ಮೈತುಂಬಾ ಬಟ್ಟೆ ಹಾಕಿದ್ರೂ ಬಿಡಲಿಲ್ಲ: ನಟ ದುನಿಯಾ ವಿಜಯ್​ ಪುತ್ರಿ ಮೋನಿಷಾರ ಮೆಜೆಸ್ಟಿಕ್​ ಕರಾಳ ಅನುಭವ

Published : Aug 07, 2026, 12:44 PM IST

ದುನಿಯಾ ವಿಜಯ್ ನಿರ್ದೇಶನದ 'ಸಿಟಿ ಲೈಟ್ಸ್' ಸಿನಿಮಾ ಮೂಲಕ ಅವರ ಪುತ್ರಿ ಮೋನಿಷಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿರುವ ಅವರು, ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಮಾತನಾಡಿದ್ದಾರೆ.

PREV
16
ಸಿಟಿ ಲೈಟ್ಸ್​ ಸಿನಿಮಾ

'ಭೀಮ' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ-ನಿರ್ದೇಶಕ ದುನಿಯಾ ವಿಜಯ್ ಮತ್ತೊಮ್ಮೆ ಮೆಗಾಫೋನ್ ಹಿಡಿದಿರುವ 'ಸಿಟಿ ಲೈಟ್ಸ್' (Duniya Vijay's City Lights) ಸಿನಿಮಾ ಸೆಪ್ಟೆಂಬರ್​ 18ಕ್ಕೆ ಬಿಡುಗಡೆಯಾಗಲಿದೆ. ಸಾಕಷ್ಟು ದಿನಗಳಿಂದ ಈ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಗುಡ್‌ನ್ಯೂಸ್ ನೀಡಿದ್ದಾರೆ. ಇದರಲ್ಲಿ, ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದರೆ, ಈ ಸಿನಿಮಾದ ಮೂಲಕ ನಟ ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ವಿಜಯ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

26
ದುನಿಯಾ ವಿಜಯ್ ​ಪುತ್ರಿ ಎಂಟ್ರಿ

ಈ ಸಂದರ್ಭದಲ್ಲಿ, ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ತಮಗಾಗಿರುವ ಕೆಟ್ಟ ಅನುಭವವನ್ನು ನಟಿ ಮೋನಿಷಾ ಶೇರ್​ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್‌ ವೇಳೆ ಆದ ಅನಿರೀಕ್ಷಿತ ಹಾಗೂ ಹಾಗೂ ಕಹಿ ಘಟನೆಯನ್ನ ನೆನಪಿಸಿಕೊಂಡಿರುವ ಮೋನಿಷಾ, ಸಮಾಜದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಮತ್ತು ಭದ್ರತೆಯ ಕುರಿತು ಗಂಭೀರ ಚಿಂತನೆಗೆ ಹಚ್ಚುವಂತ ಮಾತುಗಳನ್ನಾಡಿದ್ದಾರೆ

36
ಶೂಟಿಂಗ್​ ವೇಳೆ ಕರಾಳ ಅನುಭವ

ʻಸಿಟಿ ಲೈಟ್ಸ್‌ʼ ಸಿನಿಮಾದ ಶೂಟಿಂಗ್‌ ನೆಪದಲ್ಲಿ ನಮ್ಮಪ್ಪ ನನ್ನನ್ನ ಮೆಜೆಸ್ಟಿಕ್‌ನ ಪ್ರತಿಯೊಂದು ಮೂಲೆಗೂ ಕರೆದುಕೊಂಡು ಹೋಗಿದ್ದರು. ಬೇರೆಯವರ ಜೀವನ ಹೇಗಿರುತ್ತೆ, ಸಾಮಾನ್ಯ ಜನರು ಎಂತಹ ವಾತಾವರಣದಲ್ಲಿ ಬದುಕುತ್ತಾರೆ ಎನ್ನುವುದನ್ನು ತೋರಿಸೋದು ಅವರ ಉದ್ದೇಶವಾಗಿತ್ತು. ಆ ಅನುಭವ ಆದ ಮೇಲೆ ಶಾಕ್​ಗೆ ಒಳಗಾದೆ. ನಿಜಕ್ಕೂ ಇದು ನಾನು ಹುಟ್ಟಿ ಬೆಳೆದ ಬೆಂಗಳೂರಾ ಎನ್ನಿಸಿತು ಎಂದಿದ್ದಾರೆ.

46
ಯಾರೋ ಒಬ್ಬ ಬಂದು...

ಆ ಅನುಭವದ ಕುರಿತು ಮಾತನಾಡಿರುವ ನಟಿ, ʻಸಿಟಿ ಲೈಟ್ಸ್‌ʼ ಸಿನಿಮಾದ ಶೂಟಿಂಗ್‌ ನಡೀತಾ ಇತ್ತು. ಅಂದು ನನ್ನ ಪಾಡಿಗೆ ನಾನು ನಡೆದುಕೊಂಡು ಬರ್ತಿದ್ದೆ. ಯಾರೋ ಮಧ್ಯವಯಸ್ಕ ವ್ಯಕ್ತಿ ಒಬ್ಬ, ನನ್ನ ಹತ್ತಿರ ಬಂದು ಏನೋ ಹೇಳಿದ್ರು. ಆದರೆ ಅವರೇನು ಹೇಳಿದರು ಎಂದು ನನಗೆ ಸರಿಯಾಗಿ ಅರ್ಥ ಆಗಲಿಲ್ಲ. ಆದರೆ, ಅವರ ಉದ್ದೇಶ ಏನು ಅನ್ನೋದು ಮಾತ್ರ ನನಗೆ ಕ್ಲಿಯರ್‌ ಆಗಿ ಗೊತ್ತಾಯ್ತು ಎಂದು ಆತಂಕ ತೋಡಿಕೊಂಡಿದ್ದಾರೆ.

56
ನನ್ನ ಟೀಮ್​ ಹ್ಯಾಂಡಲ್​ ಮಾಡಿತು

ಒಬ್ಬಳೇ ಹೋಗುತ್ತಿದ್ದರಿಂದ ನನ್ನನ್ನು ಅಪ್ರೋಚ್‌ ಮಾಡಿ, ಬೇರೆ ರೀತಿಯಲ್ಲಿ ಮಾತನಾಡಿಸಿದರು. ನಾನು ರಿಯಾಕ್ಟ್‌ ಮಾಡೋಕೂ ಮುಂಚೆ, ಇಮಿಡಿಯೇಟ್‌ ಆಗಿ ನಮ್ಮ ಟೀಮ್‌ ಎಲ್ಲಾ ಬಂದು ಸಿಚ್ಯೂವೇಷನ್‌ನ ಹ್ಯಾಂಡಲ್‌ ಮಾಡಿತು. ಆಗ ನಾನು ಶಾಕ್​ ಆಯ್ತು ಎಂದಿದ್ದಾರೆ ನಟಿ.

66
ಮೈತುಂಬಾ ಬಟ್ಟೆ ಹಾಕಿದ್ರೂ...

ಅವತ್ತು ಅನಿಸ್ತು, ಹೆಣ್ಣುಮಕ್ಕಳಿಗೆ ಮೈ ತುಂಬಾ ಬಟ್ಟೆ ಹಾಕೊಂಡ್ರು ಬಿಡಲ್ಲ, ಅದು ಯಾವುದೇ ಜಾಗಕ್ಕೆ ಹೋದರೂ ಹೌದು. ಅವರು ನಿಮಗೆ ತೊಂದರೆ ಕೊಡ್ಬೇಕು ಅಂದುಕೊಂಡ್ರೆ, ಖಂಡಿತವಾಗಿಯೂ ಅವರು ಬಂದು ತೊಂದರೆ ಕೊಡ್ತಾರೆ” ಎಂದಿದ್ದಾರೆ ಮೋನಿಷಾ ವಿಜಯ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories