ಮಾಜಿ ಪತಿಗೆ ಮಲೈಕಾರ ಖಾಸಗಿ ವಿಷಯ ಲೀಕ್‌ ಮಾಡಿದ್ದು ಇವರಂತೆ!

First Published | Jul 29, 2020, 6:18 PM IST

ಮಲೈಕಾ ಅರೋರಾ ಒಂದಲ್ಲ ಒಂದು ವಿಷಯಕ್ಕೆ ಯಾವಾಗಲೂ ಲೈಮ್‌ಲೈಟ್‌ನಲ್ಲಿರುತ್ತಾರೆ. ಈಗ ಮತ್ತೆ ಈ ಹಾಟ್‌ ನಟಿಯ ವಿಷಯ ಬಿ ಟೌನ್‌ನಲ್ಲಿ ಚರ್ಚೆಯಾಗುತ್ತಿದೆ. ಈ ಸಾರಿ ಮಲೈಕಾ ತನ್ನ ಡ್ರೈವರ್‌ ಕಾರಣದಿಂದ ಸುದ್ದಿಯಾಗಿದ್ದಾರೆ. ಚಾಲಕ ಮುಖೇಶ್ ತನ್ನ ಮತ್ತು ಅರ್ಜುನ್ ಕಪೂರ್ ಬಗ್ಗೆ ಖಾಸಗಿ ಮಾಹಿತಿಯನ್ನು ತನ್ನ ಸಹೋದರ ಬಾಬ್ಲೂ ಅಂದರೆ ಅರ್ಬಾಜ್ ಖಾನ್ ಡ್ರೈವರ್‌ಗೆ ಲೀಕ್‌  ಮಾಡಿದ್ದಾನೆ ಎಂದು ವರದಿಯಾಗಿದೆ.

ಮಲೈಕಾ ಅರೋರಾ ಚಾಲಕ ಮುಖೇಶ್ ಅರ್ಜುನ್ ಕಪೂರ್‌ನೊಂದಿಗಿನ ಸಂಬಂಧದ ಬಗ್ಗೆ ಅರ್ಬಾಜ್ ಖಾನ್‌ನ ಚಾಲಕನಾಗಿದ್ದ ಬಬ್ಲೂಗೆ ಲೀಕ್‌ ಮಾಡಿದ್ದನೆಂದು ಆರೋಪಿಸಿದ್ದರು.
undefined
ಮಲೈಕಾ ಮತ್ತು ಅರ್ಜುನ್‌ರ ಪರಸ್ಪರ ಪ್ರೀತಿ ಕಳೆದ ವರ್ಷಬಹಿರಂಗವಾಯಿತು. ಅರ್ಜುನ್‌ಗೆ ಈ ದಿವಾ ತುಟಿಯೊತ್ತಿದ್ದು, ರೋಮ್ಯಾಂಟಿಕ್ ಡಿನ್ನರ್‌ ನಂತರ ಕೈ ಹಿಡಿದು ಹೊರಬಂದಾಗ ಪಾಪರಾಜಿಗಳ ಕ್ಯಾಮೆರಾ ಅನೇಕ ಸ್ಥಳಗಳಲ್ಲಿಈ ಕಪಲ್ ಅ‌ನ್ನು ಅನುಸರಿಸುತ್ತಿದೆ.
undefined
Tap to resize

ಇಬ್ಬರೂ ತಮ್ಮ ವಯಸ್ಸಿನ ಅಂತರದಿಂದ ಭಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ, ಆದರೆ ಅರ್ಜುನ್ ಮತ್ತು ಮಲೈಕಾ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ.
undefined
ಅರ್ಜುನ್ ಮತ್ತು ಮಲೈಕಾ ನಡುವೆ ಹೆಚ್ಚುತ್ತಿರುವ ಕ್ಲೋಸ್‌ನೆಸ್‌ ಬಗ್ಗೆ ಸಲ್ಮಾನ್ ಖಾನ್ ಮತ್ತು ಬೋನಿ ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
undefined
ಸ್ಪಾಟ್‌ಬಾಯ್ ಪ್ರಕಾರ, ಅರ್ಜುನ್ ಜೊತೆ ರಿಲೆಷನ್‌ಶಿಪ್‌ ಬಗ್ಗೆ ಖಾಸಗಿ ಮಾಹಿತಿಯನ್ನು ತನ್ನ ಸಹೋದರ ಬಾಬ್ಲೂಗೆ ಬಾಯಿ ಬಿಟ್ಟಿದ್ದಕ್ಕಾಗಿ ಮುಖೇಶ್‌ನನ್ನು ಅನುಮಾನಿಸಿದ್ದರಂತೆ. ಮಲೈಕಾರ ಡ್ರೈವರ್‌ ಮುಖೇಶ್ ಮತ್ತು ಅರ್ಬಾಜ್ ಖಾನ್‌ ಡ್ರೈವರ್‌ ಬಾಬ್ಲೂ ಸಹೋದರರಂತೆ.
undefined
ಮುಖೇಶ್ ಮಲೈಕಾರ ಚಾಲಕರಾಗಿದ್ದರು ಮತ್ತು ಬಾಬ್ಲೂ ಅರ್ಬಾಜ್ಗಾಗಿ ಡ್ರೈವರ್‌ ಕೆಲಸ ಮಾಡುತ್ತಿದ್ದರು. ಇಬ್ಬರು ಚಾಲಕರು ದಂಪತಿ ಬೇರ್ಪಟ್ಟ ನಂತರವೂ ಕೆಲಸ ಮುಂದುವರಿಸಿದರು.
undefined
ಅರ್ಬಾಜ್‌ಗಾಗಿ ಕೆಲಸ ಮಾಡುತ್ತಿರುವ ತನ್ನ ಸಹೋದರನಿಗೆ ತನ್ನ ಖಾಸಗಿ ಜೀವನದ ಮಾಹಿತಿಯನ್ನು ಬಹಿರಂಗ ಪಡಿಸುವುದನ್ನು ನಿಲ್ಲಿಸುವಂತೆ ಮಲೈಕಾ ಮುಖೇಶ್‌ಗೆ ಎಚ್ಚರಿಕೆ ನೀಡಿದ್ದರಂತೆ.
undefined
ಅನಿಲ್ ಕಪೂರ್, ಸಂಜಯ್ ಕಪೂರ್ ಮತ್ತು ಸಹೋದರಿ ಜಾನ್ವಿ ಅರ್ಜುನ್-ಮಲೈಕಾ ರಿಲೆಷನ್‌ಶಿಪ್‌ನಿಂದ ಸಂತೋಷವಾಗಿದ್ದರೆ, ತಂದೆ ಬೋನಿ, ಸಹೋದರಿಯರಾದ ಅನ್ಶುಲಾ ಮತ್ತು ಸೋನಮ್ ಕಪೂರ್ ವಿರೋಧ ವ್ಯಕ್ತಪಡಿಸಿದ್ದಾರೆ.
undefined

Latest Videos

click me!