ನಾನು ಆ ಚಿತ್ರಕ್ಕೆ ಕರೆಕ್ಟ್ ಆಯ್ಕೆ ಅಲ್ಲ ಅನ್ನಿಸಿತ್ತು: ನಟಿ ಸಾಯಿ ಪಲ್ಲವಿ ಹೀಗಾ ಹೇಳೋದು!

Published : May 08, 2026, 04:17 PM IST

ಈ ಸಿನಿಮಾ ಕತೆ ಕೇಳಿದಾಗ ನನಗೆ ಹಾಲಿವುಡ್‌ನ ‘ಬಿಫೋರ್‌ ಸನ್‌ರೈಸ್’ ಸಿನಿಮಾ ನೆನಪಿಗೆ ಬಂತು. ಅದೇ ರೀತಿ ಈ ಸಿನಿಮಾ ಇರುತ್ತದೆ ಎಂದು ‘ಏಕ್‌ ದಿನ್‌’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದರು ಸಾಯಿ ಪಲ್ಲವಿ.

PREV
14
ನಾನು ಸೂಕ್ತವಲ್ಲ ಎಂದಿದ್ದೆ

ನಾನು ಆ ಚಿತ್ರಕ್ಕೆ ಕರೆಕ್ಟ್ ಆಯ್ಕೆ ಅಲ್ಲ ಅನ್ನಿಸಿತ್ತು’. ಹೀಗೆ ಹೇಳಿದ್ದು ನಟಿ ಸಾಯಿ ಪಲ್ಲವಿ. ಅವರ ಈ ಮಾತು ಹಿಂದಿಯ ‘ಏಕ್‌ ದಿನ್‌’ ಚಿತ್ರದ ಬಗ್ಗೆ. ಅಮೀರ್‌ ಖಾನ್‌ ಪುತ್ರ ಜುನೈದ್‌ ಖಾನ್‌ ಜೊತೆಗೆ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದರು.

24
ಖುಷಿಪಟ್ಟೆ

ನಾನು ಬೇರೆ ಬೇರೆ ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಆದರೆ, ಲೈಟ್ ಆಗಿರುವ ಹಾಗೂ ಹೆಚ್ಚು ಭಾವನಾತ್ಮಕವಾಗಿರುವ ಸಿನಿಮಾ ಮಾಡುವಾಸೆ ಇತ್ತು. ‘ಏಕ್‌ ದಿನ್‌’ ಸಿನಿಮಾ ತಂಡ ನನ್ನ ಭೇಟಿ ಮಾಡಿ ಕತೆ ಹೇಳಿದಾಗ ನಾನು ನಿರೀಕ್ಷೆ ಮಾಡಿದ್ದ ಕತೆಯೇ ಸಿಕ್ಕಿದೆ ಎಂದು ಖುಷಿಪಟ್ಟೆ.

34
ಸೂಕ್ತ ಆಯ್ಕೆ ಅಲ್ಲ

ಅಲ್ಲದೆ ಈ ಸಿನಿಮಾ ಕತೆ ಕೇಳಿದಾಗ ನನಗೆ ಹಾಲಿವುಡ್‌ನ ‘ಬಿಫೋರ್‌ ಸನ್‌ರೈಸ್’ ಸಿನಿಮಾ ನೆನಪಿಗೆ ಬಂತು. ಅದೇ ರೀತಿ ಈ ಸಿನಿಮಾ ಇರುತ್ತದೆ ಎಂದು ‘ಏಕ್‌ ದಿನ್‌’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಆದರೆ, ಪ್ರೀಮಿಯರ್‌ ಶೋನಲ್ಲಿ ಸಿನಿಮಾ ನೋಡಿದ ಮೇಲೆ, ನಾನು ಸೂಕ್ತ ಆಯ್ಕೆ ಅಲ್ಲ.

44
ನನ್ನ ಮಾತು ಒಪ್ಪಲಿಲ್ಲ

ನನ್ನ ಪಾತ್ರಕ್ಕೆ ಬೇರೆ ಹೊಸ ನಟಿಯನ್ನು ಸೆಲೆಕ್ಟ್‌ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲದೆ ಚಿತ್ರೀಕರಣದ ಸಮಯದಲ್ಲೇ ನಾನು ಸೂಕ್ತ ಆಯ್ಕೆ ಅಲ್ಲ ಎಂದು ಜುನೈದ್‌ ಖಾನ್‌ಗೂ ಹೇಳಿದ್ದೆ. ಅವರು ನನ್ನ ಮಾತು ಒಪ್ಪಲಿಲ್ಲ ಎಂದು ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories