ಲಿಪ್‌ಕಿಸ್ ಫೋಟೋ ಹರಿಬಿಟ್ಟ ಖ್ಯಾತ ಆ್ಯಂಕರ್ ಅನಸೂಯಾ: ಬೀಚ್‌ನಲ್ಲಿ ಮಸ್ತ್ ಎಂಜಾಯ್

Published : Jun 05, 2023, 01:18 PM ISTUpdated : Jun 05, 2023, 01:19 PM IST

ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಅನಸೂಯ ಭಾರದ್ವಜ್ ಪತಿ ಜೊತೆ ಲಿಪ್‌ಕಿಸ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅನಸೂಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

PREV
16
ಲಿಪ್‌ಕಿಸ್ ಫೋಟೋ ಹರಿಬಿಟ್ಟ ಖ್ಯಾತ ಆ್ಯಂಕರ್ ಅನಸೂಯಾ: ಬೀಚ್‌ನಲ್ಲಿ ಮಸ್ತ್ ಎಂಜಾಯ್

ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಅನಸೂಯಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಪ್ರವಾಸದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ನಟಿ, ನಿರೂಪಕಿ ಅನಸೂಯಾ ಲಿಪ್‌ಕಿಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 

26

ಅನಸೂಯ ಸದ್ಯ ಪ್ರವಾಸದಲ್ಲಿದ್ದಾರೆ. ಪತಿ ಸುಶಾಂಕ್ ಭಾರದ್ವಾಜ್ ಜೊತೆ ಅನಸೂಯಾ ಟ್ರಿಪ್ ಎಂಜಾಯ್ ಮಾಡುತ್ತಿದ್ದು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಪತಿ ಜೊತೆ ಲಿಪ್‌ಕಿಸ್ ಮಾಡಿರುವ ಫೋಟೋಗಳನ್ನು ಹರಿಬಿಟ್ಟಿದ್ದಾರೆ. 

36

ಅಂದಹಾಗೆ ಅನಸೂಯ ಮತ್ತು ಸುಶಾಂಕ್ ಭಾರದ್ವಾಜ್  ದಂಪತಿ ಥೈಲ್ಯಾಂಡ್‌ನಲ್ಲಿದ್ದಾರೆ. ಇಬ್ಬರೂ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

46

ಆಂಕರ್ ಅನಸೂಯಾ ಅವರು ತಮ್ಮ ನಿರೂಪಣೆ ಕೌಶಲ್ಯ ಮತ್ತು ಸಿನಿಮಾಗಳಲ್ಲಿ ಬಹುಮುಖ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅಂದಹಾಗೆ ಈ ಜೋಡಿ ತಮ್ಮ 13 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.  ವಿವಾಹ ವಾರ್ಷಿಕೋತ್ಸವಕ್ಕೆ ಥೈಲ್ಯಾಂಡ್‌ಗೆ ತೆರಳಿದ್ದು ಅಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ.

56

ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ, ಆಂಕರ್ ಅನಸೂಯ ಬಿಡುವು ಮಾಡಿಕೊಂಡು ಪತಿ ಜೊತೆ ಪ್ರವಾಸಕ್ಕೆ ಹಾರಿದ್ದಾರೆ. ಸದ್ಯ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಪೋಟೋಗಳು ವೈರಲ್ ಆಗಿವೆ. 

66

ಸಿನಿಮಾ ವಿಚಾರಕ್ಕೆ ಬರುವುದಾದರೆ ಅನಸೂಯಾ ಸದ್ಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪುಷ್ಪ-2, ಫ್ಲ್ಯಾಶ್‌ಬ್ಯಾಕ್, ರಂಗಮಾರ್ತಾಂಡ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

Read more Photos on
click me!

Recommended Stories