ಹೊಸ ವರ್ಷದ ರೂಲ್ಸ್, ಜ.1ರಿಂದ ಎಲ್ಲಾ ಬೈಕ್ -ಸ್ಕೂಟರ್‌ಗೆ ಎಬಿಎಸ್ ಬ್ರೇಕ್, 2 ಹೆಲ್ಮೆಟ್ ಕಡ್ಡಾಯ

Published : Dec 27, 2025, 10:41 PM IST

ಹೊಸ ವರ್ಷದ ರೂಲ್ಸ್, ಜ.1ರಿಂದ ಎಲ್ಲಾ ಬೈಕ್ -ಸ್ಕೂಟರ್‌ಗೆ ಎಬಿಎಸ್ ಬ್ರೇಕ್, 2 ಹೆಲ್ಮೆಟ್ ಕಡ್ಡಾಯ, ಹಲವು ನಿಮಯಗಳು ಬದಲಾಗುತ್ತಿದೆ. ಕೆಲವು ಕಠಿಣಗೊಳ್ಳುತ್ತಿದೆ. ಇದೀಗ ಸುರಕ್ಷತಾ ದೃಷ್ಟಿಯಿಂದ ಮೋಟಾರು ವಾಹನ ನಿಯಮ ಬಿಗಿಯಾಗಿದೆ.

PREV
16
ಹೊಸ ವರ್ಷದಲ್ಲಿ ಹೊಸ ನಿಯಮ

ಹೊಸ ವರ್ಷದಲ್ಲಿ ಹಲವು ನಿಯಮಗಳು ಬದಲಾಗುತ್ತದೆ. ಕೆಲವು ಪರಿಷ್ಕರಣೆಯಾಗುತ್ತದೆ. ಇನ್ನು ಕೆಲವು ಬಿಗಿಯಾಗತ್ತದೆ. ಇದೀಗ ಮೋಟಾರು ವಾಹನ ಕಾಯ್ದೆಯಡಿ ಕೆಲ ನಿಯಮಗಳು ಮತ್ತಷ್ಟು ಕಠಿಣವಾಗುತ್ತಿದೆ. ವಾಹನ ಸವಾರರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ ಸುರಕ್ಷತಾ ಫೀಚರ್ಸ್ ಹೆಚ್ಚಿಸಲಾಗಿದೆ. ಜೊತೆಗೆ ಕಡ್ಡಾಯಗೊಳಿಸಲಾಗುತ್ತದೆ.

26
ಎಲ್ಲಾ ಬೈಕ್-ಸ್ಕೂಟರ್‌ಗೆ ಎಬಿಎಸ್ ಬ್ರೇಕ್ ಕಡ್ಡಾಯ

ಇದುವರೆಗೆ 125 ಸಿಸಿ ಮೇಲ್ಪಟ್ಟ ಬೈಕ್‌ ಹಾಗೂ ಸ್ಕೂಟರ್ ಎಲ್ಲಾ ಬೈಕ್‌ಗೆ ಎಬಿಎಸ್ ಕಡ್ಡಾಯ ಮಾಡಲಾಗಿದೆ. 125 ಸಿಸಿ ಒಳಗಿನ ಬೈಕ್ ಕಾಂಬಿ ಬ್ರೇಕ್ ಸಿಸ್ಟಮ್ ಕಡ್ಡಾಯ ಮಾಡಲಾಗಿತ್ತು. ಆದರೆ ಸುರಕ್ಷತಾ ದೃಷ್ಟಿಯಿಂದ 2026ರ ಜನವರಿ 1ರಿಂದ ಎಷ್ಟೇ ಸಿಸಿ, ಯಾವುದೇ ಬೈಕ್ ಅಥವಾ ಸ್ಕೂಟರ್ ಇರಲಿ ಎಬಿಎಸ್ ಬ್ರೇಕ್ ಕಡ್ಡಾಯ ಮಾಡಲಾಗಿದೆ. 2026ರಿಂದ ಮಾರಾಟವಾಗುವ ಎಲ್ಲಾ ಬೈಕ್ ಈ ನಿಯಮದಡಿ ಇರಲಬೇಕು.

36
ಸುರಕ್ಷತಾ ದೃಷ್ಟಿಯಿಂದ ಎಬಿಎಸ್ ಕಡ್ಡಾಯ

ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್ (ಎಬಿಎಸ್) ಎಬಿಎಸ್ ಬ್ರೇಕ್ ಹೆಚ್ಚು ಸುರಕ್ಷಿತ, ವೇಗದಲ್ಲಿರುವ ವಾಹನಗಳನ್ನು ತಕ್ಷಣವೇ ನಿಧಾನ ಮಾಡಿ ನಿಲ್ಲಿಸುತ್ತದೆ. ಇಷ್ಟೇ ಅಲ್ಲ ಈ ವೇಳೆ ಸ್ಕಿಡ್ ಪ್ರಮಾಣವನ್ನು ತಗ್ಗಿಸುತ್ತದೆ. ಹೀಗಾಗಿ ಎಬಿಎಸ್ ಕಡ್ಡಾಯ ಮಾಡಲಾಗಿದೆ. ಈ ನಿಯಮಕ್ಕೆ ಮೊದಲಿನಿಂದಲು ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿದೆ. ಕಾರಣ ದ್ವಿಚಕ್ರ ವಾಹನ ಬೆಲೆ ದುಬಾರಿಯಾಗಲಿದೆ ಅನ್ನೋದು ಕಂಪನಿಗಳ ಅಳಲು.

46
ಹೆಲ್ಮೆಟ್ ಕಡ್ಡಾಯ ನಿಯಮ

2026ರ ಜನವರಿ 1 ರಿಂದ ನೀವು ಬೈಕ್ ಅಥವಾ ಸ್ಕೂಟರ್ ಖರೀದಿಸುವಾಗ 2 ಹೆಲ್ಮೆಟ್ ಕಡ್ಡಾಯವಾಗಿ ಖರೀದಿಸಬೇಕು. ಇದನ್ನು ಡೀಲರ್ ಅಥವಾ ಶೋ ರೂಂ ಉಚಿತವಾಗಿ ನೀಡಬಹುದು, ಅಥವಾ ಗ್ರಾಹಕರು ಖರೀದಿಸಬಹುದು. ಒಟ್ಟು ಬೈಕ್ ಖರೀದಿಸುವಾಗ 2 ಹೆಲ್ಮೆಟ್ ಕಡ್ಡಾಯವಾಗಿ ಇರಲೇಬೇಕು.

56
ಬಿಐಎಸ್ ಹೆಲ್ಮೆಟ್ ಮಾರ್ಕ್ ಕಡ್ಡಾಯ

2026ರಿಂದ ಭಾರತೀಯ ಗುಣಮಟ್ಟ ಮಾನದಂಡ (ಬಿಐಎಸ್) ಹೊಂದಿರುವ ಹೆಲ್ಮೆಟ್ ಕಡ್ಡಾಯವಾಗಿದೆ. 2026ರಿಂದ ಮಾರಾಟವಾಗುವ ಹೊಸ ಹೆಲ್ಮೆಟ್ ಬಿಐಎಸ್ ಮಾನದಂಡ ಹೊಂದಿರಬೇಕು. ಇದು ಕಡ್ಡಾಯ ಮಾಡಲಾಗಿದೆ. ಸವಾರರು ಧರಿಸುವ ಹೆಲ್ಮೆಟ್ ಹೆಚ್ಚಿನ ಸುರಕ್ಷತೆ ನೀಡಬೇಕು ಅನ್ನೋ ಕಾರಣಕ್ಕೆ ಈ ನಿಯಮ ತರಲಾಗಿದೆ.

ಬಿಐಎಸ್ ಹೆಲ್ಮೆಟ್ ಮಾರ್ಕ್ ಕಡ್ಡಾಯ

66
ಎಬಿಎಸ್ ಇಲ್ಲದ, ಬಿಐಎಸ್ ಇಲ್ಲದೆ ಹಲ್ಮೆಟ್ ಸವಾರರು ಕತೆ ಏನು?

ಈಗಾಗಲೇ ಬೈಕ್ ಅಥವಾ ಸ್ಕೂಟರ್ ಹೊಂದಿರುವವರಿಗೆ ಚಿಂತೆ ಶುರುವಾಗಿದೆ. ತಮ್ಮ ಸ್ಕೂಟರ್ ಹಾಗೂ ಬೈಕ್‌ನಲ್ಲಿ ಎಬಿಎಸ್ ಇಲ್ಲ ಎನು ಮಾಡಲಿ? 2026ರ ಕಡ್ಡಾಯ ನಿಯಮ ಹೊಸ ವರ್ಷದಲ್ಲಿ ಮಾರಾಟವಾಗುವ ಹೊಸ ಬೈಕ್‌ಗಳಿಗೆ ಅನ್ವಯವಾಗಲಿದೆ. ಈಗಾಗಲೇ ಖರೀದಿಸಿದ ವಾಹನಗಳಿಗಲ್ಲ. ಇತ್ತ ಸುರಕ್ಷತೆ ಹೆಲ್ಮೆಟ್‌ನಲ್ಲಿ ಈ ರೀತಿ ವಿನಾಯಿತಿ ಇಲ್ಲ. ಹೆಲ್ಮೆಟ್ ಅದು ಬಿಐಎಸ್ ಮಾನದಂಡಕ್ಕೆ ಒಳಪಟ್ಟಿರಲೇಬೇಕು.

ಎಬಿಎಸ್ ಇಲ್ಲದ, ಬಿಐಎಸ್ ಇಲ್ಲದೆ ಹಲ್ಮೆಟ್ ಸವಾರರು ಕತೆ ಏನು?

Read more Photos on
click me!

Recommended Stories