ಬ್ಯಾಡ್ಮಿಂಟನ್ ಅಂಗಳದಿಂದ ಬಾಲಿವುಡ್ ಆಕಾಶಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ!
First Published | Mar 6, 2020, 6:11 PM ISTಒಂದು ಕಾಲದಲ್ಲಿ ಸದಾ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಕಾಲ ಕಳೆಯುತ್ತಿದ್ದ ಪ್ರಖ್ಯಾತ ಪ್ರಕಾಶ್ ಪಡುಕೋಣೆ ಮಗಳು ದೀಪಿಕಾ ಪಡುಕೋಣೆ. ರಕ್ತದಲ್ಲಿಯೇ ಬ್ಯಾಡ್ಮಿಂಟನ್ ಜೀನ್‌ನಿಂದ ಈಕೆ ರಾಷ್ಟ್ರಮಟ್ಟದವರೆಗೂ ಆಡಿ ಭರವಸೆ ಹುಟ್ಟಿಸಿದ್ದಳು. ಆದರೆ ಗ್ಲಾಮರ್ ಪ್ರಪಂಚದಲ್ಲಿ ಸಾಧಿಸುವ ಕನಸು ದೀಪಿಕಾರನ್ನು ಆಟದಿಂದ ಮತ್ತೊಂದು ದಿಕ್ಕಿಗೆ ಸೆಳೆಯಿತು. ಮಾಡೆಲ್ ಆಗಿ ಜರ್ನಿ ಆರಂಭಿಸಿ, ಬಾಲಿವುಡ್ ತಾರೆಯಾಗಿ ಮಿಂಚುತ್ತಿದ್ದಾರೆ ಇಂದು. ಕನ್ನಡದ ಐಶ್ವರ್ಯಾದಲ್ಲಿ ಉಪೇಂದ್ರ ಅವರೊಂದಿಗೆ ನಟಿಸಿ, ಓಂ ಶಾಂತಿ ಓಂ ಮೂಲಕ ಬಾಲಿವುಡ್ ಪ್ರವೇಶಿಸಿದರು. ಇವರು ನಟನೆ ಕಲಿತ್ತಿದ್ದು ಅನುಪಮ್ ಖೇರ್‌ನಿಂದವಂತೆ.