ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ, ಎಐ ಕ್ಯಾಮೆರಾಗಳ ಮೂಲಕ ಇದೀಗ ಇ ಚಲನ್ ಮೂಲಕ ದಂಡ ವಿಧಿಸಲಾಗುತ್ತದೆ. ಆದರೆ ದಂಡ ಕಟ್ಟಿರುವುದಕ್ಕಿಂತ ಕಟ್ಟದೇ ಬಾಕಿ ಉಳಿಸಿಕೊಂಡವರೇ ಹೆಚ್ಚು.
ಭಾರತದಲ್ಲಿ ಎಲ್ಲಾ ರಾಜ್ಯಗಳು ಎಐ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆ ಮೂಲಕ ಟ್ರಾಫಿಕ್ ನಿಯಮ ಉಲ್ಲಂಘನೆಗಳಿಗೆ ದಂಡ ವಿಧಿಸಲಾಗುತ್ತದೆ. ಸಿಗ್ನಲ್ ಜಂಪ್, ಒನ್ ವೇ, ಹೈಸ್ಪೀಡ್, ಹೆಲ್ಮೆಟ್, ಡ್ರಿಂಕ್ ಆ್ಯಂಡ್ ಡ್ರೈವ್ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳಿಗೆ ದಂಡ ವಿಧಿಸಲಾಗುತ್ತದೆ. ದಂಡ ವಸೂಲಿಗಾಗಿ ಹಲವು ಬಾರಿ ಶೇಕಡಾ 50ರ ಡಿಸ್ಕೌಂಟ್ ಕೂಡ ನೀಡಲಾಗುತ್ತದೆ. ಇಷ್ಟೆಲ್ಲಾ ಮಾಡಿ ಭಾರತದಲ್ಲಿ ಕಳೆದ 10 ವರ್ಷದಲ್ಲಿ ಕಟ್ಟದೆ ಬಾಕಿ ಉಳಿದಿರುವ ದಂಡದ ಮೊತ್ತ 39,000 ಕೋಟಿ ರೂಪಾಯಿ.
25
ಇ ಚಲನ್ ಒಟ್ಟು ಮೊತ್ತ ಎಷ್ಟು
2015ರಿಂದ 2015ರವರೆಗೆ ಕಳೆದ 10 ವರ್ಷದಲ್ಲಿ ದೇಶದಲ್ಲಿ ಬರೋಬ್ಬರಿ 61,130 ಕೋಟಿ ರೂಪಾಯಿ ಇ ಚಲನ್ ನೀಡಲಾಗಿದೆ. ಆದರೆ ಇದರಲ್ಲಿ 39,000 ಕೋಟಿ ರೂಪಾಯಿ ಪಾವತಿಯಾಗಿಲ್ಲ. ಇನ್ನು ಪಾವತಿಯಾಗಿರುವ ಮೊತ್ತ 22,124 ಕೋಟಿ ರೂಪಾಯಿ ಮಾತ್ರ. ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಮೊತ್ತವೇ ಹೆಚ್ಚಿದೆ.
35
ದಿನಕ್ಕೆ 15 ಕೋಟಿ ರೂಪಾಯಿ ಮೌಲ್ಯದ ದಂಡ
ಪ್ರತಿ ದಿನ ಭರಾತದಲ್ಲಿ ಸರಾಸರಿ 15 ಕೋಟಿ ರೂಪಾಯಿ ಮೊತ್ತದ ಇ ಚಲನ್ ನೀಡಲಾಗುತ್ತದೆ. ಎಲ್ಲಾ ರಾಜ್ಯಗಳಲ್ಲಿ ನಿಯಮ ಉಲ್ಲಂಘನೆಯ ಸರಾಸರಿ ಮೊತ್ತದಲ್ಲಿ ಪಾವತಿಯಾಗುವ ದಂಡದ ಮೊತ್ತ ಕೇವಲ 5.5 ಕೋಟಿ ರೂಪಾಯಿ ಮಾತ್ರ. ಮುಕ್ಕಾಲು ಭಾಗದಷ್ಟು ಮೊತ್ತ ಪಾವತಿಯಾಗುತ್ತಿಲ್ಲ. ಪ್ರತಿ ದಿನ ಸರಿಸುಮಾರು 10 ಕೋಟಿ ರೂಪಾಯಿ ಮೊತ್ತ ಬಾಕಿ ಉಳಿಯುತ್ತಿದೆ.
ಜನವರಿ 1, 2025ರಿಂದ ಡಿಸೆಂಬರ್ 25, 2025ರ ವರೆಗಿನ 10 ವರ್ಷದಲ್ಲಿ ದೇಶದಲ್ಲಿ ಬರೋಬ್ಬರಿ 40.20 ಕೋಟಿ ಇ ಚಲನ್ ನೀಡಲಾಗಿದೆ. ಇದರಲ್ಲಿ ಶೇಕಡಾ 38ರಷ್ಟು ಇ ಚಲನ್ ಮಾಲೀಕರ ಕೈಸೇರಿದೆ. ಇನ್ನುಳಿದ ಶೇಕಡಾ 62ರಷ್ಟು ಅಂದರೆ 25 ಕೋಟಿ ಇ ಚಲನ್ ಮಾಲೀಕರೇ ಸಿಗದೆ ಪೆಂಡಿಂಗ್‌ನಲ್ಲಿದೆ.
40.20 ಕೋಟಿ ಇ ಚಲನ್
55
ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ
ಗರಿಷ್ಠ ನಿಯಮ ಉಲ್ಲಂಘನೆ, ಇ ಚಲನ್ ನೀಡಿ ಅತೀ ಕಡಿಮೆ ದಂಡ ವಸೂಲಿ ಮಾಡಿದ ರಾಜ್ಯ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.ಯುಪಿಯಲ್ಲಿ 7.93 ಕೋಟಿ ಇ ಚಲನ್ ನೀಡಲಾಗಿದೆ. ತಮಿಳುನಾಡು 7.58 ಕೋಟಿ, ಕೇರಲ 3.99 ಕೋಟಿ, ಹರ್ಯಾಣ 2.04 ಕೋಟಿ, ಗುಜರಾತ್ 1.69 ಕೋಟಿ ಇ ಚಲನ್ ನೀಡಲಾಗಿದೆ.