ಶುರುವಾಗ್ತಿದೆ ಕೂಡು ಕುಟುಂಬದ ಹೊಸ ಕಥೆ "ಆನಂದ ನಿಲಯ" ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ...!

Published : Aug 06, 2026, 01:43 PM IST

ಒಗ್ಗಟ್ಟಿನ ಸಾರವನ್ನು ಸಾರುವ ಸುಂದರ ಕೂಡು ಕುಟುಂಬದ ಕಥೆ.ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿರ್ವಹಿಸೋ ನಾಲ್ಕು ಜನ ಸಹೋದರರು ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್'ಆನಂದ ನಿಲಯಕ್ಕೆ ಮಹಾಲಕ್ಷ್ಮೀಯಂತಿರೋ ಧರ್ಮನ ಪತ್ನಿ ಸುಧಾ. ಮೈದುನರನ್ನು ಮಕ್ಕಳಂತೆ ಸಾಕಿ ಧರ್ಮನ ಸಹೋದರರಿಗೆ ಅಮ್ಮನಂತಿರೋ ಅತ್ತಿಗೆ

PREV
16
ಸುಂದರ ಕೂಡು ಕುಟುಂಬದ, ಮನೆ-ಮನ ತುಂಬುವ ಹೊಸ ಕಥೆ "ಆನಂದ ನಿಲಯ" ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ಹಾಗೂ JioHotstar ನಲ್ಲಿ

ಒಗ್ಗಟ್ಟಿನ ಸಾರವನ್ನು ಸಾರುವ ಈ ಕುಟುಂಬದಲ್ಲಿ ಸಂಬಂಧಗಳ ತಕ್ಕಡಿಯನ್ನು ಸಮಾನವಾಗಿ ತೂಗುತ್ತಿರುವ ಸುಧಾ, ಮುಂಬರುವ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ? ತಮ್ಮ ವೈವಾಹಿಕ ಜೀವನಕ್ಕಿಂತಲೂ ಮೂವರು ಸಹೋದರರ ಸಂತೋಷಕ್ಕೇ ಹೆಚ್ಚಿನ ಆದ್ಯತೆ ನೀಡುವ ಧರ್ಮ ಮತ್ತು ಸುಧಾರ ಬದುಕು ಮುಂದೆ ಹೇಗೆ ಸಾಗಲಿದೆ? ಈ ಮನೆಗೆ ಮುಂದೆ ಸೊಸೆಯರು ಬಂದ ನಂತರ ಇವರೆಲ್ಲರ ಜೀವನ ಮೊದಲಿನಂತೆ ಮುಂದುವರೆಯುತ್ತಾ? ಅಥವಾ ಚದುರಿಹೋಗುತ್ತಾ? ಎಂಬುದೇ ಮುಖ್ಯ ಕಥಾಹಂದರ.

.

26
ಪ್ರಸಾರವಾಗಿದ್ದ "ಆಕಾಶದೀಪ" ಧಾರಾವಾಹಿ ಖ್ಯಾತಿಯ ನಟಿ ದಿವ್ಯ ಶ್ರೀಧರ್, ಇದೀಗ ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ಕಮ್ ಬ್ಯಾಕ್

13 ವರ್ಷಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ "ಆಕಾಶದೀಪ" ಧಾರಾವಾಹಿ ಖ್ಯಾತಿಯ ನಟಿ ದಿವ್ಯ ಶ್ರೀಧರ್, ಇದೀಗ ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ಕಮ್ ಬ್ಯಾಕ್ ಆಗಿದ್ದು ಸುಧಾ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

36
ಕೂಡು ಕುಟುಂಬಕ್ಕೆ ಪ್ರೀತಿಯೇ ಆಧಾರ, ಒಗ್ಗಟ್ಟಿಗೆ ಇವರೇ ಸಾಕ್ಷಾತ್ಕಾರ, ಕನ್ನಡ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ವಿನೂತನ ಕಥಾಹಂದರವುಳ್ಳ ಧಾರಾವಾಹಿ "ಆನಂದ ನಿಲಯ"

ಇನ್ನು ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿರೋ ನಟ ರಾಕೇಶ್, ಅನುಭವಿ ಕಲಾವಿದರಾಗಿದ್ದು 'ಧರ್ಮ' ಎಂಬ ಪಾತ್ರದ ಮೂಲಕ ಕಿರುತೆರೆಗೆ ಮರಳಿದ್ದಾರೆ. ಜೊತೆಗೆ ತಮ್ಮಂದಿರಾಗಿ ಕೌಶಿಕ್, ಹರ್ಷ, ನಿತೀಶ್ ಅಭಿನಯಿಸುತ್ತಿದ್ದು, ಜನಪ್ರಿಯ ಕಲಾವಿದೆ ಚಿತ್ಕಲಾ ಬಿರಾದರ್, ಸಿತಾರಾ, ಸಪ್ನ ದೀಕ್ಷಿತ್, ನಯನ ಶೆಟ್ಟಿ, ನಿಶಾ, ರೇಷ್ಮಾ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರ ತಾರಾ ಬಳಗವಿದೆ.

46
ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮನಾಗಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದ ನಟಿ ಚಿತ್ಕಲಾ ಬಿರಾದಾರ್ ಇದೀಗ ಆನಂದ ನಿಲಯ ಧಾರವಾಹಿಯಲ್ಲಿ ಮುಖ್ಯ ಪಾತ್ರ

ಚಿತ್ಕಲಾ ಮುಂದೆ ಯಾವ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಾ ಇರುವಂತೆ ಇದೀಗ ನೆಚ್ಚಿನ ಅಮ್ಮಮ್ಮ ಇದೀಗ ಆನಂದ ನಿಲಯ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿತಾರಾ, ಸಪ್ನ ದೀಕ್ಷಿತ್, ನಯನ ಶೆಟ್ಟಿ, ನಿಶಾ, ರೇಷ್ಮಾ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರ ತಾರಾ ಬಳಗವಿದೆ.

56
ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿರ್ವಹಿಸೋ ನಾಲ್ಕು ಜನ ಸಹೋದರರು ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್

ಖ್ಯಾತ ನಿರ್ಮಾಪಕ ಸುಬ್ರಮಣ್ಯ ಮೂರ್ತಿನಾಥ್‌ ಅವರ "ನೀಲಾ ಪ್ರೊಡಕ್ಷನ್" ಎಂಬ ಸಂಸ್ಥೆಯಡಿ ಈ ಧಾರಾವಾಹಿ ನಿರ್ಮಾಣಗೊಳ್ಳುತ್ತಿದ್ದು, ಆದರ್ಶ್ ಹೆಗಡೆ ನಿರ್ದೇಶಿಸುತ್ತಿದ್ದಾರೆ.ಕೂಡು ಕುಟುಂಬಕ್ಕೆ ಪ್ರೀತಿಯೇ ಆಧಾರ, ಒಗ್ಗಟ್ಟಿಗೆ ಇವರೇ ಸಾಕ್ಷಾತ್ಕಾರ ಶುರುವಾಗ್ತಿದೆ ಮನೆ-ಮನ ತುಂಬುವ ಹೊಸ ಕಥೆ "ಆನಂದ ನಿಲಯ" ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ಹಾಗೂ JioHotstar ನಲ್ಲಿ ತಪ್ಪದೇ ವೀಕ್ಷಿಸಿ.

66
ತಮ್ಮಂದಿರ ಪಾಲಿಗೆ ತಂದೆಯಾಗಿ, ಗೆಳೆಯನಾಗಿ, ಅಣ್ಣನಾಗಿ ಅವರ ಬೆನ್ನೆಲುಬಾಗಿ ನಿಂತು, ಅವರೇ ತನ್ನ ಸರ್ವಸ್ವವೆಂದು ಬಾಳುತ್ತಿರುವ ಮನೆಯ ಹಿರಿಮಗ ಧರ್ಮ

ಇನ್ನು ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿರೋ ನಟ ರಾಕೇಶ್, ಅನುಭವಿ ಕಲಾವಿದರಾಗಿದ್ದು 'ಧರ್ಮ' ಎಂಬ ಪಾತ್ರದ ಮೂಲಕ ಕಿರುತೆರೆಗೆ ಮರಳಿದ್ದಾರೆ. ಜೊತೆಗೆ ತಮ್ಮಂದಿರಾಗಿ ಕೌಶಿಕ್, ಹರ್ಷ, ನಿತೀಶ್ ಅಭಿನಯಿಸುತ್ತಿದ್ದಾರೆ

ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿರ್ವಹಿಸೋ ನಾಲ್ಕು ಜನ ಸಹೋದರರು ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್. ತಮ್ಮಂದಿರ ಪಾಲಿಗೆ ತಂದೆಯಾಗಿ, ಗೆಳೆಯನಾಗಿ, ಅಣ್ಣನಾಗಿ ಅವರ ಬೆನ್ನೆಲುಬಾಗಿ ನಿಂತು, ಅವರೇ ತನ್ನ ಸರ್ವಸ್ವವೆಂದು ಬಾಳುತ್ತಿರುವ ಮನೆಯ ಹಿರಿಮಗ ಧರ್ಮ. ಇನ್ನು ಈ 'ಆನಂದ ನಿಲಯʼಕ್ಕೆ ಮಹಾಲಕ್ಷ್ಮೀಯಂತಿರೋ ಧರ್ಮನ ಪತ್ನಿ ಸುಧಾ. ಮೈದುನರನ್ನು ಮಕ್ಕಳಂತೆ ಸಾಕಿ ಸಲಹುತ್ತಿರೋ ಈಕೆ, ಧರ್ಮನ ಸಹೋದರರಿಗೆ ಅಮ್ಮನಂತಿರೋ ಅತ್ತಿಗೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories