ಅವಳಿ ಮಕ್ಕಳ ಜೊತೆ ಯಶೋಧೆಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ನಟಿ ಅಮೂಲ್ಯ!

Published : Sep 06, 2023, 01:22 PM IST

ಇಂದು ಕೃಷ್ಣ ಜನ್ಮಾಷ್ಟಮಿ ನಾಡಿನೆಲ್ಲೆಡೆ ಗೋಪಾಲ ಆರಾಧನೆ ನಡೆಯುತ್ತಿದೆ. ಇದೀಗ ನಟಿ ಅಮೂಲ್ಯ ಮುದ್ದು ಮಕ್ಕಳ ಜೊತೆ ಫೋಟೋಶೂಟ್‌ ಮಾಡಿಸುವ ಮೂಲಕ  ಹಬ್ಬವನ್ನು ಸೆಲಬ್ರೆಟ್‌ ಮಾಡಿದ್ದಾರೆ.

PREV
16
ಅವಳಿ ಮಕ್ಕಳ ಜೊತೆ ಯಶೋಧೆಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ನಟಿ ಅಮೂಲ್ಯ!

ಇಂದು ದೇಶದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಸಡಗರದಿಂದ ಆಚರಿಸಲಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯ ವೇಷ ಹಾಕಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನ ಸಂಭ್ರಮಿಸಲಾಗುತ್ತಿದೆ. 

26

ಇದೇ ಶುಭ ಸಂದರ್ಭದಲ್ಲಿ ಕನ್ನಡ ನಟಿ.. ‘ಚೆಲುವಿನ ಚೆತ್ತಾರ’ ಸಿನಿಮಾ ಖ್ಯಾತಿಯ ಅಮೂಲ್ಯ ಮುದ್ದು ಮಕ್ಕಳ ಜೊತೆ ಫೋಟೋಶೂಟ್‌ ಮಾಡಿಸುವ ಮೂಲಕ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಿದ್ದಾರೆ.

36

ಅಮೂಲ್ಯ ಅವರು ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎಂದು ಹೆಸರು ಇಟ್ಟಿದ್ದಾರೆ. ಇವರ ಕ್ಯೂಟ್ ಫೋಟೋಗಳನ್ನು ಅಮೂಲ್ಯ ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ಇವರ ಕೃಷ್ಣನ ಗೆಟಪ್ ಸಾಕಷ್ಟು ಗಮನ ಸೆಳೆದಿದೆ.

46

ಕೊಳಲು ಹಿಡಿದು ಅಥರ್ವ್ ಹಾಗೂ ಆಧವ್ ಕುಳಿತಿದ್ದಾರೆ. ಇವರ ಜೊತೆಗೆ ಅಮೂಲ್ಯ ಕೂಡ ಇದ್ದಾರೆ. ಜೊತೆಗೆ ಹಸುವಿನ ಜೊತೆಯೂ ಫೋಟೋಗಳಿವೆ. ಸದ್ಯ ಈ ಫೋಟೋಗಳು ವೈರಲ್ ಆಗುತ್ತಿದೆ.

56

ವಿಶೇಷವಾಗಿ ಅಥರ್ವ್ ಮತ್ತು ಅಧವ್ ಜೊತೆ ಅಮೂಲ್ಯ ಯಶೋಧಳಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಸದ್ಯ ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

66

ನಟಿ ಅಮೂಲ್ಯ ಸದ್ಯ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಜೊತೆಗೆ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

Read more Photos on
click me!

Recommended Stories