ಪಾಕ್ ಸೆಲೆಬ್ರಿಟಿಗಳೊಂದಿಗೆ ಡೇಟ್ ಮಾಡಿದ ರೇಖಾ, ಸುಶ್ಮಿತಾ ಸೇನ್, ಸಲ್ಮಾನ್ ಖಾನ್‌!

First Published | Sep 6, 2023, 3:23 PM IST

ಈ ಪ್ರೀತಿ ಅನ್ನೋದು ಯಾವಾಗ ಯಾರ ಮೇಲೆ ಬೇಕಾದ್ರೂ ಆಗುತ್ತೆ ಅಲ್ವಾ? ಅದಕ್ಕೆ ಜಾತಿ, ಮತ, ಧರ್ಮ, ದೇಶ, ಗಡಿ ಯಾವುದರ ಅಂತರವೂ ಇರೋದಿಲ್ಲ. ಇಲ್ಲಿದೆ ನೋಡಿ ಪಾಕಿಸ್ತಾನದ ನಟ ಕ್ರಿಕೆಟಿಗರ ಪ್ರೀತಿಯಲ್ಲಿ ಬಿದ್ದ ಬಾಲಿವುಡ್ ನಟರ ಮಾಹಿತಿ. 
 

ರಣ್ ಬೀರ್ ಕಪೂರ್ (Ranbir Kapoor)
ಬಾಲಿವುಡ್‌ನ ಹ್ಯಾಂಡ್ಸಮ್ ನಟ ರಣ್‌ಬೀರ್ ಕಪೂರ್ ಮತ್ತು ಪಾಕಿಸ್ತಾನಿ ನಟಿ ಮಾಹಿರಾ ಖಾನ್ ಕದ್ದು ಮುಚ್ಚಿ ಲವ್ ಮಾಡುತ್ತಿರುವ ವಿಷ್ಯ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರು ವಿದೇಶದಲ್ಲಿ ಜೊತೆಯಾಗಿ ತಿರುಗಾಡುವ ಫೋಟೋ ಸಹ ವೈರಲ್ ಆಗಿತ್ತು. 

ಕತ್ರೀನಾ ಕೈಫ್ (Katrina Kaif)
ಕತ್ರೀನಾ ಕೈಫ್ ಮತ್ತು ಪಾಕ್ ನಟ ಆಲಿ ಜಫರ್ ಮೇರೆ ಬ್ರದರ್ ಕಿ ದುಲ್ಹನ್ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಇಬ್ಬರು ಒಬ್ಬರನ್ನೊಬ್ಬರು ತುಂಬಾನೆ ಇಷ್ಟಪಡುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಈ ಸಂಬಂಧ ಕೊನೆಯಾಗಿತ್ತು. 

Tap to resize

ಸಲ್ಮಾನ್ ಖಾನ್ (Salman Khan)
ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್ ಅವರು ಪಾಕ್ ನಟಿ ಸೋಮಿ ಆಲಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಸೋಮಿ ಆಲಿ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇಬ್ಬರ ಪ್ರೀತಿಯ ವಿಷ್ಯ ಬಾಲಿವುಡ್ ಟೌನ್ ನಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿತ್ತು. ಇವರಿಬ್ಬರು ಸುಮಾರು 8 ವರ್ಷಗಳ ಕಾಲ ರಿಲೇಶನ್‌ಶಿಪ್‌ನಲ್ಲಿದ್ದರು. 

ರೇಖಾ (Rekha)
ಬಾಲಿವುಡ್ ನ ಎವರ್ ಗ್ರೀನ್ ನಟಿ ರೇಖಾ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಕ್ರಿಕೇಟರ್ ಆಗಿರುವ ಇಮ್ರಾನ್ ಖಾನ್ ಲವ್ ಮಾಡ್ತಿದ್ರು ಎನ್ನಲಾಗಿದೆ. ರೇಖಾಗಾಗಿ ಇಮ್ರಾನ್ ಮುಂಬೈ ನಲ್ಲಿ ಒಂದು ತಿಂಗಳು ನೆಲೆಸಿದ್ದರು ಎನ್ನುವ ಮಾಹಿತಿಯೂ ಇದೆ.

ಅಶ್ಮಿತ್ ಪಟೇಲ್ (Ashith Patel)
ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವ ಅಶ್ಮಿತ್ ಪಟೇಲ್, ನಟಿ ಅಮೀಶಾ ಪಟೇಲ್ ಸಹೋದರ ಕೂಡ ಹೌದು. ಇವರು ಪಾಕ್ ನಟಿ ವೀಣಾ ಮಲಿಕ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದರು. ಇಬ್ಬರು ಬಿಗ್ ಬಾಸ್ ನಲ್ಲಿ ಜೊತೆಯಾಗಿದ್ದು, ಇಬ್ಬರ ರಿಲೇಶನ್ ಶಿಪ್ ಭಾರಿ ಸದ್ದು ಮಾಡಿತ್ತು. 

ಸುಷ್ಮಿತಾ ಸೇನ್ (Sushmita Sen)
ಭಾರತದ ಮೊದಲ ಮಿಸ್ ವರ್ಲ್ಡ್ ಆಗಿ ಹೆಮ್ಮೆ ತಂದ ಬಾಲಿವುಡ್ ಬೆಡಗಿ ಸುಷ್ಮಿತಾ ಸೇನ್ ರ ಪ್ರೇಮದ ಬಲೆಯಲ್ಲಿ ಪಾಕಿಸ್ತಾನದ ಕ್ರಿಕೇಟರ್ ವಾಸಿಂ ಅಕ್ರಂ ಬಿದ್ದಿದ್ದರಂತೆ. ಇಬ್ಬರೂ ಕೆಲವು ಸಮಯ ಡೇಟಿಂಗ್ ಕೂಡ ಮಾಡಿದ್ದರು. ಇಬ್ಬರೂ ಮದುವೆಯಾಗೋದಾಗಿ ಸಹ ಭಾರಿ ಸುದ್ದಿಯಾಗಿತ್ತು. 

Latest Videos

click me!