ನಿರ್ದೇಶಕರಿಗೆ, ಬರಹಗಾರರಿಗೆ ಸ್ವಾತಂತ್ರ್ಯ ಕಡಿಮೆಯಾಗಿದೆ: ನಿತ್ಯಾ ಮೆನನ್ ಅಚ್ಚರಿ ಹೇಳಿಕೆ

Published : Oct 25, 2026, 09:51 PM IST

ನಿರ್ದೇಶಕರು ಹಾಗೂ ಸೃಜನಶೀಲ ಬರಹಗಾರರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ ಎಂದು ನಟಿ ನಿತ್ಯಾ ಮೆನನ್ ಅಭಿಪ್ರಾಯಪಟ್ಟಿದ್ದಾರೆ. ಪ್ರೇಕ್ಷಕರು ಪ್ರತಿಯೊಂದು ವಿಚಾರವನ್ನೂ ಅತಿಯಾಗಿ ವಿಶ್ಲೇಷಿಸುವುದು..

PREV
14
ಅಭಿವ್ಯಕ್ತಿ ಸ್ವಾತಂತ್ರ್ಯ ಕಡಿಮೆ

‘ಇಂದಿನ ದಿನಗಳಲ್ಲಿ ಚಲನಚಿತ್ರ ನಿರ್ದೇಶಕರಿಗೆ ಹಾಗೂ ಸೃಜನಶೀಲ ಬರಹಗಾರರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಡಿಮೆಯಾಗುತ್ತಿದ್ದು, ಚಿತ್ರರಂಗ ಪ್ರಗತಿ ಕಾಣುವ ಬದಲು ಹಿಂದಕ್ಕೆ ಹೋಗುತ್ತಿದೆ’ ಎಂದು ಖ್ಯಾತ ನಟಿ ನಿತ್ಯಾ ಮೆನನ್ ತಿಳಿಸಿದ್ದಾರೆ.

24
ಸೃಜನಶೀಲತೆಗೆ ಅಡ್ಡಿ

‘ಪ್ರೇಕ್ಷಕರು ಪ್ರತಿಯೊಂದು ವಿಚಾರಕ್ಕೂ ಅತಿಯಾಗಿ ಭಾವುಕರಾಗುತ್ತಿರುವುದು ಮತ್ತು ಮುನಿಸಿಕೊಳ್ಳುತ್ತಿರುವುದು ಸೃಜನಶೀಲತೆಗೆ ಅಡ್ಡಿಯಾಗಿದೆ. ಎಲ್ಲರೂ ತಮ್ಮೆಲ್ಲಾ ಬುದ್ಧಿಶಕ್ತಿ ಬಳಸಿ ಎಲ್ಲವನ್ನೂ ವಿಶ್ಲೇಷಣೆ ಮಾಡುತ್ತಿದ್ದಾರೆ. ಅದರಿಂದ ನಿರ್ದಿಷ್ಟ ರೀತಿಯ ಸಿನಿಮಾ ಮಾಡುವಂತಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

34
ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯ

ಸಂವಾದವೊಂದರಲ್ಲಿ ಮಾತನಾಡಿದ ಅವರು ವೃತ್ತಿಜೀವನ ಮತ್ತು ವೈಯಕ್ತಿಕ ಸಂಬಂಧಗಳನ್ನು ನಿಭಾಯಿಸುವಾಗ ಮಹಿಳೆಯರು ಎದುರಿಸುವ ಒತ್ತಡದ ಕುರಿತು ಮಾತನಾಡಿ, ನಮಗೆ ವೃತ್ತಿ ಮತ್ತು ಜೀವನ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯವಿದೆ.

44
ಇಂದಿಗೂ ಅನಿವಾರ್ಯತೆ ಇದೆ

ಇದು ಒಂದನ್ನು ಬಿಟ್ಟು ಮತ್ತೊಂದನ್ನು ಆರಿಸಿಕೊಳ್ಳುವ ವಿಷಯವಲ್ಲ. ಆದರೆ ದುರದೃಷ್ಟವಶಾತ್, ಜೈವಿಕವಾಗಿ ಮತ್ತು ಸಾಮಾಜಿಕವಾಗಿ ಮಹಿಳೆಯೊಬ್ಬಳು ಇಂತಹ ಒತ್ತಡವನ್ನು ಎದುರಿಸಲೇಬೇಕಾದ ಅನಿವಾರ್ಯತೆ ಇಂದಿಗೂ ಇದೆ ಎಂದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories