MBBS ಓದಿದ್ರೂ ಡಾಕ್ಟರ್ ಆಗ್ಲಿಲ್ಲ, ಆಕ್ಸಿಡೆಂಟಲಿ ನಟಿಯಾದೆ: ಮನಬಿಚ್ಚಿ ಮಾತಾಡಿದ ಐಶ್ವರ್ಯ

Published : Jul 05, 2026, 08:18 PM IST

ನಾನು ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿದ್ದರೂ, ಆಕಸ್ಮಿಕವಾಗಿ ನಟನೆಗೆ ಬಂದಿದ್ದರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಅವಕಾಶವೇ ಸಿಕ್ಕಿಲ್ಲ ಎಂದು ನಟಿ ಐಶ್ವರ್ಯ ಲಕ್ಷ್ಮಿ ಹೇಳಿಕೊಂಡಿದ್ದಾರೆ.

PREV
14
ಸೋಷಿಯಲ್ ಮೀಡಿಯಾದಿಂದ ದೂರ

‘ಞಂಡುಗಳಿಂಡೆ ನಾಟ್ಟಿಲ್ ಒರಿಡವೇಳ’ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟವರು ನಟಿ ಐಶ್ವರ್ಯ ಲಕ್ಷ್ಮಿ. ನಂತರ 'ಮಯಾನದಿ', 'ವರತನ್' ಚಿತ್ರಗಳ ಮೂಲಕ ಮಲಯಾಳಿ ಪ್ರೇಕ್ಷಕರ ಮನಗೆದ್ದರು. ತಮಿಳು ಮತ್ತು ತೆಲುಗಿನಲ್ಲೂ ಗಮನಾರ್ಹ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುವುದಾಗಿ ಹೇಳಿದ್ದ ಐಶ್ವರ್ಯ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿಲ್ಲ.

24
ನನಗೆ ಚಾನ್ಸ್ ಸಿಕ್ಕಿಲ್ಲ

ಇದೀಗ ತಮ್ಮ ಎಂಬಿಬಿಎಸ್ ಓದಿನ ಬಗ್ಗೆ ಐಶ್ವರ್ಯ ಲಕ್ಷ್ಮಿ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎಂಬಿಬಿಎಸ್ ಓದಿದ್ರೂ, ಇಲ್ಲಿಯವರೆಗೆ ಯಾರಿಗೂ ಚಿಕಿತ್ಸೆ ನೀಡುವ ಅವಕಾಶ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ನಾನು ಒಬ್ಬ ಡಾಕ್ಟರ್. ನನ್ನ ಎಂಬಿಬಿಎಸ್ ಓದು ಮುಗಿಸಿದ್ದೇನೆ. ಆದರೆ, ಅದಾದ ಮೇಲೆ ಜನರಿಗೆ ಚಿಕಿತ್ಸೆ ನೀಡೋಕೆ ನನಗೆ ಚಾನ್ಸ್ ಸಿಕ್ಕಿಲ್ಲ. ತುಂಬಾ ಕಷ್ಟಪಟ್ಟು ಓದಿ ಪಾಸ್ ಆಗಿದ್ದು.

34
ಡಾಕ್ಟರ್ ಆಗೋದು ಸುಲಭದ ಮಾತಲ್ಲ

ನನಗೆ ಡಾಕ್ಟರ್ ಆಗಿ ಇರೋಕೆ ತುಂಬಾ ಇಷ್ಟ. ಆದರೆ, ತುಂಬಾನೇ ಆಕಸ್ಮಿಕವಾಗಿ ನಟಿಯಾಗಿಬಿಟ್ಟೆ. ಅದೆಲ್ಲಾ ದೇವರ ಪ್ಲಾನ್. ಡಾಕ್ಟರ್ ಆಗೋದು ಸುಲಭದ ಮಾತಲ್ಲ, ಅದಕ್ಕೆ ಕನಿಷ್ಠ 8 ವರ್ಷ ಬೇಕು ಎಂದು ಐಶ್ವರ್ಯ ಲಕ್ಷ್ಮಿ ಹೇಳಿದ್ದಾರೆ. ಮಣಿರತ್ನಂ-ಕಮಲ್ ಹಾಸನ್ ಜೋಡಿಯ 'ಥಗ್ ಲೈಫ್' ಚಿತ್ರದಲ್ಲಿ ಐಶ್ವರ್ಯ ಲಕ್ಷ್ಮಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು 'ಚಂದ್ರ' ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

44
ಐದು ಭಾಷೆಗಳಲ್ಲಿ ನಿರ್ಮಾಣ

'ಗಟ್ಟ ಕುಸ್ತಿ' ಚಿತ್ರವು ಐಶ್ವರ್ಯ ನಟನೆಯ ಕೊನೆಯ ಥಿಯೇಟರ್ ರಿಲೀಸ್ ಆಗಿತ್ತು. ಸದ್ಯ, ಜೋಜು ಜಾರ್ಜ್ ಮತ್ತು ಊರ್ವಶಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ಆಶಾ' ಐಶ್ವರ್ಯ ಅವರ ಹೊಸ ಸಿನಿಮಾ. ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಹೊಸ ನಿರ್ದೇಶಕ ಸಫರ್ ಸನಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories