ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವನ ಕುತಂತ್ರದಿಂದ ಭೂಮಿಕಾ ಕಾರು ಪ್ರಪಾತಕ್ಕೆ ಬಿದ್ದಿದ್ದು, ಅವಳ ಪ್ರಾಣಕ್ಕೆ ಕುತ್ತು ಬಂದಿದೆ. ಇನ್ನೊಂದೆಡೆ ಮಲ್ಲಿ ಪಾತ್ರಧಾರಿ ನಟಿ ಅನ್ವಿತಾ ಸಾಗರ್ ತಮ್ಮ ಮೊದಲ ಅಂತರರಾಷ್ಟ್ರೀಯ ಟ್ರಿಪ್‌ಗಾಗಿ ದುಬೈಗೆ ತೆರಳಿದ್ದಾರೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಜೈದೇವನ ಕುತಂತ್ರದಿಂದ ಭೂಮಿಕಾ ಪ್ರಾಣಕ್ಕೆ ಕುತ್ತು ಉಂಟಾಗಿದೆ. ಭೂಮಿಕಾ ಜಾಗದಲ್ಲಿ ಅವಳ ಅವಳಿ ಸಹೋದರಿ ದೀಪಿಕಾಳನ್ನು ತರಲು ಸ್ಕೆಚ್ ಹಾಕ್ತಿರೋ ಜೈದೇವ್ ಮತ್ತು ಶಕುಂತಲಾ, ಭೂಮಿಕಾ ಕಾರನ್ನು ಪ್ರಪಾತಕ್ಕೆ ಬೀಳಿಸಿ ಕೊಲೆ ಮಾಡಲು ಹೊರಟಿದ್ದು, ಅದರಂತೆಯೇ ಕಾರು ಪ್ರಪಾತಕ್ಕೆ ಬಿದ್ದಿದೆ. ಮುಂದೇನು ಎನ್ನುವುದೇ ಸದ್ಯಕ್ಕಿರುವ ಕುತೂಹಲ.
26
ದುಬೈನಲ್ಲಿ ಮಲ್ಲಿ
ಇದು ಅಮೃತಧಾರೆ ಸ್ಟೋರಿಯಾದ್ರೆ, ಜೈದೇವನನ್ನು ಹಿಡಿಯಲು ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಕೊಂಡಿದ್ದಾಳೆ ಮಲ್ಲಿ. ಆದ್ರೆ ರಿಯಲ್ ಲೈಫ್ನಲ್ಲಿ ಮಲ್ಲಿ ಅರ್ಥಾತ್ ನಟಿ ಅನ್ವಿತಾ ಸಾಗರ್ (Anvita Sagar) ದುಬೈ ಟೂರ್ಗೆ ಹೋಗಿದ್ದು, ಅದರ ವಿಭಿನ್ನ ರೀತಿಯ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
36
ದುಬೈ ಪ್ರಪಂಚ
ಚಿಕ್ಕ ರೀಲ್ಸ್ನಲ್ಲಿ ಇಡೀ ದುಬೈ ಪ್ರಪಂಚವನ್ನೇ ನಟಿ ತೋರಿಸಿದ್ದಾರೆ. ಇದು ತಮ್ಮ ಜೀವನದ ಮೊದಲ ಅಂತರರಾಷ್ಟ್ರೀಯ ಟ್ರಿಪ್ ಎಂದು ನಟಿ ಅನ್ವಿತಾ ಬರೆದುಕೊಂಡಿದ್ದಾರೆ..
ಇನ್ನು ನಟಿಯ ಕುರಿತು ಹೇಳುವುದಾದರೆ, ಅವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ.
56
ಅಮೃತಧಾರೆ ಮೂಲಕ ಕಮ್ಬ್ಯಾಕ್
ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್ಎಲ್ಬಿ ಸೀರಿಯಲ್ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.
66
ಸಿನಿಮಾದಲ್ಲಿಯೂ ನಟನೆ
ಸೀರಿಯಲ್ನಲ್ಲಿ, ಅವಕಾಶ ಇದ್ದರೂ ಸಿನಿಮಾಕ್ಕೆ ಬರಲು ಕಾರಣವನ್ನೂ ತಿಳಿಸಿರುವ ಅವರು, ಧಾರಾವಾಹಿಗೆ ಅಂಟಿಕೊಂಡಿರುವುದು ಬೇಡ ಎಂದುಕೊಂಡೆ. ಸಿನಿಮಾಕ್ಕೆ ಬರಬೇಕು ಎನ್ನುವ ಹಂಬಲ ಇತ್ತು. ಇದೀಗ ಬಣ್ಣದ ಲೋಕಕ್ಕೆ ಬಂದು 10 ವರ್ಷನೇ ಆಗಿದೆ. ಸೀರಿಯಲ್ನಲ್ಲಿಯೂ ಸಾಕಷ್ಟು ಡಿಮಾಂಡ್ ಇದ್ದರೂ, ಸಿನಿಮಾ ನನ್ನ ಮೊದಲ ಪ್ರೀತಿ. ಐತಿಹಾಸಿಕ, ಪೌರಾಣಿಕ ಪಾತ್ರ ಮಾಡುವ ಆಸೆ ಕೂಡ ಇದೆ ಎಂದಿದ್ದಾರೆ ಅನ್ವಿತಾ. ಅಂದಹಾಗೆ ಈ ಚಿತ್ರಕ್ಕಾಗಿ ಅವರು ಪಾರ್ವತಿ ಎನ್ನುವ ಹೆಸರು ಇಟ್ಟುಕೊಂಡಿದ್ದಾರೆ. ತಮ್ಮ ಅಜ್ಜ ಈ ಹೆಸರು ಇಟ್ಟಿರುವುದಾಗಿ ಅನ್ವಿತಾ ಹೇಳಿದ್ದಾರೆ. ಆದ್ದರಿಂದ ಚಿತ್ರದಲ್ಲಿ ಪಾರ್ವತಿ ಎಂದೇ ಹೆಸರು ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.