ಸನಾತನ ಧರ್ಮ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ, ವೈರಲ್‌ ಆದ ರಾಮ್‌ ಚರಣ್‌ ಟ್ವೀಟ್‌

Published : Sep 06, 2023, 11:37 AM IST

ಸನಾತನ ಧರ್ಮದ ಕುರಿತಾಗಿ ತಮಿಳುನಾಡು ಸಚಿವ, ನಟ ಹಾಗೂ ಸಿಎಂ ಸ್ಟ್ಯಾಲಿನ್‌ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ರಾಮ್‌ಚರಣ್ ಅವರ ಹಳೆಯ ಟ್ವೀಟ್‌ ವೈರಲ್‌ ಆಗಿದೆ.  

PREV
111
ಸನಾತನ ಧರ್ಮ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ, ವೈರಲ್‌ ಆದ ರಾಮ್‌ ಚರಣ್‌ ಟ್ವೀಟ್‌
Ram Charan

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್‌ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಸನಾತನ ಧರ್ಮದ ಕುರಿತಾಗಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ.

211

ಈಗಾಗಲೇ ದೇಶದ ಎಲ್ಲಡೆ ಅವರ ವಿರುದ್ಧ ಪ್ರತಿಭಟನೆಗಳು ಆರಂಭವಾಗಿರುವುದರೊಂದಿಗೆ ಸಾಕಷ್ಟು ಕೇಸ್‌ಗಳು ಕೂಡ ದಾಖಲಾಗಿವೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಇದರ ಬಗ್ಗೆ ದೇಶದ ಗಣ್ಯರು ದೂರು ಕೂಡ ಸಲ್ಲಿಸಿದ್ದಾರೆ.

311

ಸನಾತನ ಧರ್ಮ ಅನ್ನೋದು ಡೆಂಘೆ, ಮಲೇರಿಯಾ ಇದ್ದಂತೆ. ಇದನ್ನು ವಿರೋಧಿಸುವುದಲ್ಲ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ದೇಶದ ಶೇ.80ರಷ್ಟು ಜನಸಂಖ್ಯೆಯ ನರಮೇಧ ಮಾಡಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.

411

ಇದರ ಬೆನ್ನಲ್ಲಿಯೇ ಆರ್‌ಆರ್‌ಆರ್‌ ಸಿನಿಮಾದ ನಟ ಹಾಗೂ ಮೆಗಾಸ್ಟಾರ್‌ ಚಿರಂಜೀವಿ ಪುತ್ರ ರಾಮ್‌ ಚರಣ್‌ ತೇಜ ಅವರ ಹಳೆಯ ಟ್ವೀಟ್‌ ವೈರಲ್‌ ಆಗಿದೆ.

511

2020ರ ಸೆಪ್ಟೆಂಬರ್‌ 11 ರಂದು ರಾಮ್‌ ಚರಣ್‌ ಮಾಡಿರುವ ಟ್ವೀಟ್‌ಅನ್ನು ಸ್ಟ್ಯಾಲಿನ್‌ ಅವರ ಹೇಳಿಕೆಗೆ ತಿರುಗೇಟು ಎನ್ನುವಂತೆ ಬಿಂಬಿಸಿ ವೈರಲ್‌ ಮಾಡಲಾಗುತ್ತಿದೆ.

611

ರಾಮ್‌ ಚರಣ್‌ ತೇಜ ತಮ್ಮ ತಾಯಿ ಸುರೇಖಾ ಕೊನಿಡೇಲಾ, ತಮ್ಮ ಮನೆಯ ಮುಂದಿರುವ ತುಳಸಿ ಗಿಡವನ್ನು ಪೂಜೆ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದರು.

711

ಚಿತ್ರವನ್ನು ಹಂಚಿಕೊಂಡಿದ್ದಲ್ಲದೆ, ಸನಾತನ ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎನ್ನುವ ಸಾಲನ್ನೂ ಕೂಡ ರಾಮ್‌ ಚರಣ್‌ ಬರೆದಿದ್ದರು.

811
Image: Instagram

ಇದು ಉದಯನಿಧಿ ಸ್ಟ್ಯಾಲಿನ್‌ ಅವರ ಕಾಮೆಂಟ್‌ಅನ್ನು ವಿರೋಧ ಮಾಡುತ್ತಿರುವವರ ಗಮನ ಸೆಳೆದಿದ್ದು, ಈ ಟ್ವೀಟ್‌ಅನ್ನೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

911

ಉದಯನಿಧಿ ಸ್ಟಾಲಿನ್ ಅವರು ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘ ಆಯೋಜಿಸಿದ್ದ ಸಮಾವೇಶದಲ್ಲಿ ಸನಾತನ ಧರ್ಮದ ವಿರುದ್ಧ ಟೀಕೆಗಳನ್ನು ಮಾಡಿದರು, ಅಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

1011
Ram Charan

ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದರು. ಸೊಳ್ಳೆಗಳು, ಡೆಂಗ್ಯೂ ಮತ್ತು ಜ್ವರದಂತಹ ರೋಗಗಳನ್ನು ಹೇಗೆ ಎದುರಿಸುತ್ತವೇಯೋ ಅದೇ ರೀತಿಯಲ್ಲಿ ಸನಾತನ ಧರ್ಮವನ್ನೂ ನಿರ್ಮೂಲನೆ ಮಾಡಬೇಕು ಎಂದಿದ್ದರು.

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

1111

ಉದಯನಿಧಿ ಅವರ ಕಾಮೆಂಟ್‌ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದೇಶದ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದೆ. ಇದರ ನಡುವೆ ದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಅವರ ವಿರುದ್ಧ ದೂರು ಕೂಡ ದಾಖಲಾಗಿದೆ.

ಕೇರಳ ಕುಟ್ಟಿ ಲುಕ್ಕಲ್ಲಿ ಸನ್ನಿ ಲಿಯೋನ್, ಸ್ವಲ್ಪ ಸೆರಗು ಸರಿ ಹಾಕೊಳ್ಳಿ ಅಂದ್ರು ನೆಟ್ಟಿಗರು!

Read more Photos on
click me!

Recommended Stories