ಮಂತ್ರಾಲಯಕ್ಕೆ ಭೇಟಿ ನೀಡಿದ ಸಾರಾ ಅಣ್ಣಯ್ಯ: ಸೀರೆಯುಟ್ಟು ರಾಯರ ದರ್ಶನ ಪಡೆದ ನಟಿ

First Published | Jun 5, 2023, 9:23 PM IST

ಟಿವಿ ಪರದೆ ಮೇಲೆ ಯಾವಾಗ್ಲೂ ವೆಸ್ಟರ್ನ್​ ಡ್ರೆಸ್​ಗಳಲ್ಲೇ ಕಾಣಿಸಿಕೊಳ್ಳುವ ಸಾರಾ ಅಣ್ಣಯ್ಯ ಅವರು ಇದೀಗ ಮಂತ್ರಾಲಯಕ್ಕೆ ಭೇಟಿ ನೀಡಿರುವ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಕನ್ನಡತಿ ಧಾರಾವಾಹಿಯ ವರೂಧಿನಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಅವರು ಟ್ರೆಡಿಷನಲ್​​ ಲುಕ್​ನಲ್ಲಿ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ.

ಹೌದು! ಟಿವಿ ಪರದೆ ಮೇಲೆ ಯಾವಾಗ್ಲೂ ವೆಸ್ಟರ್ನ್​ ಡ್ರೆಸ್​ಗಳಲ್ಲೇ ಕಾಣಿಸಿಕೊಳ್ಳುವ ಸಾರಾ ಅಣ್ಣಯ್ಯ ಅವರು ಇದೀಗ ಮಂತ್ರಾಲಯಕ್ಕೆ ಭೇಟಿ ನೀಡಿರುವ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

Tap to resize

ಶ್ರೀ ಗುರು ರಾಘವೇಂದ್ರ ರಾಯರ ದರ್ಶನ ಮಾಡಲು ನಟಿ ಸಾರಾ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಪಕ್ಕಾ ಟ್ರೆಡಿಷನಲ್​​ ಲುಕ್​ನಲ್ಲಿ ಬಿಳಿ ಸೀರೆಯನ್ನುಟ್ಟು ಕಾಣಿಸಿಕೊಂಡಿದ್ದಾರೆ.

ಸೀರೆಯಲ್ಲಿ ದೇವತೆಯಂತೆ ಕಾಣಿಸಿಕೊಂಡ ಸಾರಾ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ಗುರು ರಾಯರ ದರ್ಶನ ಪಡೆದಿದ್ದು, ಆ ಕ್ಷಣಗಳನ್ನು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇನ್ನು ಅಮೃತಧಾರೆ ಧಾರಾವಾಹಿಗೆ ನಟಿ ಸಾರಾ ಅಣ್ಣಯ್ಯ ಅವರು ಎಂಟ್ರಿ ಕೊಟ್ಟಿದ್ದಾರೆ. ಸಾರಾ ಅವರು ಮಹಿಮಾ ಎಂಬ ಪಾತ್ರ ಮಾಡ್ತಾ ಇದ್ದಾರೆ. ಮಹಿಮಾ, ನಟ ಗೌತಮ್ ದಿವಾನ್‍ನ ಮುದ್ದಿನ ತಂಗಿ. ಫ್ಯಾಶನ್ ಡಿಸೈನಿಂಗ್ ಲೋಕದ ಕ್ವೀನ್. ಬಯಸಿದ್ದೆಲ್ಲಾ ತನ್ನದಾಗಬೇಕು ಎಂಬ ಹುಚ್ಚು.

ಸದ್ಯ ಸಾರಾ ಅಣ್ಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ತಾ ಇರ್ತಾರೆ. ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ. ಈಗ ಮಹಿಮಾ ಆಗಿ ಅಭಿಮಾನಿಗಳಿಗೆ ಮೋಡಿ ಮಾಡ್ತಾ ಇದ್ದಾರೆ.

Latest Videos

click me!