ಜೀವ ರಕ್ಷಕ ಹೆಲ್ಮೆಟ್‌ನಿಂದಲೇ ಗರ್ಭಿಣಿ ಹೆಂಡ್ತಿಯನ್ನು ಕೊಲೆಗೈದ ಪಾಪಿ ಗಂಡ: ಆದ್ರೆ ಕಥೆ ಕಟ್ಟಿದ್ದೇ ಬೇರೆ!

Published : Jan 07, 2024, 06:13 PM IST

ದಾವಣಗೆರೆ (ಜ.07): ಮನೆಯಲ್ಲಿ ಗಂಡು ನೋಡಿ ಮದ್ವೆ ಮಾಡ್ತೀವಿ ಎಂದರೂ ಒಪ್ಪಿಕೊಳ್ಳದೇ, ಪ್ರೀತಿಸಿ ಮದುವೆ ಆಗಿದ್ದವಳು ಕೇವಲ ಆರೇ ತಿಂಗಳಿಗೆ ವರದಕ್ಷಿಣೆ ಕಿರುಕುಳಕ್ಕೆ ಗಂಡನಿಂದ ಹಲ್ಲೆಗೊಳಗಾಗಿ ಪ್ರಾಣ ಬಿಟ್ಟು ಶವವಾಗಿ ಮಲಗಿದ್ದಾಳೆ. ಇನ್ನು ಪಾಪಿ ಗಂಡ ಬೈಕ್‌ ಸಂಚಾರದ ವೇಳೆ ಪ್ರಾಣ ರಕ್ಷಣೆಗೆ ಬಳಸುವ ಹೆಲ್ಮೆಟ್‌ನಿಂದಲೇ ಹಲ್ಲೆ ಮಾಡಿ ಮಡದಿಯ ಜೀವ ತೆಗೆದಿದ್ದಾನೆ. ನಂತರ, ಬೇರೆಯದ್ದೇ ಕಥೆ ಕಟ್ಟಿದ್ದು, ಪೊಲೀಸರ ಲಾಠಿ ರುಚಿ ನಂತರ ಸತಯ ಬಾಯಿ ಬಿಟ್ಟಿದ್ದಾನೆ.  

PREV
15
ಜೀವ ರಕ್ಷಕ ಹೆಲ್ಮೆಟ್‌ನಿಂದಲೇ ಗರ್ಭಿಣಿ ಹೆಂಡ್ತಿಯನ್ನು ಕೊಲೆಗೈದ ಪಾಪಿ ಗಂಡ: ಆದ್ರೆ ಕಥೆ ಕಟ್ಟಿದ್ದೇ ಬೇರೆ!

ಹೌದು, ಈ ದುರ್ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ  ಚನ್ನಗಿರಿ ತಾಲೂಕಿನ ನುಗ್ಗಿಹಳ್ಳಿ ಕ್ರಾಸ್‌ ಎಂಬ ಗ್ರಾಮದಲ್ಲಿ. ಮೃತಳನ್ನು ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ನಿವಾಸಿ ಯಶೋಧಾ (23) ಎಂದು ಗುರುತಿಸಲಾಗಿದೆ. ಪತಿ ತಿಪ್ಪೇಶ್‌ ಕೊಲೆಗೈದ ಆರೋಪಿಯಾಗಿದ್ದಾನೆ.
 

25

ಆದರೆ, ಇನ್ನು ಬೈಕ್‌ನಲ್ಲಿ ಹೋಗುವಾಗ ಉಂಟಾದ ಜಗಳದಿಂದ ಉದ್ರಿಕ್ತಗೊಂಡ ಪಾಪಿ ಪತಿ ತನ್ನ ಹೆಂಡ್ತಿಗೆ ಹೆಲ್ಮೆಟ್‌ನಿಂದಲೇ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಆದರೆ, ಈತ ಕೊಲೆ ಮಾಡಿದ ಮೇಲೆ ತನ್ನ ಪತ್ನಿ ಬೈಕ್‌ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.
 

35

ಹೆಲ್ಮೆಟ್ ನಿಂದ ಹೊಡೆದು ಪತ್ನಿ ‌ಕೊಲೆ ಮಾಡಿ ಅಪಘಾತದ ನಾಟಕವಾಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ವರದಕ್ಷಿಣೆ ಕಾರಣಕ್ಕೆ 3 ತಿಂಗಳ‌ ಗರ್ಭಿಣಿ ಪತ್ನಿಯನ್ನ ಹೊಡೆದು ಕೊಲೆ ಮಾಡಿದ್ದಾನೆ. 
 

45

ಇದೇ ಜ.4ರಂದು ಪತಿ  ಜೊತೆ ತವರಿಗೆ ಬಂಧಿದ್ದ ಯಶೋಧಳನ್ನು ಗಂಡ ವಾಪಸ್‌ ಕರೆದುಕೊಂಡು ಹೋಗುವಾಗ ಬೈಕ್ ಅಪಘಾತವಾಗಿ ಹೆಂಡ್ತಿ ಸಾವನ್ನಪ್ಪಿದ್ದಾಳೆ ಎಂದು  ಸಂಬಂಧಿಕರಿಗೆ ಮಾಹಿತಿ‌ ನೀಡಿದ್ದಾನೆ. ಯಶೋಧಾಳ ಶವ ನೋಡಿದ ತಂದೆ ಚಂದ್ರಪ್ಪಗೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. 

55

ತನ್ನ ಪುತ್ರಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಂದ ಸತ್ಯ ಬಹಿರಂಗವಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲು ಆಗಿದ್ದು, ಗಂಡ ತಾನೇ  ಹೊಡೆದು ಸಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
 

Read more Photos on
click me!

Recommended Stories