ವಲಸೆ ಕಾರ್ಮಿಕರ ಬಂಧು ನಟ ಸೋನು ಸೂದ್ ಅಪಾರ್ಟ್‌ಮೆಂಟ್ ಹೀಗಿದೆ ನೋಡಿ
First Published | Jul 29, 2020, 8:28 PM ISTಜುಲೈ 30 ರಂದು ಸೋನು ಸೂದ್‌ಗೆ 47 ವರ್ಷದ ಹುಟ್ಟುಹಬ್ಬ. ನಟ ಸೋನು ಸೂದ್ 1973ರಲ್ಲಿ ಪಂಜಾಬ್‌ನಲ್ಲಿ ಜನಿಸಿದ್ದರು. ಬಾಲಿವುಡ್ ಮಾತ್ರವಲಲ್ಲ ದಕ್ಷಿಣ ಭಾರತದ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸೋನು ಸೂದ್ ಸದ್ಯ ಭಾರೀ ಚರ್ಚೆಯಲ್ಲಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಅವರು ವಲಸೆ ಕಾರ್ಮಿಕರನ್ನು ಅವರ ಮನೆಗೆ ತಲುಪಿಸುವಲ್ಲಿ ಬಹಳಷ್ಟು ಪರಿಶ್ರಮ ವಹಿಸಿದ್ದರು. ಇಷ್ಟೇ ಅಲ್ಲ, ಈಗಲೂ ಬಡವರು, ಅನಾಥರು ಹಾಗೂ ಕಾರ್ಮಿಕರಿಗೆ ಸಹಾಯ ಮಾಡುವುದನ್ನು ಮುಂದುವರೆಸಿದ್ದಾರೆ. ದಕ್ಷಿಣ ಭಾರತ ಸಿನಿಮಾಗಳಿಂದ ಫಿಲಂ ದುನಿಯಾಗೆ ಎಂಟ್ರಿ ಕೊಟ್ಟ ಸೋನು ಸೂದ್ ದಬಂಗ್, ಜೊಧಾ ಅಕ್ಬರ್, ಸಿಂಗ್ ಈಸ್ ಕಿಂಗ್, ಏಕ್ ವಿವಾಹ್ ಐಸಾ ಭೀ, ಹ್ಯಾಪಿ ನ್ಯೂ ಇಯರ್, ರಾಜ್‌ಕುಮಾರ್, ಸಿಂಬಾ ಮೊದಲಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಅಕ್ಷಯ ಕುಮಾರ್‌ರವರ ಪೃಥ್ವಿರಾಜ್ ಸಿನಿಮಾದಲ್ಲೂ ನಟಿಸಲಿದ್ದಾರೆ. ಇಂತಹ ನಟನ ಮನೆ, ಅಪಾರ್ಟ್‌ಮೆಂಟ್ ಹೇಗಿದೆ? ಇಲ್ಲಿದೆ ನೋಡಿ ಕೆಲ ಫೋಟೋಸ್.