ಗಂಡನೋ, ಪಾನಿಪುರಿಯೋ? ಯಾರನ್ನು ಸೆಲೆಕ್ಟ್​ ಮಾಡ್ತೀರಾ ಕೇಳಿದ್ದಕ್ಕೆ Vaishnavi Gowda ಹೇಳಿದ್ದೇನು ಕೇಳಿ!

Published : Aug 21, 2025, 10:17 AM IST

ಸೀತಾರಾಮ ಸೀತೆ ಉರ್ಫ್​ ನಟಿ ವೈಷ್ಣವಿ ಗೌಡ ಅವರಿಗೆ ಗಂಡ ಮತ್ತು ಪಾನಿಪುರಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದ್ರೆ ನಟಿ ಹೇಳಿದ್ದೇನು ನೋಡಿ! 

PREV
18
ಎಲ್ಲರನ್ನೂ ಆಕರ್ಷಿಸೋ ಪಾನಿಪುರಿ

ಪಾನಿಪುರಿ ಅಂದ್ರೆ ಇಷ್ಟಪಡದವರು ತುಂಬಾ ಕಮ್ಮಿ ಎನ್ನಬಹುದೇನೋ. ಬೇಡ ಬೇಡ ಎಂದರೂ ಅದು ಘಮ್​ ಎನ್ನುತ್ತಿದ್ದರೆ ಒಂದಾದರೂ ತಿಂದೇ ಬಿಡೋಣ ಎನ್ನಿಸುತ್ತದೆ. ಯಾರು ಎಷ್ಟೇ ಡಯೆಟ್​ ಮಾಡಿದ್ರೂ, ರೋಡ್​ಸೈಡ್​ ಇಂಥ ತಿನಿಸು ಆರೋಗ್ಯಕ್ಕೆ ಮಾರಕ ಎಂದೆಲ್ಲಾ ಭಾಷಣ ಬಿಗಿದರೂ ಪಾನಿಪುರಿಯ ಸೆಳೆತ ಬಹುಶಃ ಯಾರನ್ನೂ ಬಿಟ್ಟಂತಿಲ್ಲ. ಸೀತಾರಾಮ ಸೀರಿಯಲ್​ನಲ್ಲಿ ಸೀತೆಯ ಮೂಲಕ ಫೇಮಸ್​ ಆಗಿರೋ ನಟಿ ವೈಷ್ಣವಿ ಗೌಡ ಅವರಿಗೂ ಪಾನಿಪುರಿ ಎಂದ್ರೆ ತುಂಬಾ ಇಷ್ಟ.

28
ಪಾನಿಪುರಿ ಸ್ಟಾಲ್​ ಬಳಿ ವೈಷ್ಣವಿ ಗೌಡ

ಪಾನಿಪುರಿ ಸ್ಟಾಲ್​ ಬಳಿ ಇದ್ದ ಅವರನ್ನು ಗಂಡ ಮತ್ತು ಪಾನಿಪುರಿ ಎರಡಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳೋದಾದ್ರೆ ಯಾವುದನ್ನು ಆಯ್ಕೆ ಮಾಡಿಕೊಳ್ತಿರಿ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ನಟಿ ಸುಂದರವಾಗಿ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ ನಟಿ ವೈಷ್ಣವಿ ಗೌಡ ಅವರು, ಉತ್ತರಾಖಂಡ ಮೂಲದ ಅನುಕೂಲ್‌ ಮಿಶ್ರಾ ಜೊತೆ ಮದುವೆಯಾಗಿದ್ದಾರೆ. ಮೆಟ್ರಿಮೋನಿಯಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್‌ ಆಗಿತ್ತು. ಆದ್ರೆ ಸೀಕ್ರೇಟ್​ ಆಗಿ ಇಟ್ಟಿದ್ದರು. ಕೊನೆಗೆ ರಿವೀಲ್​ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

38
ಅನುಕೂಲ್‌ ಮಿಶ್ರಾ ಜೊತೆ ನಟಿಯ ಮದುವೆ

ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್‌ ಅವರು ಆರ್ಮಿಯಲ್ಲಿದ್ದಾರೆ. ಅನುಕೂಲ್‌ ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಇಲ್ಲಿಯೇ ಇರಲಿದ್ದಾರೆ. ಅಂದಹಾಗೆ ಮದುವೆ ಬಳಿಕವೂ ವೈಷ್ಣವಿ ಗೌಡ ಅವರು ನಟಿಸಲಿದ್ದಾರಂತೆ. ಅವರಂತೂ ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.

48
ರೀಲ್ಸ್​ ಮುಂದುವರಿಸಿರೋ ವೈಷ್ಣವಿ ಗೌಡ

ನಟಿ, ಈಗ ಹೊಸದಾಗಿ ಮದ್ವೆಯಾಗಿರುವ ಕಾರಣ ಬಣ್ಣದ ಲೋಕದಿಂದ ಸ್ವಲ್ಪ ವಿರಾಮ ತೆಗೆದುಕೊಂಡರೂ ರೀಲ್ಸ್​ಗೇನೂ ಕಡಿಮೆ ಇಲ್ಲ. ಆಗೀಗ ಸೋಷಿಯಲ್​ ಮೀಡಿಯಾದಲ್ಲಿ ನಟಿ ಕಾಣಿಸಿಕೊಂಡು ರೀಲ್ಸ್​ ಮಾಡುತ್ತಿರುತ್ತಾರೆ. ಜೊತೆಗೆ ಒಂದಿಷ್ಟು ಈವೆಂಟ್​ಗಳಿಗೂ ಇವರಿಗೆ ಆಹ್ವಾನ ಬರುತ್ತಲೇ ಇರುತ್ತದೆ.

58
ವೈಷ್ಣವಿ ಗೌಡಗೆ ಎದುರಾಯ್ತು ಪಾನಿಪುರಿ ಪ್ರಶ್ನೆ

ಇದೀಗ ಪಾನಿಪುರ ಬಳಿ ಅವರಿಗೆ ಕೇಳಿದ ಪ್ರಶ್ನೆಗೆ ವೈಷ್ಣವಿ ಗೌಡ ಅವರು, ಗಂಡನೇ ಎಲ್ಲಾ ಅಂತ ಇರಬೇಕಾದ್ರೆ ಪಾನಿಪುರಿ ಯಾವ ಲೆಕ್ಕ? ಗಂಡನಿಗಿಂತ ಪಾನಿಪುರಿ ಹೆಚ್ಚಾ ಹೇಳಿ ಎಂದು ಹೇಳಿದ್ದಾರೆ. ಪಾನಿಪುರಿ ಬಿಟ್ಟುಬಿಡು ಎಂದ್ರೆ ಗಂಡನಿಗಿಂತ ಅದೇನೂ ಹೆಚ್ಚಲ್ಲ ಎಂದು ಪಾನಿಪುರಿಯನ್ನು ಕೈಯಲ್ಲಿ ಹಿಡಿದುಕೊಂಡೇ ಮಾತನಾಡಿದ್ದಾರೆ.

68
ಮಂಗಳಸೂತ್ರ ಗಲಾಟೆ

ಇದಾಗಲೇ ನಟಿ ವೈಷ್ಣವಿ ಗೌಡ ಅವರು ಮಂಗಳಸೂತ್ರ ಹಾಕಿಕೊಳ್ಳುತ್ತಿಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು ಇದೆ. ಅದಕ್ಕೆ ನಟಿ ನೇರಪ್ರಸಾರದಲ್ಲಿ ಬಂದು ಮಂಗಳಸೂತ್ರದ ವಿಷಯಕ್ಕೆ ಸ್ಪಷ್ಟನೆ ಕೊಟ್ಟಿದ್ದರು. “ನಮ್ಮ ಸಂಪ್ರದಾಯಕ್ಕೆ ಗೌರವ ಕೊಡೋದಿಲ್ವಾ? ತಾಳಿ ಬೇಡ ಅಂದ್ರೆ ಯಾಕೆ ಮದುವೆ ಆದ್ರಿ ಅಂತ ಕೆಲವರು ಕೇಳಿದ್ದಾರೆ.

78
ನಟಿಯಿಂದ ಮದುವೆ ಬಗ್ಗೆ ಮಾಹಿತಿ

ಹುಡುಗನ ಮನೆಯಲ್ಲಿ ಯಾವ ಪದ್ಧತಿ ಇದೆಯೋ ಅದನ್ನೇ ಹುಡುಗಿ ಕೂಡ ಅನುಸರಿಸುತ್ತಾಳೆ. ಅದೇ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಹುಡುಗನ ಪದ್ಧತಿಯಂತೆ ನಮ್ಮ ಮದುವೆ ಆಯ್ತು. ತಾಳಿ ಹಾಕಿಲ್ಲ ಅಂತ ಕೆಲವರು ಕೇಳಿದ್ದೀರಾ. ನನ್ನ ಅತ್ತೆ ಕೂಡ ಇದುವರೆಗೂ ತಾಳಿ ಹಾಕಿಲ್ಲ. ತಾಳಿ ಹಾಕುವ ಪದ್ಧತಿ ನಮ್ಮಲ್ಲಿ ಇಲ್ಲ” ಎಂದು ವೈಷ್ಣವಿ ಗೌಡ ಹೇಳಿದ್ದರು.

88
ತಾಳಿಯ ಬಗ್ಗೆ ಸ್ಪಷ್ಟನೆ ಕೊಟ್ಟ ವೈಷ್ಣವಿ

“ತಾಳಿ ಹಾಕೋದು ಅವರ ಪದ್ಧತಿಯಲ್ಲಿ ಇಲ್ಲ, ಅದು ನಮಗೆ ಮುಖ್ಯ ಅಲ್ಲ ಎಂದರು. ಮೂಗು ಚುಚ್ಚಿಸಿರಬೇಕು, ಕೈಯಲ್ಲಿ ಗಾಜಿನ ಬಳೆ ಇರಬೇಕು, ಕೈಯಲ್ಲಿ ಒಂದು ದಾರ ಇರಬೇಕು, ಕಾಲುಂಗುರ ಹಾಕಿರಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಮನೆಯಲ್ಲಿ ಈ ಪದ್ಧತಿ ಇಲ್ಲ ಎಂದು ಹಾಕುತ್ತಿಲ್ಲ ಅಷ್ಟೇ” ಎಂದು ವೈಷ್ಣವಿ ಗೌಡ ಹೇಳಿದ್ದರು.

ಪ್ರೆಸ್​ನ್ಯೂಸ್​ ಶೇರ್​ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ:

Read more Photos on
click me!

Recommended Stories