ಸ್ಟಾರ್‌ ಹೀರೋಗಳ ಜೊತೆ ನಟಿಸಿ, UK ಕಂಪೆನಿಗೆ ಡೈರೆಕ್ಟರ್‌ ಆದ ನಟ ದರ್ಶನ್‌ ಸಿನಿಮಾ ಹೀರೋಯಿನ್!‌ ಯಾರದು?

Published : Feb 23, 2026, 09:46 PM IST

ದರ್ಶನ್‌ ತೂಗುದೀಪ ನಟನೆಯ ಜಗ್ಗುದಾದ ಸಿನಿಮಾ ಹೀರೋಯಿನ್‌ ದೀಕ್ಷಾ ಸೇಠ್‌ಗೆ ನಟಿಯಾಗುವ ಯಾವ ಆಸೆಯೂ ಇರಲಿಲ್ಲ. ಚೆನ್ನೈ, ಮುಂಬೈ, ಕೋಲ್ಕತ್ತಾ, ಕಠ್ಮಂಡು, ರಾಜಸ್ಥಾನ, ಗುಜರಾತ್‌ ಹೀಗೆ ತಂದೆ ಉದ್ಯೋಗದ ಸ್ಥಳ ಬದಲಾದಂತೆ ದೀಕ್ಷಾ ಕೂಡ ಇಷ್ಟೆಲ್ಲ ನಗರಗಳಲ್ಲಿ ವಾಸ ಮಾಡಲು ಆರಂಭಿಸಿದರು. 

PREV
14
ದೀಕ್ಷಾ ಸೇಠ್‌ ಆಸೆ ಏನಾಗಿತ್ತು?

ದೀಕ್ಷಾ ಸೇಠ್‌ ಕುಟುಂಬವು ಎಲ್ಲಿಯೂ ಸೆಟಲ್‌ ಆಗಿರಲಿಲ್ಲ. ಆದರೆ ಮುಂಬೈಗೆ ಬರುವಾಗ ಅವರು Marine Archaeology ಓದಬೇಕು ಎಂದು ಡಿಸೈಡ್‌ ಆಗಿದ್ದರು. ಸಾಗರ ತಳ, ಪ್ರಾಚೀನ ಹಡಗು ನಾಶಗಳು, ನೀರಿನ ಅಡಿಯಲ್ಲಿ ಹೂತುಹೋದ ಇತಿಹಾಸ ಓದುವುದು ಯೋಜನೆಯಾಗಿತ್ತು.

24
ಸಿನಿಮಾ ಆಫರ್‌ ಬಂತು

femina miss india pageant ಸ್ಪರ್ಧೆಯಲ್ಲಿ ದೀಕ್ಷಾ ಸೇಠ್‌ ಅವರು ಫ್ರೆಶ್‌ ಟೈಟಲ್‌ ಫೇಸ್‌ ಎಂಬ ಬಿರುದು ಪಡೆದರು. ಆ ನಂತರ ನಿರ್ದೇಶಕರೊಬ್ಬರು ದೀಕ್ಷಾ ಅವರಿಗೆ ಸಿನಿಮಾ ಆಫರ್‌ ಕೊಟ್ಟರು, ಅದೇ ವೇದಂ ಸಿನಿಮಾ.

34
ಬೇಡಿಕೆಯ ನಟಿಯಾದರು

ವೇದಂ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಅವರ ಗರ್ಲ್‌ಫ್ರೆಂಡ್‌ ಸಿನಿಮಾದಲ್ಲಿ ಅವರು ಹೀರೋಯಿನ್‌ ಆಗಿದ್ದರು. ಗೋಪಿಚಂದ್‌, ರವಿತೇಜ, ಪ್ರಭಾಸ್‌ ಸಿನಿಮಾಗಳಲ್ಲಿ ಅವರು ನಾಯಕಿಯಾಗಿ ನಟಿಸಿದರು. ನಾಲ್ಕು ಭಾಷೆಗಳಲ್ಲಿ ಹತ್ತು ಸಿನಿಮಾಗಳಲ್ಲಿ ಅವರು ಹೀರೋಯಿನ್‌ ಆದರು. ಅಷ್ಟೇ ಅಲ್ಲದೆ ಸಾಕಷ್ಟು ಬ್ರ್ಯಾಂಡ್‌ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡರು, ಸಾಕಷ್ಟು ಸಂದರ್ಶನಗಳನ್ನು ಕೂಡ ನೀಡಿದರು.

44
ಕಾರ್ಪೋರೇಟ್‌ ಕಂಪೆನಿಯಲ್ಲಿ ಕೆಲಸ

IESE ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಅವರು ಎಂಬಿಎ ಮುಗಿಸಿದ್ದರು. ಗೇಮಿಂಗ್‌ ಕಂಪೆನಿಯೊಂದರಲ್ಲಿ ಅವರು ಪ್ರತಿಷ್ಠಿತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಹತ್ತು ಸಿನಿಮಾಗಳು ಆಗಿನ ಕಾಲಕ್ಕೆ ಐದು ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದ್ದು, ಈಗ ಅವರು ಕಾರ್ಪೋರೇಟ್‌ ಕಂಪೆನಿಯಲ್ಲಿ ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories