ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್ಎಸ್ಎಸ್ ಮುಖಂಡ ಮೋಹನ ಭಾಗವತ ಅವರು ಹೇಳಿರುವ ಮಾತಿನ ಬೆನ್ನಲ್ಲೇ ನಟಿ ಜಾಹ್ನವಿ ಕಪೂರ್ ತಮಗೂ ಮೂವರು ಮಕ್ಕಳು ಬೇಕು ಎಂದಿದ್ದಾರೆ. ಆದರೆ ಅವರು ಕೊಟ್ಟ ಕಾರಣವೇ ಬೇರೆ. ಏನದು?
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸದ್ಯ ಪರಮ್ ಸುಂದರಿ (Param Sundari) ಸಿನಿಮಾ ಸಂಭ್ರಮದಲ್ಲಿದ್ದಾರೆ. ದೆಹಲಿಯ ಡೇಟಾ ಆಧರಿತ ಉದ್ಯಮಿ ಪರಮ್ ಕಥೆಯಿಂದ ಚಿತ್ರ ಆರಂಭವಾಗುತ್ತದೆ. ಪ್ರೀತಿಯನ್ನೂ ಲೆಕ್ಕಾಚಾರದಂತೆ ನೋಡುವ ಪರಮ್, ಜನರಿಗೆ ಆ್ಯಪ್ ಮೂಲಕ ಸಂಗಾತಿ ಹುಡುಕಲು ಸಹಾಯ ಮಾಡುವ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಾನೆ. ಪರಮ್ ತಂದೆ ಒಂದು ತಿಂಗಳೊಳಗೆ ಆ್ಯಪ್ ಬಳಸಿ ನಿಜವಾದ ಪ್ರೀತಿ ಹುಡುಕುವಂತೆ ಸವಾಲು ಹಾಕುತ್ತಾರೆ. ಸವಾಲು ಸ್ವೀಕರಿಸಿದ ಪರಮ್, ಸಂಪ್ರದಾಯಸ್ಥ ದಕ್ಷಿಣ ಭಾರತದ ಹುಡುಗಿ ಸುಂದರಿಯನ್ನು ಭೇಟಿಯಾಗುತ್ತಾನೆ. ಅಲ್ಲಿಂದ ಏನಾಗುತ್ತದೆ ಎನ್ನುವುದು ಚಿತ್ರದ ಕಥೆ.
26
ಮೂವರು ಮಕ್ಕಳು ಬೇಕೆಂದ ನಟಿ
ಚಿತ್ರದ ಕಥೆ ಏನೇ ಇರಲಿ, ಸದ್ಯ ನಟಿ ಜಾಹ್ನವಿ ಕಪೂರ್ ತಮಗೆ ಎಷ್ಟು ಮಕ್ಕಳು ಬೇಕು ಎನ್ನುವ ಬಗ್ಗೆ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಅವರು ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಎ ಕಾಣಿಸಿಕೊಂಡಿದ್ದರು. 'ಪರಮ್ ಸುಂದರಿ'ಯ ಪ್ರಚಾರಕ್ಕಾಗಿ ಅವರು ಈ ಷೋಗೆ ಬಂದಿದ್ದರು.
36
ವೈಯಕ್ತಿಕ ವಿಷಯ ಬಹಿರಂಗ
ಆ ಸಂದರ್ಭದಲ್ಲಿ ಅವರು, ವೈಯಕ್ತಿಕವಾಗಿ ಒಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರಾಮಾಣಿಕ ಮತ್ತು ತಮಾಷೆಯ ಸ್ವಭಾವಕ್ಕೆ ಹೆಸರುವಾಸಿಯಾದ ನಟಿ, ಭವಿಷ್ಯದಲ್ಲಿ ಮೂರು ಮಕ್ಕಳನ್ನು ಹೊಂದುವ ಬಯಕೆಯ ಬಗ್ಗೆ ಮಾತನಾಡಿದ್ದಾರೆ.ತಮಗೆ ಮೂವರು ಮಕ್ಕಳು ಬೇಕು ಎಂದು ಹೇಳಿದ್ದಾರೆ.
ಕಪಿಲ್ ಶರ್ಮಾ ಅವರು ಎಷ್ಟು ಮಕ್ಕಳನ್ನು ಹೊಂದಲು ಬಯಸುತ್ತಾರೆ ಎಂದು ಕೇಳಿದಾಗ, ಜಾಹ್ನವಿ "ಮೂರು" ಎಂದು ಉತ್ತರಿಸಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಅದೇನೆಂದರೆ ಮೂರು ಸಂಖ್ಯೆ ನನಗೆ ಲಕ್ಕಿ ನಂಬರ್. ಎರಡನೆಯದ್ದಾಗಿ ಇಬ್ಬರು ಮಕ್ಕಳು ಇದ್ದರೆ ತುಂಬಾ ಜಗಳವಾಡುತ್ತಾರೆ. ಆಗ ಇಬ್ಬರಲ್ಲಿ ಒಬ್ಬರ ಪರ ನಾನು ಅಮ್ಮನಾಗಿ ಹೋಗಬೇಕಾಗುತ್ತದೆ. ಅದಕ್ಕಾಗಿ ಮೂರನೆಯ ಮಗುವಿನ ಪರ ನಿಂತುಬಿಟ್ಟರೆ, ಆ ಇಬ್ಬರು ಜಗಳ ನಿಲ್ಲಿಸುತ್ತಾರೆ ಎಂದಿದ್ದಾರೆ.
56
ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಸುರಿಮಳೆ
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಇತ್ತೀಚಿಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ ಅವರು, ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು ಎಂದಿದ್ದರು. ಮೂರಕ್ಕಿಂತ ಕಡಿಮೆ ಜನನದರ (Birth Rate) ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿಹೋಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ದೇಶಗಳಲ್ಲೂ ಈ ಪ್ರಕ್ರಿಯೆ ಸಹಜ. ಆದ್ದರಿಂದ ಮೂರಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.
66
ಮೂವರು ಮಕ್ಕಳು ಟ್ರೆಂಡಿಂಗ್ನಲ್ಲಿ
ಇದೀಗ ಜಾಹ್ನವಿ ಕಪೂರ್ ಕೂಡ ತಮ್ಮ ಬೇರೆಯ ರೀತಿಯ ವಿಚಾರಧಾರೆಯನ್ನು ಹರಿದುಬಿಟ್ಟಿದ್ದು ಮೂವರು ಮಕ್ಕಳು ಬೇಕು ಎಂದಿರುವ ಕಾರಣಕ್ಕೆ ಮೋಹನ ಭಾಗವತ ಅವರ ವಿಷಯಕ್ಕೆ ಲಿಂಕ್ ಮಾಡಲಾಗುತ್ತಿದೆ. ಹಲವರು ನಟಿ ಹೇಳಿದ್ದು ನಿಜ ಎಂದಿದ್ದಾರೆ.