ನಟ ಡಾಲಿ ಧನಂಜಯ್ ಅವರು ಗೌರಿ-ಗಣೇಶ ಹಬ್ಬದಂದು ತಮ್ಮ ಮಗನ ಫೋಟೋವನ್ನು ಹಂಚಿಕೊಂಡು, 'ಎರೆಯ' ಎಂದು ಹೆಸರಿಟ್ಟಿದ್ದಾರೆ. 'ಒಡೆಯ' ಅಥವಾ 'ಸ್ವಾಮಿ' ಎಂಬ ಅರ್ಥವನ್ನು ಹೊಂದಿರುವ ಈ ಹೆಸರಿನ ಐತಿಹಾಸಿಕ ಮಹತ್ವವನ್ನು ಅವರು ವಿವರಿಸಿದ್ದಾರೆ.
ಕನ್ನಡದ ಪ್ರತಿಭಾನ್ವಿತ ಕಲಾವಿದ, ನಟ, ಡಾಲಿ ಧನಂಜಯ್ ತಮ್ಮ ಮುದ್ದು ಮಗನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಮಗನಿಗೆ ಎರಯ ಎಂಬ ವಿಶೇಷ ಮತ್ತು ಅರ್ಥಗರ್ಭಿತವಾದ ಹೆಸರನ್ನಿಟ್ಟಿದ್ದಾರೆ. ಎರಯ ಹೆಸರಿನ ಅರ್ಥ ಏನು ಎಂಬುದನ್ನು ಸಹ ಧನಂಜಯ್ ವಿವರಿಸಿದ್ದಾರೆ. ಹಾಗೆಯೇ ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ.
25
ಡಾಲಿ ಧನಂಜಯ್ ಪೋಸ್ಟ್
ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮನ್ನ ಪ್ರೀತಿಸುವ ಜೀವಗಳು, ಮಗನನ್ನ ನಮಗೆ ಯಾವಾಗ ತೋರಿಸುತ್ತೀರಿ ಅಂತ ಕೇಳ್ತ ಇದ್ರಿ, ಏನು ಹೆಸರು ಅಂತ ಕೇಳ್ತ ಇದ್ರಿ. ಹಬ್ಬದ ದಿನ, ಇವತ್ತು ಪರಿಚಯಿಸುತ್ತ ಇದೀವಿ.
35
ಎರೆಯ | EREYA
‘ಎರೆಯ’— ಪುರಾತನ ಕನ್ನಡ ಪರಂಪರೆಯ ಗೌರವಪೂರ್ಣ ಪದ. ಇದರ ಅರ್ಥ “ಒಡೆಯ, ಸ್ವಾಮಿ, ಅಧಿಪತಿ” — ಒಂದು ಕಾಲದಲ್ಲಿ ರಾಜರು ಮತ್ತು ಅರಸರನ್ನು ಗೌರವದಿಂದ ಸಂಬೋಧಿಸಲು ಬಳಸುತ್ತಿದ್ದ ಹೆಸರು. ಇತಿಹಾಸದ ಪುಟಗಳಲ್ಲಿ, ಚಾಲುಕ್ಯರ ಮಹಾರಾಜ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರಾಗಿಯೂ Ereya ಎಂಬ ಹೆಸರು ಕಾಣಿಸುತ್ತದೆ.
ಆ ರಾಜರ , ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಬದುಕಿನ ಪುಟ್ಟ ಅಧಿಪತಿ. ನಮ್ಮ ಹೃದಯದ ರಾಜ. ನಮ್ಮ ಎರೆಯ. ನಿಮ್ಮ ಪ್ರೀತಿ , ಆಶೀರ್ವಾದ ಸದಾ ಇರಲಿ ಎಂದು ನಟ ಡಾಲಿ ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
55
ಧನಂಜಯ್ ಹಾಗೂ ಧನ್ಯತಾ
ಧನಂಜಯ್ ಹಾಗೂ ಧನ್ಯತಾ ಅವರ ವಿವಾಹ 2025ನೇ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಮೈಸೂರಿನಲ್ಲಿ ನಡೆದ ಮದುವೆಗೆ ಸ್ಟಾರ್ ಕಲಾವಿದರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿದ್ದರು. ಚಿತ್ರದುರ್ಗದವರಾದ ಧನ್ಯತಾ ಅವರು ಗೈನಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.