ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದ ಈ ಟಾಪ್ ನಟಿ ಓದಿದ್ದು ಬರೀ 9ನೇ ಕ್ಲಾಸ್. ಆದರೆ ಇಂಗ್ಲಿಷ್ ಮಾತ್ರ ಸಖತ್ತಾಗಿ ಮಾತನಾಡುತ್ತಾರೆ. ಟಾಲಿವುಡ್ ಸ್ಟಾರ್ ನಟರಾದ ವೆಂಕಟೇಶ್ ಮತ್ತು ನಾಗಾರ್ಜುನ ಅವರಿಂದ ಇಂಗ್ಲಿಷ್ ಕಲಿತ ಆ ಖ್ಯಾತ ನಟಿ ಯಾರು ಗೊತ್ತಾ?
ಸಾಮಾನ್ಯವಾಗಿ ನಟಿಯರು ಇಂಗ್ಲಿಷ್‌ನಲ್ಲಿಯೇ ಹೆಚ್ಚು ಮಾತನಾಡುತ್ತಾರೆ. ಮಾತೃಭಾಷೆ ಬಂದರೂ ಇಂಗ್ಲಿಷ್ ಬಳಸುವುದೇ ಹೆಚ್ಚು. ಉನ್ನತ ವ್ಯಾಸಂಗ ಮಾಡುತ್ತಲೇ ಸಿನಿಮಾಗೆ ಬಂದವರು ಹಲವರಿದ್ದಾರೆ. ಆದರೆ ಈ ನಟಿ 9ನೇ ತರಗತಿಗೆ ಶಾಲೆ ಬಿಟ್ಟು ಹೀರೊಯಿನ್ ಆದರು. ತೆಲುಗು, ತಮಿಳು, ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಇವರು, ಕಡಿಮೆ ಓದಿದ್ದರೂ ಇಂಗ್ಲಿಷ್ ಮಾತ್ರ ಪಟಪಟನೆ ಮಾತನಾಡುತ್ತಾರೆ. ಇದಕ್ಕೆ ಕಾರಣ ವೆಂಕಟೇಶ್ ಮತ್ತು ನಾಗಾರ್ಜುನ ಎನ್ನುತ್ತಾರೆ. ಅಷ್ಟಕ್ಕೂ ಆ ನಟಿ ಯಾರು?
24
ನಾಗಾರ್ಜುನ, ವೆಂಕಟೇಶ್‌ಗೆ ಧನ್ಯವಾದ
ಸಿನಿಮಾ ರಂಗದಲ್ಲಿ ಬಹುಭಾಷಾ ನಟಿಯಾಗಿ ಮಿಂಚಿದವರು ಖುಷ್ಬೂ. ಇವರ ಸ್ಪಷ್ಟವಾದ ಇಂಗ್ಲಿಷ್ ಉಚ್ಚಾರಣೆ ನೋಡಿ, ಇವರು ವಿದೇಶದಲ್ಲಿ ಓದಿರಬೇಕು ಎಂದು ಹಲವರು ಅಂದುಕೊಂಡಿದ್ದರು. ಆದರೆ ಸಂದರ್ಶನವೊಂದರಲ್ಲಿ ಮಾತನಾಡಿದ ಖುಷ್ಬೂ, ತಾವು 9ನೇ ತರಗತಿಗೆ ಶಾಲೆ ಬಿಟ್ಟಿದ್ದಾಗಿ (discontinue) ಹೇಳಿದ್ದಾರೆ. ಶಾಲೆ ಮುಗಿಸದಿದ್ದರೂ ಇಷ್ಟು ಚೆನ್ನಾಗಿ ಇಂಗ್ಲಿಷ್ ಹೇಗೆ ಮಾತನಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಈ ಭಾಷಾ ಕೌಶಲ್ಯಕ್ಕೆ ಟಾಲಿವುಡ್ ಸ್ಟಾರ್ ನಟರಾದ ದಗ್ಗುಬಾಟಿ ವೆಂಕಟೇಶ್ ಮತ್ತು ಅಕ್ಕಿನೇನಿ ನಾಗಾರ್ಜುನ ಅವರೇ ಮುಖ್ಯ ಕಾರಣ ಎಂದಿದ್ದಾರೆ.
34
ಖುಷ್ಬೂಗೆ ಪ್ರೋತ್ಸಾಹ ನೀಡಿದ ನಟರು
ತಮಿಳಿನಲ್ಲಿ ಹೀರೊಯಿನ್ ಆಗಿ ಪರಿಚಯವಾದ ಖುಷ್ಬೂ, ತೆಲುಗಿನಲ್ಲಿ ಮೊದಲ ಸಿನಿಮಾ ಮಾಡಿದ್ದು ವೆಂಕಟೇಶ್ ಜೊತೆ. ಎರಡನೇ ಸಿನಿಮಾ ನಾಗಾರ್ಜುನ ಜೊತೆ ಮಾಡಿದರು. ಆ ಸಮಯದಲ್ಲಿ ವೆಂಕಟೇಶ್ ಮತ್ತು ನಾಗಾರ್ಜುನ ಇಬ್ಬರೂ ಅಮೆರಿಕದಲ್ಲಿ ಓದು ಮುಗಿಸಿ ಭಾರತಕ್ಕೆ ಮರಳಿದ್ದರು. ಆಗ ಖುಷ್ಬೂಗೆ ಇಂಗ್ಲಿಷ್ ಅಷ್ಟಾಗಿ ಬರುತ್ತಿರಲಿಲ್ಲ. ಆದರೆ ಅವರಿಬ್ಬರೂ ಖುಷ್ಬೂಗೆ ಇಂಗ್ಲಿಷ್‌ನಲ್ಲೇ ಮಾತನಾಡುವಂತೆ ಪ್ರೋತ್ಸಾಹಿಸುತ್ತಿದ್ದರು. ಶೂಟಿಂಗ್ ಗ್ಯಾಪ್‌ನಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುವುದು ಮತ್ತು ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದರು.
ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಲು ಪುಸ್ತಕಗಳನ್ನು ಓದುವುದು ಬಹಳ ಮುಖ್ಯ. ಈ ವಿಚಾರವನ್ನು ನಾಗಾರ್ಜುನ ಅವರು ಖುಷ್ಬೂಗೆ ವಿವರಿಸಿದರು. ಅವರು ಖುಷ್ಬೂಗೆ ಮೊದಲ ಇಂಗ್ಲಿಷ್ ಕಾದಂಬರಿಯನ್ನು ಉಡುಗೊರೆಯಾಗಿ ನೀಡಿ, ಇಂಗ್ಲಿಷ್ ಕಾದಂಬರಿಗಳನ್ನು ಓದಲು ಶುರುಮಾಡುವಂತೆ ಸಲಹೆ ನೀಡಿದರು. ನಾಗಾರ್ಜುನ ಕೊಟ್ಟ ಆ ಉಡುಗೊರೆಯೇ ತಮ್ಮಲ್ಲಿ ಇಂಗ್ಲಿಷ್ ಕಲಿಯುವ ಆಸಕ್ತಿ ಹೆಚ್ಚಿಸಿತು ಎಂದು ಖುಷ್ಬೂ ನೆನಪಿಸಿಕೊಂಡಿದ್ದಾರೆ. ವೆಂಕಟೇಶ್ ಮಾತನಾಡುವಾಗ ಹೆಚ್ಚು ಇಂಗ್ಲಿಷ್ ಪದಗಳನ್ನು ಬಳಸುತ್ತಿದ್ದರು, ಅವರನ್ನು ನೋಡಿ ತಾವೂ ಹಾಗೆ ಮಾತನಾಡಲು ಪ್ರಯತ್ನಿಸಿದೆ ಎಂದು ಖುಷ್ಬೂ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.