ಸಲ್ಮಾನ್ ಖಾನ್, ಕರಣ್ ಜೋಹರ್, ಅಕ್ಷಯ್ ಖನ್ನಾ ಸೇರಿದಂತೆ ಬಾಲಿವುಡ್‌ನ 9 ಕೋಟ್ಯಾಧಿಪತಿ ನಟರು 50 ವರ್ಷ ದಾಟಿದರೂ ಇಂದಿಗೂ ಮದುವೆಯಾಗದೆ ಉಳಿದಿದ್ದಾರೆ. ಇದಕ್ಕೆ ಅವರದ್ದೇ ಆದ ಕಾರಣಗಳಿವೆ.
ಬಾಲಿವುಡ್‌ನಲ್ಲಿ ತೆರೆ ಮೇಲೆ ಪ್ರೀತಿ-ಪ್ರೇಮದ ಕಥೆ ಹೇಳಿದ ಅನೇಕ ನಟರಿದ್ದಾರೆ. ಆದರೆ, ನಿಜ ಜೀವನದಲ್ಲಿ ಇವರು ಮದುವೆಯಿಂದ ದೂರವೇ ಉಳಿದಿದ್ದಾರೆ. ಕೆಲವರಿಗೆ ಮದುವೆ ಅಂದ್ರೆ ದೊಡ್ಡ ಜವಾಬ್ದಾರಿ ಅನ್ನಿಸಿದ್ರೆ, ಇನ್ನು ಕೆಲವರಿಗೆ ಸಂಬಂಧಗಳ ಮೇಲಿನ ನಂಬಿಕೆಯೇ ಹೊರಟುಹೋಗಿದೆ. ಮತ್ತೆ ಕೆಲವರು ತಮಗೆ ಒಂಟಿಯಾಗಿ ಇರುವುದೇ ಇಷ್ಟ ಅಂತ ನೇರವಾಗಿಯೇ ಹೇಳಿದ್ದಾರೆ. ಸಲ್ಮಾನ್ ಖಾನ್‌ನಿಂದ ಹಿಡಿದು ಅಕ್ಷಯ್ ಖನ್ನಾ, ಕರಣ್ ಜೋಹರ್, ಡಿನೋ ಮೋರಿಯಾ ಮತ್ತು ರಾಹುಲ್ ಖನ್ನಾ ತನಕ ಹಲವು ದೊಡ್ಡ ಹೆಸರುಗಳು ಇಂದಿಗೂ ಬಾಲಿವುಡ್‌ನ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್' ಪಟ್ಟಿಯಲ್ಲಿವೆ. ಹಾಗಿದ್ರೆ, ಈವರೆಗೂ ಮದುವೆಯಾಗದ ಆ 9 ನಟರು ಯಾರು? ಅದಕ್ಕೆ ಅವರು ಕೊಟ್ಟ ಕಾರಣಗಳೇನು? ನೋಡೋಣ ಬನ್ನಿ.
210
ಸಲ್ಮಾನ್ ಖಾನ್
ವಯಸ್ಸು : 60 ವರ್ಷ
ಆಸ್ತಿ ಮೌಲ್ಯ : ಸುಮಾರು 2900 ಕೋಟಿ ರೂಪಾಯಿ
ಮದುವೆಯಾಗದಿರಲು ಕಾರಣ : 'ಪ್ರೀತಿಯಲ್ಲ, ಅಗತ್ಯ ಸಮನಾಗಿರಬೇಕು'
ಸಲ್ಮಾನ್ ಖಾನ್ ಹೆಸರು ಹಲವು ನಟಿಯರ ಜೊತೆ ಕೇಳಿಬಂತು, ಆದರೆ ಅವರು ಈವರೆಗೂ ಮದುವೆಯಾಗಿಲ್ಲ. ಒಂದು ಸಂದರ್ಶನದಲ್ಲಿ ಅವರು, "ನಾನು ಪ್ರೀತಿಯಂತಹ ವಿಷಯದಲ್ಲಿ ನಂಬಿಕೆ ಇಟ್ಟಿಲ್ಲ. ನನಗೆ 'ಲವ್' ಅಲ್ಲ, 'ಅಗತ್ಯ' (need) ಅನ್ನೋದೇ ನಿಜವಾದದ್ದು. ಇಬ್ಬರ ಅಗತ್ಯಗಳು ಸಮನಾಗಿದ್ದಾಗ ಮಾತ್ರ ಸಂಬಂಧ ಉಳಿಯುತ್ತೆ. ಹಾಗಾಗದಿದ್ದರೆ ಸಂಬಂಧ ಉಳಿಯೋದು ಕಷ್ಟ" ಎಂದು ಹೇಳಿದ್ದರು.
310
ಅಕ್ಷಯ್ ಖನ್ನಾ
ವಯಸ್ಸು : 51 ವರ್ಷ
ಆಸ್ತಿ ಮೌಲ್ಯ : ಸುಮಾರು 167 ಕೋಟಿ ರೂಪಾಯಿ
ಮದುವೆಯಾಗದಿರಲು ಕಾರಣ : ಜವಾಬ್ದಾರಿಗಳು ನನಗೆ ಭಯ ಹುಟ್ಟಿಸುತ್ತವೆ
ಅಕ್ಷಯ್ ಖನ್ನಾ ಹಲವು ಬಾರಿ ಮದುವೆ ತಮ್ಮ ಆದ್ಯತೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. "ಒಬ್ಬ ಹೆಂಡತಿ ಅಥವಾ ಮಕ್ಕಳ ಜವಾಬ್ದಾರಿ ಹೊರುವ ಯೋಚನೆಯೇ ನನಗೆ ಭಯ ಹುಟ್ಟಿಸುತ್ತೆ. ಸದ್ಯಕ್ಕಂತೂ ನಾನು ಮದುವೆಯಾಗುತ್ತೇನೆ ಎಂದು ಅನಿಸುತ್ತಿಲ್ಲ. ಆದರೂ, ಭವಿಷ್ಯದ ಬಗ್ಗೆ ಪೂರ್ತಿಯಾಗಿ ಹೇಳಲು ಸಾಧ್ಯವಿಲ್ಲ" ಎಂದಿದ್ದರು.
ಮದುವೆಯಾಗದಿರಲು ಕಾರಣ : ಚಿತ್ರರಂಗದಲ್ಲಿ ಸಂತೋಷದ ದಾಂಪತ್ಯದ ಮೇಲೆ ನಂಬಿಕೆಯಿಲ್ಲ
ನಿರ್ಮಾಪಕ ಕರಣ್ ಜೋಹರ್ ಒಮ್ಮೆ ಮದುವೆ ಬಗ್ಗೆ, "ಫಿಲ್ಮ್ ಇಂಡಸ್ಟ್ರಿಯಲ್ಲಿ ಯಾರದ್ದಾದರೂ ಮದುವೆ ತುಂಬಾ ಖುಷಿಯಿಂದ ಕೂಡಿದ್ದರೆ ನನಗೆ ಆಶ್ಚರ್ಯವಾಗುತ್ತೆ" ಎಂದಿದ್ದರು. ಕರಣ್ ಇಂದಿಗೂ ಸಿಂಗಲ್ ಆಗಿದ್ದು, ಬಾಡಿಗೆ ತಾಯ್ತನದ ಮೂಲಕ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ.
510
ಡಿನೋ ಮೋರಿಯಾ
ವಯಸ್ಸು : 50 ವರ್ಷ
ಆಸ್ತಿ ಮೌಲ್ಯ : ಸುಮಾರು 150 ಕೋಟಿ ರೂಪಾಯಿ
ಮದುವೆಯಾಗದಿರಲು ಕಾರಣ : ತಿಳಿದುಬಂದಿಲ್ಲ
ಡಿನೋ ಮೋರಿಯಾ ಹೆಸರು ಬಿಪಾಶಾ ಬಸು, ಲಾರಾ ದತ್ತಾ ಮತ್ತು ನಂದಿತಾ ಮಹತಾನಿ ಜೊತೆ ಕೇಳಿಬಂದಿತ್ತು. ಮದುವೆಯ ಮಾತುಕತೆಗಳು ಹಲವು ಬಾರಿ ನಡೆದರೂ, ಅವರು ಈವರೆಗೂ ಮದುವೆಯಾಗಿಲ್ಲ.
610
ರಾಹುಲ್ ಖನ್ನಾ
ವಯಸ್ಸು : 54 ವರ್ಷ
ಆಸ್ತಿ ಮೌಲ್ಯ : ಸುಮಾರು 60-67 ಕೋಟಿ ರೂಪಾಯಿ
ಮದುವೆಯಾಗದಿರಲು ಕಾರಣ : ವೈಯಕ್ತಿಕ ಜೀವನವನ್ನು ಯಾವಾಗಲೂ ಖಾಸಗಿಯಾಗಿಟ್ಟಿದ್ದಾರೆ
ವಿನೋದ್ ಖನ್ನಾ ಅವರ ಮಗ ಮತ್ತು ಅಕ್ಷಯ್ ಖನ್ನಾ ಅವರ ಸಹೋದರ ರಾಹುಲ್ ಖನ್ನಾ, ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ಲೈಮ್‌ಲೈಟ್‌ನಿಂದ ದೂರ ಇಟ್ಟಿದ್ದಾರೆ. ಅವರ ಸಂಬಂಧಗಳ ಬಗ್ಗೆ ಹೆಚ್ಚು ಮಾಹಿತಿ ಹೊರಬಂದಿಲ್ಲ, ಆದರೆ ಅವರು ಈವರೆಗೂ ಮದುವೆಯಾಗಿಲ್ಲ.
710
ಮನೀಶ್ ಮಲ್ಹೋತ್ರಾ
ವಯಸ್ಸು : 59 ವರ್ಷ
ಆಸ್ತಿ ಮೌಲ್ಯ : ಸುಮಾರು 2500 ಕೋಟಿ ರೂಪಾಯಿ
ಮದುವೆಯಾಗದಿರಲು ಕಾರಣ : ಇನ್ನೂ ಸರಿಯಾದ ಸಂಗಾತಿ ಸಿಕ್ಕಿಲ್ಲ
ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ, ಚಿತ್ರರಂಗದ ಹಲವು ನಟಿಯರ ಮದುವೆಗೆ ಡ್ರೆಸ್ ಡಿಸೈನ್ ಮಾಡಿದ್ದಾರೆ. ಆದರೆ, ತಾವಿನ್ನೂ ಮದುವೆಯಾಗಿಲ್ಲ.
810
ಸಾಜಿದ್ ಖಾನ್
ವಯಸ್ಸು : 55 ವರ್ಷ
ಆಸ್ತಿ ಮೌಲ್ಯ : ಸುಮಾರು 40 ಕೋಟಿ ರೂಪಾಯಿ
ಮದುವೆಯಾಗದಿರಲು ಕಾರಣ : 'ಮದುವೆಗೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ನೀಡಲಾಗಿದೆ'
ಸಾಜಿದ್ ಖಾನ್ ಒಮ್ಮೆ, "ಮದುವೆ ಅನ್ನೋದು ಇಬ್ಬರು ಒಟ್ಟಿಗೆ ಇರುವುದಕ್ಕೆ ಸಮಾಜ ನೀಡುವ ಒಪ್ಪಿಗೆ ಅಷ್ಟೇ. ಆದರೆ ಮದುವೆಗೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ನೀಡಲಾಗಿದೆ ಎಂದು ನನಗನಿಸುತ್ತದೆ. ಹಲವರು ತಪ್ಪು ಕಾರಣಗಳಿಗಾಗಿ ಮದುವೆಯಾಗುತ್ತಾರೆ" ಎಂದು ಹೇಳಿದ್ದರು.
910
ಉದಯ್ ಚೋಪ್ರಾ
ವಯಸ್ಸು : 53 ವರ್ಷ
ಆಸ್ತಿ ಮೌಲ್ಯ : 40-50 ಕೋಟಿ ರೂಪಾಯಿ
ಮದುವೆಯಾಗದಿರಲು ಕಾರಣ : ತಿಳಿದುಬಂದಿಲ್ಲ
ಉದಯ್ ಚೋಪ್ರಾ ಹೆಸರು ಶಮಿತಾ ಶೆಟ್ಟಿ ಮತ್ತು ನರ್ಗೀಸ್ ಫಕ್ರಿ ಜೊತೆ ಕೇಳಿಬಂದಿತ್ತು. ಆದರೆ, ಯಾವುದೇ ಸಂಬಂಧ ಮದುವೆಯ ಹಂತ ತಲುಪಲಿಲ್ಲ.
1010
ರಾಹುಲ್ ಬೋಸ್
ವಯಸ್ಸು : 58 ವರ್ಷ
ಆಸ್ತಿ ಮೌಲ್ಯ : 65-70 ಕೋಟಿ ರೂಪಾಯಿ
ಮದುವೆಯಾಗದಿರಲು ಕಾರಣ : ಇದನ್ನು ಜೀವನದಲ್ಲಿ ಸೆಟಲ್ ಆಗುವ ಅಳತೆಗೋಲು ಎಂದು ಒಪ್ಪುವುದಿಲ್ಲ
ರಾಹುಲ್ ಬೋಸ್, “ಜೀವನದಲ್ಲಿ ಸೆಟಲ್ ಆಗೋಕೆ ಮದುವೆಯನ್ನೇ ಯಾಕೆ ಅಳತೆಗೋಲು ಅಂತಾರೆ ಅನ್ನೋದು ನನಗೆ ಅರ್ಥ ಆಗಲ್ಲ. ಹಲವು ಬಾರಿ ಮದುವೆಯೇ ಜೀವನವನ್ನು ಮತ್ತಷ್ಟು ಜಟಿಲಗೊಳಿಸುತ್ತದೆ” ಎಂದು ನಂಬುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.