ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್‌ ಕೊಡಬೇಡಿ, ಎಂಜಾಯ್‌ ಮಾಡಿ: ನಟಿ ರೇಖಾ ನಾಯರ್‌ ಮಾತು!

First Published | Jul 6, 2023, 8:06 PM IST

ಬಿಗ್‌ ಬಾಸ್‌ ಸೀಸನ್‌-7 ಸ್ಪರ್ಧಿಯಾಗಿದ್ದ ನಟಿ ರೇಖಾ ನಾಯರ್‌ ಮತ್ತೊಮ್ಮೆ ವಿವಾದಾತ್ಮಕ ಮಾತುಗಳಿಂದ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ಗೆ ಅವರು ನೀಡಿರುವ ಸಂದರ್ಶನ ವಿವಾದಕ್ಕೆ ಕಾರಣವಾಗಿದೆ.

ನಟಿ ರೇಖಾ ನಾಯರ್‌ ಒಮ್ಮೊಮ್ಮೆ ತಮ್ಮ ಮುಕ್ತ ಮಾತುಗಳಿಂದಲೇ ವಿವಾದಕ್ಕೆ ಕಾರಣರಾಗುತ್ತಾರೆ. ಇತ್ತೀಚೆಗೆ ಅವರು ಯೂಟ್ಯೂಬ್‌ಗೆ ನೀಡಿದ ಸಂದರ್ಶನ ಈಗ ವಿವಾದಕ್ಕೆ ಕಾರಣವಾಗಿದೆ.

ಹುಡುಗಿಯರ ಸೊಂಟದ ಮೇಲೆ ಪುರುಷರು ಕೈಯಿಟ್ಟರೆ ಅದನ್ನು ಅವರು ಎಂಜಾಯ್‌ ಮಾಡಬೇಕು. ದೂರು ನೀಡಬಾರದು. ಹುಡುಗಿಯರು ತಮ್ಮ ಸ್ವಾತಂತ್ರ್ಯವನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Tap to resize

ಬಿಗ್‌ ಬಾಸ್‌ ಸೀಸನ್‌-7ನ ಸ್ಪರ್ಧಿಯಾಗಿದ್ದ ರೇಖಾ ನಾಯರ್‌ ಮಾತಗಳು, ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ನಾನು ಹಾಕುವ ಡ್ರೆಸ್‌ನ ಬಗ್ಗೆ ಸಾಕಷ್ಟು ಮಹಿಳೆಯರು ಪ್ರಶ್ನೆ ಮಾಡುತ್ತಾರೆ. ಹಾಗೇನಾದರೂ ನಾನು ಸೊಂಟ ಕಾಣಿಸುವಂಥ ಡ್ರೆಸ್‌ ಹಾಕಿದ್ದಾಗ, ಯಾರಾದರೂ ಪುರುಷ ನನ್ನ ಸೊಂಟದ ಮೇಲೆ ಕೈಯಿಟ್ಟರೆ ನಾನದನ್ನು ಎಂಜಾಯ್‌ ಮಾಡುತ್ತೇನೆ ಎಂದು ರೇಖಾ ನಾಯರ್‌ ಹೇಳಿದ್ದಾರೆ.

rekha nair

ನಾನು ಸೀರೆ ಉಟ್ಟುಕೊಂಡಾಗ ಸಾಮಾನ್ಯವಾಗಿ ನನ್ನ ಸೊಂಟ ಕಾಣುತ್ತದೆ. ಬಸ್‌ನಲ್ಲಿ ಹೋಗುವಾಗ ಯಾವುದಾದರೂ ಪುರುಷ ಸೊಂಟದ ಮೇಲೆ ಕೈಯಿಟ್ಟರೆ ನನಗೇನೂ ಅನಿಸೋದಿಲ್ಲ. ಈ ದಿನಗಳಲ್ಲಿ ಮಹಿಳೆ ಕೂಡ ಇಂಥ ಮಾನಸಿಕತೆಗಳಿಂದ ಹೊರಬರಬೇಕು ಎಂದು ಹೇಳಿದ್ದಾರೆ.

ಇನ್ನು ಜಾಗಿಂಗ್‌ ಮಾಡುವಾಗ ಯಾವುದಾದರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ಕೂಡ ಸೊಂಟ ಕಾಣುವಂಥ ಡ್ರೆಸ್‌ ಹಾಕುತ್ತೇನೆ. ಇದು ನನಗೂ ಖುಷಿ ಕೊಡುತ್ತದೆ ಎಂದು ರೇಖಾ ನಾಯರ್‌ ಹೇಳಿದ್ದಾರೆ.

ಸೊಂಟ ಕಾಣುವಂಥ ಡ್ರೆಸ್‌ ಹಾಕಿಕೊಂಡು ಮಾಲ್‌ಗೆ ಹೋದಾಗ, ಪುರುಷ ಅದನ್ನೇ ನೋಡುತ್ತಾನೆ. ಆತ ನಿಮ್ಮನ್ನೇ ನೋಡುವಂತೆ ಮಾಡಿದ್ದು ಯಾರು? ಹಾಗೇನಾದರೂ ನಾನು ಸ್ವಲ್ಪ ಪ್ರಮಾಣದಲ್ಲಿ ನನ್ನ ಬ್ಲೌಸ್‌ಅನ್ನು ಜಾರಿಸಿದರೆ, ಆತ ದಿಟ್ಟಿಸಿ ನೋಡವುದು ಇನ್ನೂ ಹೆಚ್ಚಾಗುತ್ತದೆ ಎಂದಿದ್ದಾರೆ.

ನೀವು ಹಾಕುವಂಥ ಡ್ರೆಸ್‌ಅನ್ನು ಯಾರಾದರೂ ಮೆಚ್ಚಿಕೊಳ್ಳುವುದಿದ್ದರೆ, ಅದು ಪುರುಷರ ಮಾತ್ರ. ಅವರೇ ಮೆಚ್ಚಿಕೊಳ್ಳದಿದ್ದರೆ ಅದಕ್ಕೆ ಅರ್ಥವಿರುವುದಿಲ್ಲ ಎಂದು ರೇಖಾ ನಾಯರ್‌ ಮಾತನಾಡಿದ್ದಾರೆ.

ಇಂದು ಸ್ವಾತಂತ್ರ್ಯದ ಹೆಸರಲ್ಲಿ ಎಲ್ಲವನ್ನೂ ಮಾಡುತ್ತಾರೆ. ಕಾರು-ಬೈಕು ಓಡಿಸೋಕೆ ಬರದೇ ಇದ್ದರೂ ಸ್ಟೈಲ್‌ ಎನ್ನುವ ಕಾರಣಕ್ಕಾಗಿ ಓಡಿಸ್ತಾರೆ ಎಂದು ರೇಖಾ ಹೇಳಿದ್ದಾರೆ.

ರೇಖಾ ನಾಯರ್‌ ಅವರ ಮಾತುಗಳಿಗೆ ಪುರುಷರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಹೆಚ್ಚಿನ ಮಹಿಳೆಯರು ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Latest Videos

click me!