Published : Nov 21, 2025, 05:26 PM ISTUpdated : Nov 21, 2025, 05:29 PM IST
Lakshmi Nivasa serial update: ಸದ್ಯ ಧಾರಾವಾಹಿಯಲ್ಲಿ ನಡೆಯುತ್ತಿರುವ ಘಟನೆ ನೋಡಿದರೆ ಸಿಟ್ಟಿಗೆ ಭಾವನಾ-ಸಿದ್ದು ಇಬ್ಬರೂ ಸೈನ್ ಹಾಕಬಹುದು. ಕೊನೆಗೊಮ್ಮೆ ಜ್ಞಾನೋದಯವಾಗಿ ಅಥವಾ ಮನೆಯವರ ಕುತಂತ್ರ ಗೊತ್ತಾಗಿ ಮತ್ತೆ ಒಂದಾಗಬಹುದು. ಆದರೆ ಈ ಎರಡೂ ಜೋಡಿ ದೂರವಾಗಿರುವುದಕ್ಕೆ ವೀಕ್ಷಕರಿಗೆ ಬೇಸರವಾಗಿದೆ.
'ಲಕ್ಷ್ಮೀನಿವಾಸ'ದಲ್ಲಿ ಜವರೇಗೌಡರ ಕುತಂತ್ರದಿಂದ ಸಿದ್ದು-ಭಾವನಾ ದೂರವಾಗಿದ್ದಾಯ್ತು. ಇದಕ್ಕೆ ಭಾವನಾಳ ಅಣ್ಣ ಸಂತೋಷ್ ಸಾಥ್ ಬೇರೆ. ಇದ್ಯಾವುದರ ಅರಿವೇ ಇಲ್ಲದ ಭಾವನಾ-ಸಿದ್ದು ಮಾತ್ರ ದು:ಖಿಸುತ್ತಾ ಒಂದು ಮೂಲೆಯಲ್ಲಿ ಕುಳಿತಿದ್ದಾರೆ.
27
ಮತ್ತೊಂದು ಪ್ಲಾನ್
ಭಾವನಾ ಮನೆಯಿಂದ ಹೊರಹೋಗಿದ್ದಕ್ಕೆ ಭಾವನಾ ಅತ್ತೆ, ಅಕ್ಕ, ಮಾವ, ಅಜ್ಜಿ ಎಲ್ಲರೂ ಹಾಲು ಪಾಯಸ ಕುಡಿದದ್ದಾಯ್ತು. ಜೊತೆಗೆ ಮಾವ ತಾನೇ ಈ ಚಾಲೆಂಜ್‌ನಲ್ಲಿ ಗೆದ್ದೇ ಎಂದು ಬೀಗಿದ್ದಾಯ್ತು. ಇಷ್ಟಕ್ಕೆ ಸುಮ್ಮನಾಗದ ಅವರು ಮತ್ತೊಂದು ಪ್ಲಾನ್ ಮಾಡಿದ್ದಾರೆ.
37
ನೀಲು ಹೇಳಿದ್ದೇನು?
ಹೌದು. ಸಿದ್ದುಗೆ ಮತ್ತೊಂದು ಮದುವೆ ಮಾಡಲು ಪ್ಲಾನ್ ಮಾಡಿದ್ದಾಳೆ ಅಮ್ಮ. ಆದರೆ ಇದಕ್ಕೂ ಮುನ್ನ ಸಿದ್ದುನಿಂದ ಡೀವೋರ್ಸ್ ಕೊಡಿಸುವುದು ಹೇಗೆ ಎಂದು ಚಿಂತಿಸುತ್ತಿದ್ದಾಗ ನೀಲು ಅದಕ್ಕೂ ಹೊಸ ಉಪಾಯ ಹುಡುಕಿದ್ದಾಳೆ.
ಸಿದ್ದುಗೆ ನೇರವಾಗಿ ಡೀವೋರ್ಸ್ ಪೇಪರ್‌ಗೆ ಸೈನ್ ಹಾಕಿ ಎಂದರೆ ಹಾಕುವುದಿಲ್ಲ. ಆದರೆ ಅದೇ ಪೇಪರ್ ಭಾವನಾ ಕಡೆಯಿಂದ ಬಂದರೆ ಮಾಡುತ್ತಾನೆ ಎಂಬುದು ಇವರ ಲೆಕ್ಕಚಾರ. ಸದ್ಯ ಈ ಹೊಸ ಪ್ರೊಮೊ ನೋಡಿ ವೀಕ್ಷಕರು ಸಹ ರೊಚ್ಚಿಗೆದ್ದಿದ್ದಾರೆ.
57
ಬೇಸರ ವ್ಯಕ್ತಪಡಿಸಿದ ವೀಕ್ಷಕರು
ಸದ್ಯ ಧಾರಾವಾಹಿಯಲ್ಲಿ ನಡೆಯುತ್ತಿರುವ ಘಟನೆಗಳನ್ನ ನೋಡಿದರೆ ಸಿಟ್ಟಿಗೆ ಭಾವನಾ-ಸಿದ್ದು ಇಬ್ಬರೂ ಸೈನ್ ಹಾಕಬಹುದು. ಕೊನೆಗೊಮ್ಮೆ ಜ್ಞಾನೋದಯವಾಗಿ ಅಥವಾ ಮನೆಯವರ ಕುತಂತ್ರ ಗೊತ್ತಾಗಿ ಮತ್ತೆ ಒಂದಾಗಬಹುದು. ಆದರೆ ಈ ಎರಡೂ ಜೋಡಿ ಸದ್ಯ ದೂರವಾಗಿರುವುದಕ್ಕೆ ವೀಕ್ಷಕರಿಗಂತೂ ಬೇಸರವಾಗಿದೆ.
67
ವೀಕ್ಷಕರಿಗಿರುವ ಅಭಿಪ್ರಾಯವೇನು?
ಕೆಲವು ವೀಕ್ಷಕರು ಅವರಿಬ್ಬರು ದೂರವಾಗುವುದಕ್ಕೆ ಸಾಧ್ಯವಿಲ್ಲ ಎಂದರೆ, ಮತ್ತೆ ಕೆಲವರು ಈ ಧಾರಾವಾಹಿ ಹಳ್ಳ ಹಿಡಿಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಕೆಲವು ಹಿರಿಯ ನಟಿಯರು ಈ ಧಾರಾವಾಹಿ ಸರಿಯಿಲ್ಲ ಅಂತಾನೆ ಸೀರಿಯಲ್‌ನಿಂದ ಆಚೆ ಬಂದರು ಅಂತೆಲ್ಲಾ ಲಿಂಕ್ ಮಾಡಿದ್ದಾರೆ. ಹಾಗಾದ್ರೆ ಧಾರಾವಾಹಿಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ವೀಕ್ಷಕರಿಗಿರುವ ಅಭಿಪ್ರಾಯವೇನು ಎಂದು ನೋಡುವುದಾದರೆ...
77
ಹೀಗಿದೆ ಕಾಮೆಂಟ್ಸ್..
*"ಮನೆಹಾಳು ಮಾವ, ಕಿತಾಪತಿ ವಾರಗಿತ್ತಿ ಇಂತವರಿದ್ರು ಬಿಟ್ರೆ ಯಾವ ಸಂಸಾರನು ಉಳಿಯುವುದಿಲ್ಲ. ಈ ಮನೆ ಹಾಳು ಮಾವ ರಾಜಕೀಯದವನು ಏನು ಉದ್ಧಾರ ಮಾಡ್ತಾನೆ". *"ಸಾಂಸಾರಿಕ ಧಾರಾವಾಹಿ ಅಂತ ನೋಡ್ತಿದ್ರೆ ಕಿತ್ತೋಗಿರೋ ಧಾರಾವಾಹಿ ಮಾಡ್ತಿದ್ದಾರೆ ನಿರ್ದೇಶಕರು. ಮೊದಲು ನಿಲ್ಲಿಸಿ ಸಾಕು. ಪುಟ್ಟಕ್ಕನ ಮಕ್ಕಳು ಅಷ್ಟೇ ಅದರಲ್ಲಿ ಇನ್ನೂ ಏನಾದರೂ ಸ್ವಾರಸ್ಯ ಇದೆಯಾ ಈ ಧಾರಾವಾಹಿಯನ್ನು ಮೊದಲು ನಿಲ್ಲಿಸಿ ಸಾಕು". *"ಇಂತ ಮನೆಹಾಳ್ ಸೀರಿಯಲ್ ಸರಿ ಇಲ್ಲ ಅಂತಾನೇ ನಮ್ ಹಳೆ ನಟಿಯರು ಆಚೆ ಬಂದಿದ್ದು". *"ಏನೇ ಆದರೂ ಭಾವನಾ ಸಿದ್ದು ದೂರ ಆಗಲ್ಲ ಅನ್ನೋರು ಲೈಕ್ ಮಾಡಿ". *"ಸಿದ್ದು ನೀನು ಭಾವನಾ ಪರವಾಗಿ ನಿಲ್ಲದೆ ಅವ್ಳು ಹೋಗುವಾಗ ತಡಿದೆ ತೆಪ್ಪಗೆ ನಿಂತಿದ್ದ ಪರಿಣಾಮ ಇದು" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿರುವುದನ್ನ ನೀವು ನೋಡಬಹುದು.