ಇಮ್ರಾನ್ ಹಶ್ಮಿಗಿಂತ ಆ ಹಾವು ಚೆನ್ನಾಗಿತ್ತು: ಸಂಚಲನ ಸೃಷ್ಟಿಸಿದ ಮಲ್ಲಿಕಾ ಶೆರಾವತ್

Published : Oct 21, 2026, 10:58 AM IST

ಕಾಫಿ ವಿಥ್ ಕರಣ್ ಶೋನಲ್ಲಿ ಇಮ್ರಾನ್ ಹಶ್ಮಿ ಅವರು ಮಲ್ಲಿಕಾ ಶೆರಾವತ್ ಅವರನ್ನು ಬ್ಯಾಡ್ ಕಿಸ್ಸರ್ ಎಂದು ಜರಿದಿದ್ದರು. ಇದಕ್ಕೆ ತಿರುಗೇಟು ನೀಡಿದ ಮಲ್ಲಿಕಾ, ಇಮ್ರಾನ್‌ಗಿಂತ ಹಾವು ಉತ್ತಮ ಕಿಸ್ಸರ್ ಎಂದು ವ್ಯಂಗ್ಯವಾಡಿದ್ದಾರೆ.

PREV
15
ಮಲ್ಲಿಕಾ ಹೇಳಿಕೆ

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಾಲಿವುಡ್ ನಟ ಇಮ್ರಾನ್ ಹಶ್ಮಿ ಹೇಳಿಕೆಗೆ ಮಲ್ಲಿಕಾ ಶೆರಾವತ್ ತಿರುಗೇಟು ನೀಡಿದ್ದರು. ಕಾಫಿ ವಿಥ್ ಕರಣ್ ಜೋಹರ್ ಶೋನಲ್ಲಿ ಇಮ್ರಾನ್ ಹಶ್ಮಿ ಮತ್ತು ಮಹೇಶ್ ಭಟ್ ಜೊತೆಯಾಗಿ ಭಾಗಿಯಾಗಿದ್ದರು. ಈ ವೇಳೆ ಮಲ್ಲಿಕಾ ಶೆರಾವತ್ ಬಗ್ಗೆ ಇಮ್ರಾನ್ ಹಶ್ಮಿ ಮಾತನಾಡಿದ್ದರು.

25
ಮಲ್ಲಿಕಾ ಶೆರಾವತ್ ಬ್ಯಾಡ್ ಕಿಸ್ಸರ್

ಈ ಶೋನಲ್ಲಿ ಇಮ್ರಾನ್ ಹಶ್ಮಿ ಅವರಿಗೆ ಆನ್‌ಸ್ಕ್ರೀನ್ ಕಿಸ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್, ಮರ್ಡರ್ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ಜೊತೆಗಿನ ದೃಶ್ಯಗಳು ಕೆಟ್ಟ ಅನುಭವವನ್ನು ನೀಡಿದೆ. ನನ್ನ ಪ್ರಕಾರ, ಮಲ್ಲಿಕಾ ಬ್ಯಾಡ್ ಕ್ಯಾನ್ಸರ್ ಎಂದು ಹೇಳಿದ್ದ

35
ಜಾಕ್ವೆಲಿನ್ ಜೊತೆಗಿನ ಕೆಮಿಸ್ಟ್ರಿ

ಮುಂದುವರಿದು ಮಾತನಾಡಿದ ಇಮ್ರಾನ್, ಮರ್ಡರ್-2 ಸಿನಿಮಾದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ಒಳ್ಳೆಯ ಚುಂಬನಗಳು ಸಿಕ್ಕಿವೆ ಎಂದರು. ಇದೇ ವೇಳೆ ಮಲ್ಲಿಕಾ ಶೆರಾವತ್ ಬೆಡ್‌ರೂಮ್‌ನಲ್ಲಿ ಏನು ಸಿಗಬಹುದು ಎಂದು ಕೇಳಿದರು. ಇದಕ್ಕೆ " An Idiots Guide To succeed In Hollywood" ಎಂಬ ಪುಸ್ತಕ ಸಿಗಬಹುದು ಎಂದು ವ್ಯಂಗ್ಯ ಮಾಡಿದ್ದರು. ಈ ಸಮಯದಲ್ಲಿ ಮಲ್ಲಿಕಾ ಶೆರಾವತ್, ಹಾಲಿವುಡ್‌ನಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದರು.

45
ಹಾವಿನ ಜೊತೆಗಿನ ಕಿಸ್ ಚೆನ್ನಾಗಿತ್ತು !

ಇಮ್ರಾನ್ ಹಶ್ಮಿ ಅವರ ಹೇಳಿಕೆಗಳಿಗೆ ಮಲ್ಲಿಕಾ ಶೆರಾವತ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಕಿಸ್ ಕೊಡೋದರಲ್ಲಿ ಇಮ್ರಾನ್‌ ಹಶ್ಮಿಗಿಂತ ಹಾವು ಚೆನ್ನಾಗಿತ್ತು ಎಂದಿದ್ದರು. ಮಲ್ಲಿಕಾ ಶೆರಾವತ್, ಹಿಸ್ ಸಿನಿಮಾದಲ್ಲಿ ಹಾವಿನೊಂದಿಗೆ ರೊಮ್ಯಾನ್ಸ್ ಮಾಡುತ್ತಾರೆ. ಹಾವು ಒಳ್ಳೆಯ ಕಿಸ್ಸರ್ ಎಂದು ಇಮ್ರಾನ್‌ಗೆ ಟಾಂಗ್ ನೀಡಿದ್ದರು.

55
ಮರ್ಡರ್ ಸಿನಿಮಾ

2004ರಲ್ಲಿ ಬಿಡುಗಡೆಗೊಂಡ ಮರ್ಡರ್ ಸಿನಿಮಾ ಭಾರತೀಯ ಸಿನಿ ಅಂಗಳದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಚಿತ್ರದಲ್ಲಿನ ಇಮ್ರಾನ್ ಮತ್ತು ಮಲ್ಲಿಕಾ ಶೆರಾವತ್ ಕೆಮಿಸ್ಟ್ರಿ ನಿರ್ಮಾಪಕರ ಜೇಬು ತುಂಬಿಸಿತ್ತು. ಕೇವಲ 5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 25 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories