ಈ ಹುಡುಗಿ ನೋಡಿ ಮಲೇಷ್ಯಾದ ಆ ದಿನಗಳು ನೆನಪಾದ್ವು... ಹೂವಿನ ಬಾಣದ ಹುಡುಗಿಗೆ ನಟ ಚೇತನ್​ ರಿಯಾಕ್ಷನ್​

Published : Sep 19, 2025, 09:55 PM IST

  'ಹೂವಿನ ಬಾಣದಂತೆ' ಹಾಡು ಹಾಡಿ ನಿತ್ಯಶ್ರೀ ಎಂಬ ಯುವತಿ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಈ ಹಾಡಿನ ಮೂಲ ಚಿತ್ರ 'ಬಿರುಗಾಳಿ'ಯ ನಾಯಕ ನಟ ಚೇತನ್​ ಪ್ರತಿಕ್ರಿಯಿಸಿದ್ದಾರೆ. ಅವರು ಹೇಳಿದ್ದೇನು?

PREV
16
ಹೂವಿನ ಬಾಣದ ಹುಡುಗಿ

ಹೂವಿನ ಎನ್ನುವ ಶಬ್ದ ಗೂಗಲ್‌ನಲ್ಲಿ ಹಾಕಿದರೆ ಸಾಕು, ಹೂವಿನ ಬಾಣದಂತೆ ಎನ್ನುವ ಹಾಡೇ ಕಾಣಿಸುತ್ತದೆ. ಅದರ ಜೊತೆಗೆ ಈ ಹಾಡನ್ನು ವೈರಲ್‌ ಮಾಡಿದೋ ಯುವತಿ ನಿತ್ಯಶ್ರೀ ಕಾಣಿಸುತ್ತಾರೆ. ಸ್ನೇಹಿತರ ಜತೆ ತಮಾಷೆಗಾಗಿ ಹಾಡಿದ ಹಾಡಿನಿಂದ ರಾತ್ರೋರಾತ್ರಿ ಸ್ಟಾರ್‌ ಆಗಿದ್ದಾರೆ ನಿತ್ಯಶ್ರೀ. ಒಂದು ವೇಳೆ ಸುಶ್ರಾವ್ಯವಾಗಿ, ಮೂಲ ಗಾಯಕಿ ಶ್ರೇಯಾ ಘೋಷಲ್‌ ಅವರಂತೆಯೇ ಹಾಡಿದ್ದರೆ ಇಷ್ಟು ಫೇಮಸ್‌ ಆಗುತ್ತಿರಲಿಲ್ಲವೇನೋ. ಅದೇ ಸೋಷಿಯಲ್‌ ಮೀಡಿಯಾದ ಕರಾಮತ್ತು ಅಲ್ವಾ?

26
ಸೆಲೆಬ್ರಿಟಿಯಾದ ನಿತ್ಯಶ್ರೀ

ಒಟ್ಟಿನಲ್ಲಿ ನಿತ್ಯಶ್ರೀ ಈಗ ಸೆಲೆಬ್ರಿಟಿ ಆಗಿದ್ದಾರೆ. ಖುದ್ದು ಸೆಲೆಬ್ರಿಟಿಗಳೇ ಈಕೆಯ ಬಗ್ಗೆ ಮಾತನಾಡುವ ಹಾಗೆ ಆಗಿದೆ. ಗಾಯಕ ಅರ್ಜುನ್‌ ಜನ್ಯರಿಂದ ಹಿಡಿದು ಕೆಲವು ಸಿನಿಮಾ ಕಲಾವಿದರ ನಿತ್ಯಶ್ರೀ (Hoovina Baanadante Nityashree) ಕುರಿತು ಮಾತನಾಡಿದ್ದಾರೆ.

36
ನಟ ಚೇತನ್​ ಹೇಳಿದ್ದೇನು?

ಇದೀಗ ನಟ ಚೇತನ್‌ (Sandalwood Actor Chetan) ಅವರು ಇದರ ಬಗ್ಗೆ ಮಾತನಾಡಿದ್ದಾರೆ. ಅವರು ಮಾತನಾಡಲು ಕಾರಣವೂ ಇದೆ. ಅಷ್ಟಕ್ಕೂ ಈ ಹಾಡು 2009ರಲ್ಲಿ ಬಿಡುಗಡೆಯಾದ ಕನ್ನಡ ಸಾಹಸ ಚಿತ್ರ ಬಿರುಗಾಳಿ (Birugaali) ಚಿತ್ರದ್ದು.

46
ನಾಯಕ ಚೇತನ್​

ಈ ಚಿತ್ರದ ನಾಯಕ ಚೇತನ್‌ ಕುಮಾರ್‌ ಅರ್ಥಾತ್​ ಚೇತನ್​ ಅಹಿಂಸಾ (Chethan Ahimsa) ಸಿತಾರಾ ವೈದ್ಯ, ಕಿಶೋರ್‌, ತಾರಾ, ಮತ್ತು ಕರಿಷ್ಮಾ ಭಾರದ್ವಾಜ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ ಇದರ ಸಂಗೀತ ನೀಡಿದ್ದ ಅರ್ಜುನ್‌ ಜನ್ಯ ಅವರು. ಅದಕ್ಕಾಗಿಯೇ ಇದಾಗಲೇ ಈ ಯುವತಿಯ ಬಗ್ಗೆ ಅವರು ಮಾತನಾಡಿದ್ದಾರೆ. ಈ ಹಾಡಿಗೆ ದನಿ ಕೊಟ್ಟವರು ಶ್ರೇಯಾ ಘೋಷಲ್‌ (Shreya Ghoshal)

56
ನಿತ್ಯಶ್ರೀ ಹಾಡಿಗೆ ಮೆಚ್ಚುಗೆ

ಯುವತಿ ನಿತ್ಯಶ್ರೀ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಚೇತನ್‌ ಅವರು, ನನಗೆ ತುಂಬಾ ಖುಷಿಯಾಗಿದೆ. ಆಕೆ ಜೆನ್‌ ಜೀ (Gen Z) ಯುವತಿ. ಈ ಸಿನಿಮಾ ಬಂದಾಗ ಅವಳೇನೋ 2-3 ವರ್ಷದವಳು ಇದ್ದಳೇನೋ. ಆ ಹಾಡನ್ನು ಈಗ ಪುನಃ ವೈರಲ್‌ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ ಎಂದಿದ್ದಾರೆ.

66
ಮಲೇಷಿಯಾದಲ್ಲಿ ಶೂಟಿಂಗ್​

ಇದನ್ನು ಮಲೇಷಿಯಾದಲ್ಲಿ ಶೂಟಿಂಗ್‌ ಮಾಡಿದ್ವಿ. ಅದರ ನೆನಪು ಮತ್ತೆ ಕಾಡಿತು. ಜೆನ್‌ ಜೀ ಜನರೇಷನ್‌ಗೆ ಈ ಹಾಡು ಇಷ್ಟ ಆಗ್ತಿರೋದು ತುಂಬಾ ಖುಷಿ ಕೊಟ್ಟಿದೆ ಎಂದು ಚೇತನ್‌ ಹೇಳಿದ್ದಾರೆ. ಆಕೆ ಫ್ರೆಂಡ್ಸ್‌ಗೆ ಸಂತೋಷ ನೀಡಲು ಹಾಡನ್ನು ಹಾಡಿದ್ದಾಳೆ. ಅದು ತುಂಬಾ ಖುಷಿಯ ವಿಚಾರವೇ. ಇದೇ ರೀತಿ ಒಳ್ಳೆಯ ರೀತಿಯಲ್ಲಿ ಹಾಡುಗಳನ್ನು ಹಾಡಿ ಟ್ರೆಂಡಿಂಗ್‌ ಮಾಡಿ ಎಂದಿದ್ದಾರೆ.

ಸಂಚಾರ ಟಿವಿಗೆ ನಟ ಕೊಟ್ಟ ರಿಯಾಕ್ಷನ್​ ನೋಡಿ

Read more Photos on
click me!

Recommended Stories