ಅಮೃತಧಾರೆ ಸೀರಿಯಲ್ನಲ್ಲಿ ಭಾಗ್ಯಮ್ಮನ ಪಾತ್ರ ಮಾಡುತ್ತಿರೋ ನಟಿ ಚಿತ್ಕಳಾ ಬಿರಾದಾರ್. ಕನ್ನಡತಿ ಸೀರಿಯಲ್ ಮೂಲಕ ಅಮ್ಮಮ್ಮನಾಗಿ ವೀಕ್ಷಕರ ಮೇಲೆ ಪ್ರಭಾವ ಬೀರಿದ ನಟಿ ಚಿತ್ಕಳಾ ಬಳಿಕ ಬೃಂದಾವನ ಧಾರಾವಾಹಿಯಲ್ಲಿ ವಿಭಿನ್ನ ಹೇರ್ ಸ್ಟೈಲ್ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದರು. ಇದೀಗ ಅಮೃತಧಾರೆಯಲ್ಲಿ ಮೌನವಾಗಿದ್ದರಿಂದ ವೀಕ್ಷಕರು ಭಾಗ್ಯಮ್ಮಾ ಬೇಗ ಮಾತನಾಡಮ್ಮಾ ಎನ್ನುತ್ತಿದ್ದರು. ಆದರೆ ಹಳೆಯ ನೆನಪು ಮರುಕಳಿಸಿದರೂ ಶಕುಂತಲಾ ಮೇಲಿನ ಭಯದಿಂದ ಇಂದಿಗೂ ಭಾಗ್ಯಮ್ಮಾ ಮೌನವಾಗಿಯೇ ಇದ್ದಾಳೆ.
28
ಒಗಟಿನ ಸರಣಿ ಶುರು
ಉತ್ತರ ಕರ್ನಾಟಕದವರಾಗಿರುವ ಚಿತ್ಕಳಾ ಅವರು ಇದೀಗ ಒಗಟಿನ ಸರಣಿ ಶುರು ಮಾಡಿಕೊಂಡಿದ್ದಾರೆ. ಒಗಟು ಎನ್ನುವುದು ಬುದ್ಧಿಯನ್ನು ಸಕತ್ ಶಾರ್ಪ್ ಮಾಡುವ ಮಾಧ್ಯಮವಾಗಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಲಿಯ ಭಾಷೆಯಲ್ಲಿ ಒಗಟಿನ ಸೊಗಡಿದೆ. ಇದೀಗ ಅದರ ಬಗ್ಗೆ ನಟಿ ಚಿತ್ಕಳಾ ಅವರು ಅಮೃತಧಾರೆಯ ಮಲ್ಲಿ ಅರ್ಥಾತ್ ಅನ್ವಿತಾ ಸಾಗರ್ ಜೊತೆ ಈ ಒಗಟಿನ ಸರಮಾಲೆ ಶುರು ಮಾಡಿಕೊಂಡಿದ್ದಾರೆ.
38
ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಾ?
ಮೊದಲನೆದ್ದಾಗಿ ಚಿತ್ಕಳಾ ಅವರು ಹೊಟ್ಟೆಗೆ ಹಾಕಿದಂಗ ಬೆಳಿತದೆ, ನೀರು ಕುಡಿದಂಗ ಸಾಯ್ತದೆ, ಹಿಡಿಯಾಕ್ ಹೋದ್ರೆ ಕಚ್ಚಾಕ್ ಬರ್ತದೆ ಏನದು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅನ್ವಿತಾ ಸಾಗರ್ ಅವರು ವಿಭಿನ್ನ ರೀತಿಯ ಉತ್ತರ ಕೊಟ್ಟಿದ್ದಾರೆ. ಆದರೆ ಅದ್ಯಾವುದೂ ಸರಿ ಇಲ್ಲ. ಕೊನೆಗೆ ಕ್ಲೂ ತೆಗೆದುಕೊಂಡು ತಲೆ ಕೆಡಿಸಿಕೊಂಡು ಕೊನೆಗೂ ಸರಿಯಾದ ಉತ್ತರ ಹೇಳಿದ್ದಾರೆ ನಟಿ. ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಾ?
48
ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಾ?
ಹೊಟ್ಟೆಗೆ ಹಾಕಿದಂಗ ಬೆಳಿತದೆ, ನೀರು ಕುಡಿದಂಗ ಸಾಯ್ತದೆ, ಹಿಡಿಯಾಕ್ ಹೋದ್ರೆ ಕಚ್ಚಾಕ್ ಬರ್ತದೆ... ಇದರ ಉತ್ತರ ನೀವೂ ಒಮ್ಮೆ ಯೋಚಿಸಿ. ಕ್ಲೂ ಬೇಕು ಎಂದರೆ, ಇದಕ್ಕೆ ಏನಾದರೂ ವಸ್ತು ಹಾಕಿದರೆ ಉರಿಯುತ್ತದೆ, ನೀರು ಹಾಕಿದರೆ ಆರಿ ಹೋಗುತ್ತದೆ, ಮುಟ್ಟಲು ಹೋದ್ರೆ ಕೈ ಹಿಂದಕ್ಕೆ ತೆಗೆದುಕೊಳ್ತೀರಾ... ಹೌದು. ಇಷ್ಟು ಹೇಳುತ್ತಿದ್ದಂತೆಯೇ ನಿಮಗೆ ಗೊತ್ತಾಗಿರಬಹುದು. ಅದೇ ಬೆಂಕಿ!
58
ಕನ್ನಡತಿಯಲ್ಲಿ ಅಮ್ಮಮ್ಮನ ಪಾತ್ರಕ್ಕೆ ಜೀವ
ಇನ್ನು ಚಿತ್ಕಳಾ ಬಿರಾದಾರ್(Chitkala Biradar) ಕುರಿತು ಹೇಳುವುದಾದರೆ, ಕನ್ನಡತಿಯಲ್ಲಿ ಅಮ್ಮಮ್ಮನ ಪಾತ್ರಕ್ಕೆ ಜೀವ ತುಂಬಿದ ನಟಿ ಇವರು. ಇದ್ರೆ ಇಂತಹ ಅತ್ತೆ ಇರಬೇಕು ಎಂದು ಕನ್ನಡತಿ ನೋಡಿದೋರೆಲ್ಲಾ ಹೇಳಿದ್ದಾರೆ. ಆದ್ರೆ ನಿಮಗೊತ್ತಾ, ನಿಜ ಜೀವನದಲ್ಲೂ ಚಿತ್ಕಳಾ ಬಿರಾದಾರ್ ಸೂಪರ್ ಅತ್ತೆ. ಸೊಸೆಗಾಗಿ ಮಿಡಿಯುವ ಅತ್ತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮ ಸೊಸೆ, ಮಗನ ಮದುವೆ, ಸಂಬಂಧಗಳ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದರು.
68
ಚಿತ್ಕಳಾ ಬಿರಾದಾರ್ ಕುಟುಂಬದ ಹಿನ್ನೆಲೆ
ಚಿತ್ಕಳಾ ಬಿರಾದಾರ್ ಅವರ ಮಗ ಸೌರಭ್, ಇವರ ಮದ್ವೆ ಆಗಿ ಈಗಾಗಲೇ ಒಂದು ವರ್ಷ ಆಗ್ತಾ ಬಂದಿದೆ. ಇವರ ಪತ್ನಿ ದೇವಾಂಶಿ ಜಾರ್ಖಂಡ್ ಮೂಲದವರು. ಸೊಸೆಯನ್ನು ಮಗಳಂತೆ ನೋಡುವ ಚಿತ್ಕಳಾ, ಅಂತರ್ ರಾಜ್ಯ ಮದುವೆ, ಲವ್ ಮ್ಯಾರೇಜ್, ಮಕ್ಕಳ ಆಸೆ, ಆಕಾಂಕ್ಷೆಗಳ್ ಬಗ್ಗೆ ಹೇಳಿದ್ದರು.
78
ಅನ್ವಿತಾ ಸಾಗರ್ ಕುರಿತು...
ಇನ್ನು ನಟಿ ಅನ್ವಿತಾ ಸಾಗರ್ ಕುರಿತು ಹೇಳುವುದಾದರೆ, ಇವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದಾರೆ . ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು.
88
ಅಮೃತಧಾರೆ ಸೀರಿಯಲ್ ಮೂಲಕ ಕಮ್ ಬ್ಯಾಕ್
ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್ಎಲ್ಬಿ ಸೀರಿಯಲ್ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.