ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು, ಸ್ನೇಹಿತೆ, ನಟಿ ತ್ರಿಷಾ ಕೃಷ್ಣನ್ ಅವರ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ಇದು ಅವರ ಚಿತ್ರ 'ಕರುಪ್ಪು' ಗೆ ಸಂಬಂಧಿಸಿದ್ದು, ಈ ಕೋರ್ಟ್ ರೂಮ್ ಡ್ರಾಮಾ ಚಿತ್ರದಲ್ಲಿ, ನ್ಯಾಯಕ್ಕಾಗಿ ಹೋರಾಡುವ ವಕೀಲೆಯಾಗಿ ತ್ರಿಷಾ ಕಾಣಿಸಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಈಗ ದಳಪತಿ ಜೋಸೆಫ್ ವಿಜಯ್ ಅವರದ್ದೇ ಹವಾ. ಮುಖ್ಯಮಂತ್ರಿಯಾಗುತ್ತಲೇ ಶಾಲಾ, ಕಾಲೇಜು, ದೇವಸ್ಥಾನಗಳ ಬಳಿಕ ಮದ್ಯದ ಅಂಗಡಿಗೆ ಬ್ರೇಕ್ ಹಾಕಿದ್ದಾರೆ. ಹೀಗೆ ಒಂದೊಂದೇ ಕಾರ್ಯಗಳನ್ನು ಜಾರಿಗೊಳಿಸುತ್ತಿರುವ ವಿಜಯ್ ಅವರು ಈಗ ಸ್ನೇಹಿತೆ ತ್ರಿಷಾ ಕೃಷ್ಣನ್ (Trisha Krishnan) ಅವರ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ.
26
ತ್ರಿಷಾ ಕೃಷ್ಣನ್ ಫ್ಯಾನ್ಸ್ ಫುಲ್ ಖುಷ್
ಅದೇನೆಂದರೆ, ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ ಕರುಪ್ಪು ಚಿತ್ರ (Karuppu) ನಾಳೆ ಅರ್ಥಾತ್ ಮೇ 14 ರಂದು ಬಿಡುಗಡೆಯಾಗಲಿದೆ. (ಕರುಪ್ಪ ಎಂದರೆ ಕಪ್ಪು ಎಂದು ಅರ್ಥ) ಈ ಚಿತ್ರಕ್ಕೆ ಬೆಳಿಗ್ಗೆ 9 ಗಂಟೆಗೆ ವಿಶೇಷ ಪ್ರದರ್ಶನ ನೀಡಲು ಅವಕಾಶ ನೀಡಲಾಗಿದೆ. ಇದು ವಿಶೇಷ ಅವಕಾಶ ಆಗಿದೆ ಎನ್ನಲಾಗಿದೆ.
36
ನಿರ್ಮಾಪಕರಿಂದ ಧನ್ಯವಾದ
ಈ ಬಗ್ಗೆ ಕರುಪ್ಪು ಚಿತ್ರದ ನಿರ್ಮಾಪಕರು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಕರುಪ್ಪುವಿನ ಬೆಳಿಗ್ಗೆ 9 ಗಂಟೆಗೆ ವಿಶೇಷ ಅನುಮತಿ ನೀಡಿದ್ದಕ್ಕಾಗಿ ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ತಿರು. ಜೋಸೆಫ್ ವಿಜಯ್ ಅವರಿಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ.
ಇತ್ತೀಚೆಗೆ, ನಿರ್ಮಾಪಕರು ಕರುಪ್ಪು ಚಿತ್ರದ ಟ್ರೈಲರ್ ಅನ್ನು ಸಹ ಬಿಡುಗಡೆ ಮಾಡಿದ್ದರು. ಇದು ಆಕ್ಷನ್-ಪ್ಯಾಕ್ಡ್ ಕೋರ್ಟ್ ರೂಮ್ ಚಿತ್ರಣ ತೋರಿಸಿದ್ದು, ವೀಕ್ಷಕರಿಗೆ ರೋಮಾಂಚನ ತರುವಂತಿದೆ.
56
ನ್ಯಾಯಕ್ಕಾಗಿ ಹೋರಾಟ
ಟ್ರೈಲರ್ ಒಬ್ಬ ವೃದ್ಧ ವ್ಯಕ್ತಿ ಮತ್ತು ಅವರ ಮೊಮ್ಮಗಳನ್ನು ಒಳಗೊಂಡ ಭಾವನಾತ್ಮಕ ಕಥೆಯೊಂದಿಗೆ ಪ್ರಾರಂಭವಾಗುತ್ತದೆ, ಅವರು ನ್ಯಾಯವನ್ನು ಪಡೆಯಲು ಹೋರಾಡುತ್ತಿರುವಾಗ ವರ್ಷಗಳ ಕಾಲ ನ್ಯಾಯಾಲಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ತ್ರಿಷಾ ಕೃಷ್ಣನ್ ಅವರ ಪರ ಹೋರಾಡುವ ವಕೀಲೆಯ ಪಾತ್ರ ನಿರ್ವಹಿಸಿದರೆ, ಆರ್‌ಜೆ ಬಾಲಾಜಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
66
ಸೂರ್ಯನ ಪಾತ್ರ
ಸೂರ್ಯನ ಪಾತ್ರವು ಕುತೂಹಲವಾಗಿದ್ದು ಕೋರ್ಟ್ ಒಳಗೆ ಮತ್ತು ಹೊರಗೆ ಹೋರಾಡುವ ನಿರ್ಭೀತ ವ್ಯಕ್ತಿಯಾಗಿ ಕಾಣಿಸುತ್ತದೆ. ಕರುಪ್ಪು ಚಿತ್ರವನ್ನು ಆರ್‌ಜೆಬಿ ಬರೆದು ನಿರ್ದೇಶಿಸಿದ್ದಾರೆ. ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಜೊತೆಗೆ, ಚಿತ್ರದಲ್ಲಿ ಇಂದ್ರನ್ಸ್, ನಟ್ಟಿ, ಸ್ವಸಿಕಾ, ಶಿವದ, ಅನಘಾ ಮಾಯಾ ರವಿ ಮತ್ತು ಸುಪ್ರೀತ್ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಸಾಯಿ ಅಭ್ಯಂಕರ್ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.