Samantha Pregnant Secret: 'ಸಮಂತಾ ಗರ್ಭಿಣಿ' ಗಾಸಿಪ್ ಬೆನ್ನಲ್ಲೇ ನಂದಿನಿ ರೆಡ್ಡಿ ಹೇಳಿಕೆ ಸಖತ್ ವೈರಲ್; ಗೆಳತಿ ಹೇಳಿದ್ದೇನು ಗೊತ್ತಾ?

Published : Jun 22, 2026, 10:02 PM IST

ಈ 'ಖುಷಿಯ ವಿಚಾರ' ಯಾವುದು? ಅದು ಸಮಂತಾ ತಾಯಿ ಆಗುತ್ತಿರುವ ವಿಚಾರವೇ? ಅಥವಾ ಅವರ ವೃತ್ತಿಜೀವನದ ಹೊಸ ಮೈಲಿಗಲ್ಲೇ? ಎಂಬ ಗೊಂದಲ ಈಗ ಅಭಿಮಾನಿಗಳಲ್ಲಿ ಮನೆಮಾಡಿದೆ. ಅದೇನು ಹೇಳ್ಬಿಟ್ರು ಸಮಂತಾ ಗೆಳತಿ ನಂದಿನಿ ರೆಡ್ಡಿ?

PREV
18

ಸಮಂತಾ ಗರ್ಭಿಣಿ?! ಕಿಚ್ಚು ಹಚ್ಚಿದ ನಿರ್ದೇಶಕಿ ನಂದಿನಿ ರೆಡ್ಡಿ ಮಾತು; ಸ್ಯಾಂಡಲ್‌ವುಡ್ ಟು ಟಾಲಿವುಡ್ ಫುಲ್ ಗುಸುಗುಸು!

ದಕ್ಷಿಣ ಭಾರತದ 'ಗ್ಲಾಮರ್ ಕ್ವೀನ್' ಸಮಂತಾ ರುತ್ ಪ್ರಭು (Samantha Ruth Prabhu) ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಸಿನಿಮಾ ಇರಲಿ, ಸ್ಟೈಲಿಶ್ ಫೋಟೋಶೂಟ್ ಇರಲಿ ಅಥವಾ ಅವರ ವೈಯಕ್ತಿಕ ಜೀವನವೇ ಇರಲಿ, ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಸಮಂತಾ ಬಗ್ಗೆ ಹಬ್ಬಿರುವ ಒಂದು ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಹೌದು, ಸಮಂತಾ ಗರ್ಭಿಣಿಯೇ? ಎಂಬ ಪ್ರಶ್ನೆ ಈಗ ಸಿನಿಮಾ ಅಂಗಳದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

28

ಬೆಂಕಿಯಿಲ್ಲದೆ ಹೊಗೆಯಾಡಲ್ಲ ಅಂದಿದ್ದೇಕೆ ಫ್ಯಾನ್ಸ್?

ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಚಿತ್ರ ಇತ್ತೀಚೆಗಷ್ಟೇ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದು ಸಮಂತಾ ಪಾಲಿಗೆ ಒಂದು ಅದ್ಭುತ ಕಮ್‌ಬ್ಯಾಕ್ ಸಿನಿಮಾ. ಈ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯ ಫೋಟೋಗಳು ಮತ್ತು ವಿಡಿಯೋಗಳು ಹೊರಬಂದಾಗ, ಸಮಂತಾ ಅವರ ದೇಹದ ಬದಲಾವಣೆ ಮತ್ತು ನಡಿಗೆಯನ್ನು ಕಂಡು ನೆಟ್ಟಿಗರು "ಶುಭ ಸುದ್ದಿ ಇದೆಯೇ?" ಎಂದು ಕೇಳತೊಡಗಿದರು. ಮದುವೆ ಮತ್ತು ವಿಚ್ಛೇದನದ ನಂತರ ಸಮಂತಾ ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದಾರಾ ಎಂಬ ಊಹೆಗಳು ಶುರುವಾದವು.

38

ಗಾಸಿಪ್‌ಗೆ ತುಪ್ಪ ಸುರಿದ ನಂದಿನಿ ರೆಡ್ಡಿ ಹೇಳಿಕೆ!

ಈ ಗಾಸಿಪ್‌ಗಳಿಗೆ ಅಸಲಿ ರೆಕ್ಕೆಪುಕ್ಕ ಸಿಕ್ಕಿದ್ದು ನಿರ್ದೇಶಕಿ ಬಿ.ವಿ. ನಂದಿನಿ ರೆಡ್ಡಿ (Nandini Reddy) ಅವರ ಒಂದು ಹೇಳಿಕೆಯಿಂದ. ಸಿನಿಮಾ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಂದಿನಿ, "ಸಮಂತಾ ಜೀವನದಲ್ಲಿ ಒಂದು ಖುಷಿಯ ವಿಚಾರ ಬಂದಿದೆ, ಅದು ಸರಿಯಾದ ಸಮಯದಲ್ಲೇ ಬಂದಿದೆ" ಎಂದು ನಿಗೂಢವಾಗಿ ಹೇಳಿದ್ದಾರೆ.

48

ಈ 'ಖುಷಿಯ ವಿಚಾರ' ಯಾವುದು? ಅದು ಸಮಂತಾ ತಾಯಿ ಆಗುತ್ತಿರುವ ವಿಚಾರವೇ? ಅಥವಾ ಅವರ ವೃತ್ತಿಜೀವನದ ಹೊಸ ಮೈಲಿಗಲ್ಲೇ? ಎಂಬ ಗೊಂದಲ ಈಗ ಅಭಿಮಾನಿಗಳಲ್ಲಿ ಮನೆಮಾಡಿದೆ. ನಂದಿನಿ ಮತ್ತು ಸಮಂತಾ ಆಪ್ತ ಗೆಳತಿಯರಾಗಿರುವುದರಿಂದ ಈ ಹೇಳಿಕೆಗೆ ಈಗ ಭಾರೀ ತೂಕ ಬಂದಿದೆ.

58

ನೋವುಗಳ ನಡುವೆ ಸಿಹಿ ಸುದ್ದಿಯ ನಿರೀಕ್ಷೆ:

ಕಳೆದ ಕೆಲವು ವರ್ಷಗಳಿಂದ ಸಮಂತಾ ಸಾಕಷ್ಟು ಪರೀಕ್ಷೆಗಳನ್ನು ಎದುರಿಸಿದ್ದಾರೆ. ನಾಗಚೈತನ್ಯ ಜೊತೆಗಿನ ವಿಚ್ಛೇದನದ ನೋವು, ಆನಂತರ ಕಾಡಿದ 'ಮಯೋಸಿಟಿಸ್' ಎಂಬ ಗಂಭೀರ ಆರೋಗ್ಯ ಸಮಸ್ಯೆ... ಹೀಗೆ ಸಮಂತಾ ಜೀವನ ಪರೀಕ್ಷೆಗಳ ಮೇಲೆ ಪರೀಕ್ಷೆ ಎದುರಿಸಿತ್ತು. ಈಗ ಎಲ್ಲವನ್ನೂ ಮೆಟ್ಟಿ ನಿಂತು ಸಮಂತಾ ಯಶಸ್ಸಿನ ಶಿಖರ ಏರುತ್ತಿದ್ದಾರೆ.

68

ಈ ನಡುವೆ ಇಂತಹ ಒಂದು ಸಿಹಿ ಸುದ್ದಿ ಕೇಳಿಬಂದರೆ ಅಭಿಮಾನಿಗಳಿಗಿಂತ ಹೆಚ್ಚು ಖುಷಿ ಪಡುವವರು ಯಾರೂ ಇಲ್ಲ. ಅದಕ್ಕಾಗಿಯೇ ಸಮಂತಾ ಅಧಿಕೃತವಾಗಿ ಹೇಳುವ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅಭಿನಂದನೆಯ ಸುರಿಮಳೆ ಸುರಿಸುತ್ತಿದ್ದಾರೆ.

78

ಒಟ್ಟಿನಲ್ಲಿ, ಸಮಂತಾ ಗರ್ಭಿಣಿ ಎಂಬ ವರದಿಗಳು ಸದ್ಯಕ್ಕೆ ಕೇವಲ ಊಹಾಪೋಹಗಳಾಗಿದ್ದರೂ, ನಿರ್ದೇಶಕಿ ನಂದಿನಿ ರೆಡ್ಡಿ ಅವರ ಮಾತುಗಳು ಈ ಬೆಂಕಿಗೆ ತುಪ್ಪ ಸುರಿದಂತಿದೆ. ಈ ಎಲ್ಲಾ ಗೊಂದಲಗಳಿಗೆ ಸ್ವತಃ ಸಮಂತಾ ಅವರೇ ಬಂದು ಯಾವಾಗ ಫುಲ್ ಸ್ಟಾಪ್ ಇಡುತ್ತಾರೆ? ಅಥವಾ ಸದ್ಯದಲ್ಲೇ ಕಕ್ಕುವಿಕ್ಕಿ ಮಾಡುವಂತಹ ಸಿಹಿ ಸುದ್ದಿ ನೀಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

88

ಅಂದಹಾಗೆ, ನಂದಿನಿ ರೆಡ್ಡಿ ನಿರ್ದೇಶನ, ಸಮಂತಾ ನಟನೆ ಹಾಗೂ ನಿರ್ಮಾಣದ ‘ಮಾ ಇಂಟಿ ಬಂಗಾರಂ’ ಚಿತ್ರವು 50 ಕೋಟಿ ಕಲೆಕ್ಷನ್ ದಾಟಿ ಯಶಸ್ವೀ ಪದ್ರರ್ಶನ ಕಾಣುತ್ತಿದೆ. ಸಮಂತಾ ಅವರೇ ಇಡೀ ಚಿತ್ರವನ್ನು ಆವರಿಸಿದ್ದು, ನಾಯಕಿ ಪ್ರಧಾನವಾದ ಈ ಚಿತ್ರವು ನಟಿಯ ಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories