ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಬೆಳೆಯುತ್ತಿರುವ ಶ್ರೀಲೀಲಾ ಅವರು ಧಮಾಕಾ ಸಿನಿಮಾ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಡೆದರು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಸ್ಕಂದ, ಭಗವಂತ ಕೇಸರಿ, ಗುಂಟೂರು ಖಾರಂ ಸೇರಿದಂತೆ 13ಕ್ಕೂ ಹೆಚ್ಚು ಪ್ರಾಜೆಕ್ಟ್ಗಳಿಗೆ ಸಹಿ ಹಾಕಿದ್ದಾರೆ.