರ್ ನಿರ್ಧಾರಕ್ಕೆ ಪರ-ವಿರೋಧ
ರಶ್ಮಿಕಾ ಮಂದಣ್ಣ ಅವರ ಈ ಸ್ಪಷ್ಟ ನಿಲುವು ಹಾಗೂ ಜಾವೇದ್ ಅಖ್ತರ್ ಅವರ ಬೆಂಬಲವೀಗ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಬಹುಭಾಷಾ ಕಲಾವಿದರಿಗೆ ಸಿಗಬೇಕಾದ ಗೌರವದ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.