ಶಿವಮೊಗ್ಗದ ಡೈನಾಮಿಕ್‌ ಲೇಡಿ ಕೆಎಎಸ್‌ ಆಫೀಸರ್‌ ಪ್ರತಿಮಾಳನ್ನು ಬೆಂಗಳೂರಲ್ಲಿ ಕತ್ತು ಸೀಳಿದ ದುಷ್ಕರ್ಮಿಗಳು!

First Published | Nov 5, 2023, 1:28 PM IST

ಬೆಂಗಳೂರು/ ಶಿವಮೊಗ್ಗ (ನ.05): ಬೆಂಗಳೂರಿನಲ್ಲಿ ಖಡಕ್‌ ಕೆಎಎಸ್‌ ಅಧಿಕಾರಿಯಾಗಿದ್ದ ಶಿವಮೊಗ್ಗ ಮೂಲದ ಪ್ರತಿಮಾ ಅವರನ್ನು ಕತ್ತು ಹಿಸುಕಿ ನಂತರ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆದರೆ, ಕೊಲೆ ಆರೋಪಿಗಳು ಯಾರು? ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ. ಇನ್ನು ಪ್ರತಿಮಾರನ್ನು ನಿನ್ನೆ ಸಂಜೆ ಕಚೇರಿಯಿಂದ ಕರೆದುಕೊಂಡು ಬಂದ ಕಾರು ಚಾಲಕ ಈವರೆಗೂ ನಾಪತ್ತೆಯಾಗಿದ್ದು, ಆತನ ಮೇಲೆ ಅನುಮಾನ ಕಂಡುಬರುತ್ತಿದೆ.
 

ಬನ್ನೇರುಘಟ್ಟ ರೋಡ್ ಬಳಿ ವಾಸ ಮಾಡಿಕೊಂಡಿದ್ದ ಪ್ರತಿಮಾ ಸಹೋದರ ಪ್ರತೀಶ್, ಬಿಬಿಎಂಪಿಯಲ್ಲಿ ಗುತ್ತಿಗೆದಾರನಾಗಿದ್ದಾನೆ. ನಿನ್ನೆ ರಾತ್ರಿ ಪ್ರತಿಮಾರಿಗೆ ಕರೆ ಮಾಡಿದರೂ ಕಾಲ್ ರಿಸೀವ್ ಮಾಡದಿದ್ದಾಗ, ಕೆಲಸದಿಂದ ಸುಸ್ತಾಗಿರಬಹುದು ಎಂದು ಸುಮ್ಮನಾಗಿದ್ದನು. ಮತ್ತೆ ಬೆಳಗ್ಗೆ ಪೋನ್ ಮಾಡಿದ್ದು,ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ಕೆಳಗಡೆ ವಾಸವಿದ್ದ ಮನೆಯವರಿಗೆ ತಿಳಿಸಿ ನೋಡಲು ಹೇಳಿದಾಗ, ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. 

ಡಿಸಿಪಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಮಾತನಾಡಿ, ನಿನ್ನೆ ಸಂಜೆ ಎಂಟು ಗಂಟೆಗೆ ಪ್ರತಿಮಾ ಮನೆಗೆ ಬಂದಿದ್ದಾರೆ. ಅವರ ಅಣ್ಣ ನಿನ್ನೆ ಕರೆ ಮಾಡಿದಾಗ ತೆಗೆದಿಲ್ಲ. ನಂತರ ಬೆಳಗ್ಗೆಯೂ ಕರೆ ಮಾಡಿದ್ರು ರಿಸೀವ್ ಮಾಡಿರೋದಿಲ್ಲ. ಅವರ ಮಾಹಿತಿ ಆಧಾರದ ಮೇರೆಗೆ ವಿಚಾರ ಗೊತ್ತಾಗಿದೆ. ತನಿಖೆಗೆ ಮೂರು ತಂಡಗಳನ್ನ ರಚನೆ ಮಾಡಿದ್ದೇವೆ. 
 

Tap to resize

ಪ್ರತಿಮಾ ನಿನ್ನೆ ಸಂಜೆ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದರು. ಬೆಳಗ್ಗೆ ಅವರ ಅಣ್ಣಾ ಮನೆಗೆ ಬಂದು ನೋಡಿದಾಗ ಮರ್ಡರ್ ಆಗಿರೋದು ಗೊತ್ತಾಗಿದೆ. ಎಫ್ ಎಸ್ ಎಲ್ ಟೀಂ ಪರಿಶೀಲನೆ ನಡೆಸ್ತಿದೆ. ನಿಖರವಾಗಿ ಕಾರಣ ಗೊತ್ತಿಲ್ಲ. ಕತ್ತಿಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಡಿಸಿಪಿ ರಾಹುಲ್ ಕುಮಾರ್ ಹೇಳಿದರು.

ಕೆಎಎಸ್‌ ಅಧಿಕಾರಿಯಾಗಿದ್ದ ಪ್ರತಿಮಾ ಬೆಂಗಳೂರಿನಲ್ಲಿ ಒಬ್ಬರೇ ವಾಸವಾಗಿದ್ದರು. ಸುಮಾರು ಐದಾರು ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಕತ್ತು ಹಿಸುಕಿ ನಂತರ ಚಾಕುವಿನಿಂದ ತಿವಿದು ಕೊಲೆ ಮಾಡಲಾಗಿದೆ. ತನಿಖೆ ನಂತರ ಆರೋಪಿಗಳ ವಿಚಾರ ತಿಳಿಯಲಿದೆ ಎಂದು ಡಿಸಿಪಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಹೇಳಿದರು.

ಬೆಂಗಳೂರಿನಲ್ಲಿ ಖಡಕ್‌ ಕೆಎಎಸ್‌ ಅಧಿಕಾರಿಯಾಗಿದ್ದ ಶಿವಮೊಗ್ಗ ಮೂಲದ ಪ್ರತಿಮಾ ಅವರನ್ನು ಕತ್ತು ಹಿಸುಕಿ ನಂತರ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆದರೆ, ಕೊಲೆ ಆರೋಪಿಗಳು ಯಾರು? ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ. 

ಜಿಲ್ಲಾಧಿಕಾರಿ ಕೆಎ ದಯಾನಂದ್ ಮಾತನಾಡಿ, ಪ್ರತಿಮಾ ನಿರಂತರ ವಾಗಿ ನನ್ನ ಸಂಪರ್ಕದಲ್ಲಿದ್ದರು. ಪ್ರತಿಮಾ ಒಳ್ಳೆಯ ಅಧಿಕಾರಿ. ಎಲ್ಲಾ ಸಭೆಗಳಲ್ಲೂ ಕಡತಗಳ ಜೊತೆಗೆ ಹಾಜರಾಗುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಎಲ್ಲಾ ಅಧಿಕಾರಿಗಳನ್ನು ಕರೆದು ಸ್ವಲ್ಪ ಜೋರು ಮಾಡಿದ್ದೆನು.  ಆಗ ಅಕ್ರಮವಾಗಿ ಜಲ್ಲಿಕಲ್ಲು, ಕಲ್ಲು ಗಣಿಗಾರಿಕೆ ನಡೀತಿದೆ, ತಮಿಳುನಾಡಿನಿಂದ ತರ್ತಿದ್ದಾರೆ ನೋಡಿ ಅಂದಿದ್ದೆ. ಕೆಲಸದ ಸಂಬಂಧ ಯಾವುದೇ ಸಮಸ್ಯೆ ಇರಲಿಲ್ಲ.

ಪ್ರತಿಮಾ ಅವರ ಕೆಲಸದ ಬಗ್ಗೆ ಯಾವುದೇ ದೂರು ಬಂದಿಲ್ಲ. ತಮಿಳುನಾಡಿನ ಕಡೆಗೆ ಬರುವ ಲಾರಿಗಳನ್ನು ತಡೆಯೋಕೆ ಹೇಳಿದ್ದೆನು. ಪಾಸಿಟಿವ್ ಮೈಂಡ್ ಸೆಟ್ ಹೊಂದಿದ್ದ ಅಧಿಕಾರಿಯಾಗಿದ್ದರು. ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿಯಾಗಿರುವ ಪ್ರತಿಮಾ ದಂಪತಿ ಅನೋನ್ಯವಾಗಿದ್ದರು. 15 ದಿನಗಳ ಹಿಂದೆ ನಮ್ಮ ಮನೆಯ ಗೃಹಪ್ರವೇಶ ಆಗಿತ್ತು. ಕಳೆದ ತಿಂಗಳು 22 ಮತ್ತು 23 ರಂದು ಗೃಹಪ್ರವೇಶ ಇತ್ತು. ಈ ವೇಳೆ ಒಂದು ವಾರಗಳ ಕಾಲ ಪ್ರತಿಮಾ ಇಲ್ಲಿಯೇ ವಾಸವಾಗಿದ್ದರು. 

ಪ್ರತಿಮಾಳ ಅತ್ತೆ ಮಾತನಾಡಿ ನಾವೆಲ್ಲರೂ ಸಂಸಾರದಲ್ಲಿ ಚೆನ್ನಾಗಿಯೇ ಇದ್ದೇವೆ. ಪ್ರತಿಮಾ ಕೊಲೆಯಾದ ವಿಷಯ ನಮಗೊಂದು ಶಾಕ್ ನೀಡಿದೆ. ಪ್ರತಿಮಾ ಅಣ್ಣ ಬೆಳಗ್ಗೆ ನಮಗೆ ವಿಷಯ ತಿಳಿಸಿದರು. ಪ್ರತಿಭಾ ಮಗ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ಅಳಲು ತೋಡಿಕೊಂಡರು.

Latest Videos

click me!