Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Crime
  • ಜಾತ್ರೇಲಿ ಸಿಕ್ಕ ಪ್ರೇಯಸಿಯನ್ನು ಓಯೋ ರೂಮಿಗೆ ಕರೆದೊಯ್ದು ಹತ್ಯೆ: ಬೆಂಗಳೂರು ಟೆಕ್ಕಿ ಬಂಧನ

ಜಾತ್ರೇಲಿ ಸಿಕ್ಕ ಪ್ರೇಯಸಿಯನ್ನು ಓಯೋ ರೂಮಿಗೆ ಕರೆದೊಯ್ದು ಹತ್ಯೆ: ಬೆಂಗಳೂರು ಟೆಕ್ಕಿ ಬಂಧನ

ಬೆಂಗಳೂರಿನಲ್ಲಿ ಪ್ರಿಯತಮೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಓಯೋ ಹೋಟೆಲ್‌ನಲ್ಲಿ ಪ್ರೇಯಸಿಯನ್ನು ಕೊಲೆಗೈದಿದ್ದಾನೆ. ಕೆಂಗೇರಿ ನಿವಾಸಿಗಳಾದ ಯಶಸ್ ಮತ್ತು ಹರಿಣಿ ಜಾತ್ರೆಯಲ್ಲಿ ಪರಿಚಯವಾಗಿ ಸಂಬಂಧ ಬೆಳೆಸಿದ್ದರು. ತನ್ನ ಪ್ರೇಯಸಿ ಬೇರೆಯವರಿಗೆ ಸಿಗಬಾರದು ಎಂದು ಕೊಲೆ ಮಾಡಿದ್ದಾನೆ

Sathish Kumar KH | Published : Jun 09 2025, 12:23 PM
2 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
16
Asianet Image
Image Credit : Asianet News

ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಸಿಕ್ಕಿದ್ದ ಪ್ರಿಯತಮೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಯಶಸ್ ತನ್ನ ಪ್ರೇಯಸಿಯನ್ನು ಓಯೋ ಹೋಟೆಲ್‌ಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಮೃತಳನ್ನು ಹರಿಣಿ(36) ಎಂದು ಗುರುತಿಸಲಾಗಿದೆ. 

ಕೊಲೆ ಆರೋಪಿ ಸಾಫ್ಟ್‌ವೇರ್ ಇಂಜಿನಿಯರ್ (ಟೆಕ್ಕಿ) ಯಶಸ್ಸ್ (25) ಆಗಿದ್ದಾನೆ. ಇಬ್ಬೂ ಕೆಂಗೇರಿ ನಿವಾಸಿಗಳಾಗಿದ್ದರು. ಪೂರ್ಣ ಪ್ರಜ್ಞಾ ಲೇಔಟ್ ನ ಹೋಟೆಲ್ ಓಯೋ ರೂಮಿನಲ್ಲಿ‌ ಶುಕ್ರವಾರ ಕೊಲೆ ನಡೆದಿದೆ. ಯಶಸ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಶುಕ್ರವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ.

26
Asianet Image
Image Credit : Asianet News

ಕೆಂಗೇರಿಯಲ್ಲಿ ವಾಸವಾಗಿದ್ದ ದಂಪತಿ ಹರಿಣಿ ಹಾಗೂ ದಾಸೇಗೌಡ ಸುಂದರ ಸಂಸಾರಕ್ಕೆ ಜಾತ್ರೆಯೇ ಮುಳುವಾಗಿತ್ತು. ಕೆಲ ತಿಂಗಳ ಕೆಂಗೇರಿಯಲ್ಲಿ ಇದ್ದ ಜಾತ್ರೆಗೆ ಹರಿಣಿ ಕುಟುಂಬ ಸಮೇತರಾಗಿ ಹೋಗಿದ್ದರು. ಈ ವೇಳೆ ಗೃಹಿಣಿ ಹರಿಣಿ ಇದ್ದ ಏರಿಯಾದ ಜಾತ್ರೆಗೆ ಟೆಕ್ಕಿ ಯಶಸ್ ಕೂಡ ಹೋಗಿದ್ದನು. ಜಾತ್ರೆಯಲ್ಲಿ ಅಚಾನಕ್ ಆಗಿ ಸಿಕ್ಕಿದ್ದ ಮಹಿಳೆ ಹರಿಣಿಗೆ ಯಶಸ್ ಪರಿಚಯವಾಗಿತ್ತು. ಇಬ್ಬರು ಪೋನ್ ನಂಬರ್ ಕೂಡ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು. ಬಳಿಕ ಸ್ನೇಹ ಬೆಳೆದು, ಚಾಟಿಂಗ್ ಡೆಟಿಂಗ್ ಸುತ್ತಾಟ ಮಾಡುತ್ತಿದ್ದರು. ಕೆಲವು ಸಲ ಇಬ್ಬರು ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು.

Related Articles

ಮಂಡ್ಯ ಹಾಡ್ಲಿ ಗ್ರಾಮದಲ್ಲಿ ಸುಟ್ಟ ಶವ ಪ್ರಕರಣಕ್ಕೆ ಭೀಕರ ಟ್ವಿಸ್ಟ್; ತಾಯಿ, ಅಕ್ಕ, ಅಳಿಯರಿಂದಲೇ ಸಿದ್ದರಾಜು ಕೊಲೆ!
ಮಂಡ್ಯ ಹಾಡ್ಲಿ ಗ್ರಾಮದಲ್ಲಿ ಸುಟ್ಟ ಶವ ಪ್ರಕರಣಕ್ಕೆ ಭೀಕರ ಟ್ವಿಸ್ಟ್; ತಾಯಿ, ಅಕ್ಕ, ಅಳಿಯರಿಂದಲೇ ಸಿದ್ದರಾಜು ಕೊಲೆ!
55ರ ಆಂಟಿ ಜೊತೆಗೆ ಅಕ್ರಮ ಸಂಬಂಧಕ್ಕಾಗಿ ಆಕೆಯ ಪತಿಯನ್ನೇ ಕೊಲೆ ಮಾಡಿದ 33ರ ಯುವಕ: 3 ಜನರ ಬಂಧನ
55ರ ಆಂಟಿ ಜೊತೆಗೆ ಅಕ್ರಮ ಸಂಬಂಧಕ್ಕಾಗಿ ಆಕೆಯ ಪತಿಯನ್ನೇ ಕೊಲೆ ಮಾಡಿದ 33ರ ಯುವಕ: 3 ಜನರ ಬಂಧನ
36
Asianet Image
Image Credit : Asianet News

ಹಲವು ಬಾರಿ ಇದೆ ರೀತಿ ಭೇಟಿ ಮಾಡೋದು, ಪೋನ್ ನಲ್ಲಿ ಮಾತಾಡೋದು ನಡೆಯುತ್ತಿತ್ತು. ಬಳಿಕ ಹರಿಣಿ ಗಂಡ ದಾಸೇಗೌಡನಿಗೆ ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿತ್ತು. ಹೆಂಡ್ತಿ ಹರಿಣಿ ಪೋನ್ ಕೂಡ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದ ಗಂಡ ದಾಸೇಗೌಡ. ಇದಾದ ಬಳಿಕ ಕೆಲವು ತಿಂಗಳ ನಂತರ ಗಂಡನ ಕ್ಷಮೆ ಕೇಳಿ, ಇನ್ನುಮುಂದೆ ಇಂತಹ ಕೃತ್ಯಗಳನ್ನು ಮಾಡೊಲ್ಲವೆಂದು ಹೇಳಿ ಹರಿಣಿ ಹೊರಗೆ ಬಂದಿದ್ದನು. ಆದರೆ, ಪ್ರಿಯತಮನ್ನು ಬಿಟ್ಟಿರಲಾಗದೇ ಪುನಃ ಹರಿಣಿ ತನ್ನ ಬಾಯ್ ಫ್ರೆಂಡ್ ಯಶಸ್‌ನನ್ನು ಸಂಪರ್ಕಿಸಿದ್ದಳು.

46
Asianet Image
Image Credit : Asianet News

ಆದರೆ, ಅನೈತಿಕ ಸಂಬಂಧ ರುಚಿ ಹೊಂದಿದ್ದ ಆಕೆಯ ಲವರ್ ಯಶಸ್ ಕೂಡ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದನು. ಹೀಗಾಗಿ ಹರಿಣಿ ಸಿಕ್ಕರೇ ಸಾಯಿಸಲು ನಿರ್ಧರಿಸಿದ್ದನು. ಹೀಗಾಗಿ ಚಾಕು ಕೂಡ ಖರೀದಿಸಿ ಇಟ್ಟಿದ್ದನು. ಯಾವಾಗ ಮತ್ತೆ ಹರಿಣಿಯನ್ನು ಮೀಟ್ ಮಾಡುತ್ತಾಳೋ ಎಂದು ಕಾಯುತ್ತಿದ್ದನು. ಆ ಕಾಲ ಕೂಡಿಬಂದು, ಇಬ್ಬರು ಮೀಟ್ ಮಾಡಿದ ತಕ್ಷಣವೇ ಓಯೋ ರೂಮಿಗೆ ಹೋಗುತ್ತಾರೆ.

56
Asianet Image
Image Credit : Asianet News

ಇನ್ನು ಟೆಕ್ಕಿ ಯಶಸ್ ತನ್ನ ಪ್ರೇಯಸಿಗಾಗಿ ಮೊದಲೇ ರಾಯಲ್ಸ್ ಹೊಟೇಲ್ ನಲ್ಲಿ ರೂಮ್ ಬುಕ್ ಮಾಡಿದ್ದನು. ಹೀಗಾಗಿ ಹೊಟೇಲ್‌ಗೆ ಹೋಗಿ ಇಬ್ಬರು ಲೈಗಿಂಕ ಸಂಪರ್ಕ ಮುಂದುವರೆಸಿದ್ದರು. ಇಬ್ಬರೂ ಸೆಕ್ಸ್ ಮಾಡಿದ ಬಳಿಕ ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ನಿರ್ಧಾರ ಮಾಡಿದ್ದ ಲವರ್ ಯಶಸ್, ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ. ಶುಕ್ರವಾರ ಕೊಲೆ ಮಾಡಿದ ನಂತರ ಸಾಫ್ಟ ವೇರ್ ಇಂಜಿನಿಯರ್ ಯಶಸ್ ಅಲ್ಲಿಂದ ಪರಾರಿ ಆಗಿದ್ದನು.

66
Asianet Image
Image Credit : Asianet News

ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಸುಬ್ರಮಣ್ಯಪುರ ಇನ್ಸ್ ಪೆಕ್ಟರ್ ರಾಜು ಮತ್ತು ತಂಡವು ಬಳಿಕ ಎಫ್‌ಎಸ್‌ಎಲ್ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಿತ್ತು. ನಿನ್ನೆ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿ ಯಶಸ್ ಬಂಧನ ಮಾಡಲಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. 

ಇಂದು ಮಧ್ಯಾಹ್ನ 3 ಗಂಟೆಗೆ ಆರೋಪಿಯನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಹರಿಣಿಗೆ ನನ್ನ ಜೊತೆ ಅನೈತಿಕ ಸಂಬಂಧ ಇತ್ತು. ಆದರೆ, ಗಂಡನಿಗೆ ವಿಚಾರ ಗೊತ್ತಾಗಿದೆ ಎಂದು ನನ್ನ ಅವೈಡ್ ಮಾಡುತ್ತಿದ್ದಳು. ಹೀಗಾಗಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಸುಬ್ರಮಣ್ಯಪುರ ಪೊಲೀಸರು ಆರೋಪಿ ಯಶಸ್‌ನನ್ನು ವಿಚಾರಣೆ ಮಾಡುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ.

Sathish Kumar KH
About the Author
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ. Read More...
ಕ್ರೈಮ್ ನ್ಯೂಸ್
ಬೆಂಗಳೂರು
ಬೆಂಗಳೂರು ನಗರ
ಸಂಬಂಧಗಳು
ಅಕ್ರಮ ಸಂಬಂಧ
 
Recommended Stories
Top Stories