ದಕ್ಷಿಣ ಭಾರತದ ಮೂರು ತಲೆಮಾರಿನ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ ನಟಿ ಇದೀಗ ಅಕ್ಷರಶಃ ಬೀದಿಗೆ ಬಂದಿದ್ದಾರೆ. ಚಿತ್ರರಂಗ ಅವರನ್ನು ಮರೆತಿದ್ದರೂ, ಒಬ್ಬ ಸ್ಟಾರ್ ಡೈರೆಕ್ಟರ್ ಮಾತ್ರ ಪ್ರತಿ ತಿಂಗಳು ಅವರಿಗೆ ಹಣ ಕಳಿಸಿ ಸಹಾಯ ಮಾಡ್ತಿದ್ದಾರೆ. ಆ ನಟಿ ಹಾಗೂ ಡೈರೆಕ್ಟರ್ ಯಾರು ಗೊತ್ತಾ?
ರಮಾಪ್ರಭಾ ತೆಲುಗು ಚಿತ್ರರಂಗದ ಹಿರಿಯ ನಟಿ. ಎನ್‌ಟಿಆರ್, ಎಎನ್‌ಆರ್ ಕಾಲದಿಂದ ಹಿಡಿದು ಚಿರಂಜೀವಿ, ಬಾಲಯ್ಯ, ವೆಂಕಟೇಶ್, ಆಮೇಲೆ ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ವರೆಗೆ ಮೂರು ತಲೆಮಾರಿನ ನಟರ ಜೊತೆ ಇವರು ನಟಿಸಿದ್ದಾರೆ. 79 ವರ್ಷದ ರಮಾಪ್ರಭಾ ಈಗ ಒಂದು ಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ತಮ್ಮ ತಮ್ಮನ ಕುಟುಂಬದ ಜೊತೆ ವಾಸವಿದ್ದಾರೆ.
25
ಡೈರೆಕ್ಟರ್ ಗುಣದ ಬಗ್ಗೆ ರಮಾಪ್ರಭಾ ಮಾತು
ಸಿನಿಮಾ ರಂಗದಲ್ಲಿ ಸಂಬಂಧಗಳು ಉಳಿಯುವುದು ಬಹಳ ಅಪರೂಪ. ಸೋಲು-ಗೆಲುವಿನ ಲೆಕ್ಕಾಚಾರವಿಲ್ಲದೆ ಒಬ್ಬ ನಟಿಯನ್ನು ನೆನಪಿಟ್ಟುಕೊಂಡು ಸಹಾಯ ಮಾಡುವುದು ಎಷ್ಟು ಜನರಿಗೆ ಸಾಧ್ಯ? ಇದೇ ವಿಚಾರವನ್ನು ನೆನಪಿಸಿಕೊಂಡು ರಮಾಪ್ರಭಾ ಒಬ್ಬ ಡೈರೆಕ್ಟರ್ ಬಗ್ಗೆ ಹೇಳಿದ ಮಾತುಗಳು ಈಗ ವೈರಲ್ ಆಗಿವೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಆ ಡೈರೆಕ್ಟರ್ ಜೊತೆಗಿನ ಒಡನಾಟವನ್ನು ಅವರು ಹಂಚಿಕೊಂಡಿದ್ದಾರೆ.
35
ಪ್ರತಿ ತಿಂಗಳು 25,000 ರೂ. ಸಹಾಯ
ರಮಾಪ್ರಭಾ ಹೇಳಿದ ಆ ಡೈರೆಕ್ಟರ್ ಬೇರೆ ಯಾರು ಅಲ್ಲ, ಪೂರಿ ಜಗನ್ನಾಥ್. ಅವರು ಪ್ರತಿ ತಿಂಗಳು 25,000 ರೂಪಾಯಿಯನ್ನು ರಮಾಪ್ರಭಾ ಅವರ ಬ್ಯಾಂಕ್ ಅಕೌಂಟ್‌ಗೆ ಹಾಕ್ತಾರೆ. ಯಾವುದೇ ಪ್ರತಿಫಲ ಆಶಿಸದೆ ಈ ದೊಡ್ಡ ಡೈರೆಕ್ಟರ್ ಪ್ರತಿ ತಿಂಗಳು ಹಣ ಕಳಿಸುತ್ತಿರುವುದು ಅವರಿಗೆ ಆಶ್ಚರ್ಯ ಮತ್ತು ಖುಷಿ ತಂದಿದೆ. ಆದರೆ ಇಲ್ಲಿ ಅಚ್ಚರಿಯ ವಿಚಾರ ಅಂದ್ರೆ, ಪೂರಿ ಜಗನ್ನಾಥ್ ಅವರಿಗೆ ರಮಾಪ್ರಭಾ ಫೋನ್ ಮಾಡಿದರೆ ಅವರು ಕಾಲ್ ರಿಸೀವ್ ಮಾಡಲ್ಲ!
"ಅವರು ಪ್ರತಿ ತಿಂಗಳು ನನ್ನ ಅಕೌಂಟ್‌ಗೆ ದುಡ್ಡು ಹಾಕ್ತಾರೆ. ಆದರೆ ನಾನು ಥ್ಯಾಂಕ್ಸ್ ಹೇಳೋಣ ಅಂತ ಫೋನ್ ಮಾಡಿದರೆ ಅವರು ಎತ್ತಲ್ಲ. ಯಾಕಂದ್ರೆ, ತಾನು ಸಹಾಯ ಮಾಡ್ತಿದ್ದೀನಿ ಅಂತ ಕೊಚ್ಚಿಕೊಳ್ಳೋದು ಅವರಿಗೆ ಇಷ್ಟವಿಲ್ಲ" ಎಂದು ರಮಾಪ್ರಭಾ ಹೇಳಿದ್ದಾರೆ. ತಾವು ಮಾಡುವ ಸಣ್ಣ ಸಹಾಯಕ್ಕೆ ಎದುರಿನವರಿಂದ ಕೃತಜ್ಞತೆ ನಿರೀಕ್ಷಿಸುವುದು ಪೂರಿ ಜಗನ್ನಾಥ್ ಗುಣವಲ್ಲ. ಯಾವುದೇ ಪ್ರಚಾರವಿಲ್ಲದೆ, ಸಹಾಯ ಪಡೆಯುವವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಗುಪ್ತವಾಗಿ ನೆರವಾಗುವುದು ಅವರ ಸ್ಟೈಲ್.
55
ಇದೊಂದು ಜನ್ಮ ಜನ್ಮಾಂತರದ ಬಂಧ
ಪೂರಿ ಜಗನ್ನಾಥ್ ನಿರ್ದೇಶನದ 'ಬದ್ರಿ', 'ದೇಶಮುದುರು', ಸಿನಿಮಾಗಳಲ್ಲಿ ರಮಾಪ್ರಭಾ ನಟಿಸಿದ್ದಾರೆ. "ಹೈದರಾಬಾದ್‌ನಲ್ಲಿ ನನ್ನ ಜೊತೆ ಊಟ ಮಾಡಿದವರು, ನನ್ನಿಂದ ಲಾಭ ಪಡೆದವರು ಬಹಳ ಜನ ಇದ್ದಾರೆ. ಆದರೆ ಅವರ್ಯಾರು ನನ್ನ ಕಷ್ಟಕ್ಕೆ ಸ್ಪಂದಿಸಲಿಲ್ಲ. ಪೂರಿ ಜಗನ್ನಾಥ್ ಮಾತ್ರ ನನ್ನನ್ನು ಸ್ವಂತ ಮನುಷ್ಯಳಂತೆ ಕಂಡು ಸಹಾಯ ಮಾಡ್ತಿದ್ದಾರೆ. ಇದು ಪೂರ್ವಜನ್ಮದ ಪುಣ್ಯ, ನಮ್ಮಿಬ್ಬರ ನಡುವಿನ ಜನ್ಮಬಂಧ" ಎಂದು ರಮಾಪ್ರಭಾ ಭಾವುಕರಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.