100 ಬ್ರಿಲಿಯಂಟ್ ಮಹಿಳೆಯರ ಲಿಸ್ಟ್‌ನಲ್ಲಿದ್ದಾಳೆ ಹೆತ್ತ ಮಗನನ್ನೇ ಕೊಂದು ಬ್ಯಾಗ್‌ನಲ್ಲಿ ಸಾಗಿಸ್ತಿದ್ದ ಪಾಪಿ ತಾಯಿ!

First Published | Jan 9, 2024, 2:59 PM IST

ಆಕೆ ಬೆಂಗಳೂರಿನಲ್ಲಿ ಸ್ಟಾರ್ಟಪ್‌ ಹೊಂದಿರುವ ಬ್ರಿಲಿಯಂಟ್ ಮಹಿಳೆ. AI ಎಥಿಕ್ಸ್ ಪಟ್ಟಿಯಲ್ಲಿ 100 ಬ್ರಿಲಿಯಂಟ್ ಮಹಿಳೆಯರ ಲಿಸ್ಟ್‌ನಲ್ಲಿದ್ದಾಳೆ. ಆದರೆ ಹೆತ್ತು ಹೊತ್ತ ಮಗನನ್ನೇ ಕೊಂದು ಬ್ಯಾಗ್‌ನಲ್ಲಿ ಶವ ಸಾಗಿಸುತ್ತಿದ್ಲು. ಪೊಲೀಸರು ಆಕೆಯ ಜಾಡು ಹಿಡಿದು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್‌ನ ಸಂಸ್ಥಾಪಕಿಯೊಬ್ಬರು ಗೋವಾದಲ್ಲಿ ತಮ್ಮ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದಾರೆ . ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಆಗಿರುವ 39 ವರ್ಷದ ಮಹಿಳೆ, ತಮ್ಮ ಮಾಜಿ ಪತಿ ಮಗುವನ್ನು ಭೇಟಿಯಾಗಲು ಇಷ್ಟಪಡದ ಕಾರಣ ಉತ್ತರ ಗೋವಾದ ಹೋಟೆಲ್‌ನಲ್ಲಿ ಮಗನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ದಂಪತಿಗಳು 2010ರಲ್ಲಿ ವಿವಾಹವಾದರು ಮತ್ತು ಅವರ ಮಗ 2019ರಲ್ಲಿ ಜನಿಸಿದನು. ತಮ್ಮ ಮಾಜಿ ಪತಿ ಮಗುವನ್ನು ಭೇಟಿಯಾಗಲು ಇಷ್ಟಪಡದ ಕಾರಣ ಉತ್ತರ ಗೋವಾದ ಹೋಟೆಲ್‌ನಲ್ಲಿ ಮಗನನ್ನು ಕೊಲೆ ಮಾಡಿದ್ದಾರೆ. ನಂತರ ಸಿಕ್ಕಿಬೀಳುವ ಮೊದಲು ಶವದೊಂದಿಗೆ ಕರ್ನಾಟಕಕ್ಕೆ ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ. 

Latest Videos


ಉತ್ತರ ಗೋವಾದ ಕ್ಯಾಂಡೋಲಿಮ್‌ನ ಸೋಲ್‌ ಬ್ಯಾನಿಯನ್‌ ಗ್ರ್ಯಾಂಡೆ ಅಪಾರ್ಟ್‌ಮೆಂಟ್‌ನಲ್ಲಿ ಮಗನನ್ನು ಕೊಂದಿದ್ದಾರೆ ಎನ್ನುವ ಆರೋಪ ಎದುರಾಗಿದೆ. ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸರು ಸುಚನಾ ಸೇಠ್‌ರನ್ನು ಬಂಧಿಸಿದ್ದಾರೆ. ಬಳಿಕ ಗೋವಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.

ಕೊಲೆಯ ಹಿಂದಿನ ಉದ್ದೇಶವು ಇನ್ನೂ ತಿಳಿದುಬಂದಿಲ್ಲ ಆದರೆ, ಪಶ್ಚಿಮ ಬಂಗಾಳ ಮೂಲದ ಶ್ರೀಮತಿ ಸೇಠ್ ಅವರು ತಮ್ಮ ಪತಿ ವೆಂಕಟ್ ರಾಮನ್ ಅವರೊಂದಿಗೆ ನಡೆಯುತ್ತಿರುವ ವಿಚ್ಛೇದನದ ಬಗ್ಗೆ ಅತೃಪ್ತಿ ಹೊಂದಿದ್ದರು. ಮಾಜಿ ಪತಿ ಮಗುವನ್ನು ಭೇಟಿ ಮಾಡದಿರಲು ಹೀಗೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುಚನಾ ಸೇತ್ ಯಾರು?
ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಸುಚನಾ, AI ನೀತಿಶಾಸ್ತ್ರ ತಜ್ಞ ಮತ್ತು ಡೇಟಾ ವಿಜ್ಞಾನಿಯಾಗಿದ್ದಾರೆ. ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮ ಸಂಶೋಧನಾ ಪ್ರಯೋಗಾಲಯಗಳಲ್ಲಿ ಯಂತ್ರ ಕಲಿಕೆಯ ಪರಿಹಾರಗಳನ್ನು ಸ್ಕೇಲಿಂಗ್ ಮಾಡುವಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾರೆ.  

AI ಎಥಿಕ್ಸ್ ಪಟ್ಟಿಯಲ್ಲಿ 100 ಬ್ರಿಲಿಯಂಟ್ ಮಹಿಳೆಯರಲ್ಲಿದ್ದಾರೆ. ಡೇಟಾ & ಸೊಸೈಟಿಯಲ್ಲಿ ಮೊಜಿಲ್ಲಾ ಫೆಲೋ ಆಗಿದ್ದಾರೆ, ಹಾರ್ವರ್ಡ್ ವಿಶ್ವವಿದ್ಯಾಲಯದ ಬರ್ಕ್‌ಮನ್ ಕ್ಲೈನ್ ಸೆಂಟರ್‌ನಲ್ಲಿ ಫೆಲೋ ಆಗಿದ್ದಾರೆ ಮತ್ತು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನಾ ಸಹವರ್ತಿಯಾಗಿದ್ದಾರೆ. ಸಹಜ ಭಾಷಾ ಸಂಸ್ಕರಣೆಯಲ್ಲಿ ಪೇಟೆಂಟ್‌ಗಳನ್ನು ಸಹ ಹೊಂದಿದ್ದಾರೆ.

ಉತ್ತರ ಗೋವಾದ ಕ್ಯಾಂಡೋಲಿಮ್‌ನ ಸೋಲ್‌ ಬ್ಯಾನಿಯನ್‌ ಗ್ರ್ಯಾಂಡೆ ಅಪಾರ್ಟ್‌ಮೆಂಟ್‌ನಲ್ಲಿ ಮಗನನ್ನು ಕೊಂದಿದ್ದಾರೆ. ಬೆಂಗಳೂರಿಗೆ ವಿಮಾನದಲ್ಲಿ ತೆರಳಲು ಅಪಾರ್ಟ್‌ಮೆಂಟ್‌ ಸಿಬ್ಬಂದಿ ಸಲಹೆ ನೀಡಿದ್ರೂ ಟ್ಯಾಕ್ಸಿ ಬುಕ್ ಮಾಡುವಂತೆ ಅವರನ್ನು ಒತ್ತಾಯಿಸಿದ್ದರು ಎಂದೂ ಸಿಬ್ಬಂದಿ ತಿಳಿಸಿದ್ದಾರೆ. ನಂತರ, ಸಿಬ್ಬಂದಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಆಘಾತಕಾರಿ ಪ್ರಕರಣ ವರದಿಯಾಗಿದೆ.

click me!