ಭಾರತದ (ಬಿಸಿಸಿಐ): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಜಗತ್ತಿನ ಎಲ್ಲ ಕ್ರಿಕೆಟ್ ಮಂಡಳಿಗಳ ಮೌಲ್ಯವನ್ನು ಒಗ್ಗೂಡಿಸಿದರೂ ಬಿಸಿಸಿಐನ ಅರ್ಧ ಮೌಲ್ಯಕ್ಕೂ ಸಮನಾಗುವುದಿಲ್ಲ. ಬಿಸಿಸಿಐ ಬರೋಬ್ಬರಿ 2.25 ಬಿಲಿಯನ್ ಡಾಲರ್ (18,760 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದೆ. ಇದಕ್ಕೆ ಪ್ರಮುಖ ಕಾರಣ 130 ಕೋಟಿಗಿಂತ ಹೆಚ್ಚು ಜನರನ್ನು ಹೊಂದಿರುವ ಭಾರತದಲ್ಲಿ ಬಹುತೇಕರು ಕ್ರಿಕೆಟ್ ಅಭಿಮಾನಿಗಳಾಗಿದ್ದು, ಕ್ರಿಕೆಟ್ ಪಂದ್ಯಗಳಿಗೆ ಭಾರಿ ಬೆಂಬಲ ನೀಡುತ್ತಿದ್ದಾರೆ. ವಿಶ್ವದ ಎಲ್ಲ ತಂಡಗಳಿಗಿಂತ ಟೀಮ್ ಇಂಡಿಯಾ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ಇನ್ನು ಬಿಸಿಸಿಐ ನಡೆಸುವ ದೇಶೀಯ ಲೀಗ್, ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ಗೆ ಬಿಸಿಸಿಐಗೆ ಹೆಚ್ಚು ಆದಾಯ ತಂದುಕೊಡುತ್ತಿದೆ.