ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಸೀಮಂತ ಸಂಭ್ರಮ: ಕ್ಯೂಟ್‌ ವಿಡಿಯೋಸ್‌, ಫೋಟೋಸ್​ ವೈರಲ್‌

Published : Sep 23, 2026, 08:02 PM IST

'ಜೊತೆ ಜೊತೆಯಲಿ' ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರ ಅಕ್ಕ ಸುಷ್ಮಾ ಶೆಟ್ಟಿ ಗರ್ಭಿಣಿಯಾಗಿದ್ದು, ಅವರ ಸೀಮಂತ ಕಾರ್ಯಕ್ರಮ ಜರುಗಿದೆ. ಈ ಹಿಂದೆ ಸುಷ್ಮಾ ಮತ್ತು ವಿನೋದ್ ದಂಪತಿ ಬೇಬಿ ಬಂಪ್ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದರು.

PREV
16
ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ

ʻಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರ ಕುಟುಂಬದಲ್ಲೀಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ಮೇಘಾ ಶೆಟ್ಟಿ ಅವರ ಪ್ರೀತಿಯ ಅಕ್ಕ ಸುಷ್ಮಾ ಶೆಟ್ಟಿ ಹಾಗೂ ಭಾವ ವಿನೋದ್‌ ದಂಪತಿ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ಸೀಮಂತ ಕಾರ್ಯಕ್ರಮ ನಡೆದಿದೆ.

26
ಮೇಕಪ್‌ ಆರ್ಟಿಸ್ಟ್‌

ಮೇಘಾ ಶೆಟ್ಟಿ ಅವರ ಅಕ್ಕ ಅವರು ಮೇಕಪ್‌ ಆರ್ಟಿಸ್ಟ್‌ ಆಗಿದ್ದಾರೆ. ಇವರು, 2022ರಲ್ಲಿ ವಿನೋದ್‌ ಎಂಬುವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ, ಈ ದಂಪತಿ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

36
ಸಿಹಿ ಶೇರ್‌ ಮಾಡಿದ ನಟಿ

ತುಂಬು ಗರ್ಭಿಣಿಯಾಗಿರುವ ಸುಷ್ಮಾ ಶೆಟ್ಟಿ ಅವರು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಈ ಸಿಹಿ ಸುದ್ದಿಯನ್ನ ಶೇರ್‌ ಮಾಡಿಕೊಂಡಿದ್ದರು. ಇಂದು ಸೀಮಂತ ಕಾರ್ಯಕ್ರಮ ನಡೆದಿದ್ದು, ಕುಟುಂಬ ಸದಸ್ಯರು ಬಂದು ಶುಭ ಹಾರೈಸಿದ್ದಾರೆ.

46
ವಿಶೇಷ ಫೋಟೋಶೂಟ್‌

ಈ ಹಿಂದೆ, ಈ ಜೋಡಿ, ತಮ್ಮ ಜೀವನದ ಹೊಸ ಅಧ್ಯಾಯವನ್ನ ಸಂಭ್ರಮಿಸಲು ಸುಷ್ಮಾ ಶೆಟ್ಟಿ ಮತ್ತು ವಿನೋದ್‌ ದಂಪತಿ ವಿಶೇಷ ಫೋಟೋಶೂಟ್‌ ಹಾಗೂ ಕ್ಯೂಟ್‌ ವಿಡಿಯೋ ಒಂದನ್ನ ಶೇರ್‌ ಮಾಡಿಕೊಂಡಿದ್ದಾರೆ. ಬ್ಲ್ಯಾಕ್ ಆಂಡ್‌ ಬ್ಲ್ಯಾಕ್ ಕ್ಯೂಟ್‌ ಔಟ್‌ಫಿಟ್‌ನಲ್ಲಿ ಮಿಂಚಿರುವ ಈ ಜೋಡಿ, ಪ್ರೀತಿಯಿಂದ ಬೇಬಿ ಬಂಪ್‌ ಹಿಡಿದು ಪೋಸ್‌ ನೀಡಿದ್ದರು.

56
ಇನ್ನೋರ್ವ ಅಕ್ಕನ ಮದುವೆ

ನಟಿ ಮೇಘಾ ಶೆಟ್ಟಿ (Megha Shetty) ಅವರಿಗೆ ಇನ್ನೋರ್ವ ಅಕ್ಕ ಇದ್ದು, ಅವರ ಹೆಸರು ನಿಶಾ ಶೆಟ್ಟಿ. ಅವರ ಮದುವೆ 2024ರಲ್ಲಿ ನಡೆದಿದೆ. ಮೇಘಾ ಸಹೋದರಿ ನಿಶಾ ಕೂಡ ನಟಿಯಾಗಿ ಮಿಂಚಿದವರು.

66
ಕ್ರೈಸ್ತ ಪದ್ಧತಿಯಂತೆ ಮದುವೆ

ಸಹೋದರಿ ನಿಶಾ ಶೆಟ್ಟಿಗೆ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿಯಂತೆ ಅದ್ಧೂರಿಯಾಗಿ ಮದುವೆ ನಡೆದಿದ್ದು, ಈ ಸಮಾರಂಭದಲ್ಲಿ ‘ಜೊತೆ ಜೊತೆಯಲಿ’ ಸೀರಿಯಲ್ ಟೀಮ್, ನಟಿ ಶರಣ್ಯಾ ಶೆಟ್ಟಿ, ಯಶವಂತ್, ಕಾವ್ಯಾ ರಮೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories