ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡ ಪ್ರಕಟ..! ಆದ್ರೆ ಮೊದಲ ಸ್ಥಾನದಲ್ಲಿರುವುದು ಆರ್‌ಸಿಬಿ, ಕೆಕೆಆರ್ ಅಲ್ಲವೇ ಅಲ್ಲ

First Published Jun 13, 2024, 3:23 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದೀಗ ಐಪಿಎಲ್‌ ಹಾಗೂ ಐಪಿಎಲ್‌ ಫ್ರಾಂಚೈಸಿಯ ಬ್ರ್ಯಾಂಡ್‌ವ್ಯಾಲ್ಯೂ ಕೂಡಾ ಹೆಚ್ಚಾಗಿದೆ. ಐಪಿಎಲ್‌ನ ಅತಿಹೆಚ್ಚು ಬ್ರ್ಯಾಂಡ್‌ ವ್ಯಾಲ್ಯೂ ಹೊಂದಿದ ಫ್ರಾಂಚೈಸಿ ಯಾವುದು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ.
 

2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗುಬಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನ ಬ್ರ್ಯಾಂಡ್‌ ವ್ಯಾಲ್ಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಬಂದಿದೆ. 17ನೇ ಆವೃತ್ತಿ ಬಳಿಕ ಸುಮಾರು 16.4 ಬಿಲಿಯನ್‌ ಡಾಲರ್‌(ಸುಮಾರು 1.36 ಲಕ್ಷ ಕೋಟಿ ರು.)ಗೆ ಏರಿಕೆಯಾಗಿದೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ವರದಿ ಮಾಡಿದೆ.

Latest Videos


ಕಳೆದ ವರ್ಷ ಐಪಿಎಲ್ ಮೌಲ್ಯ 15.4 ಬಿಲಿಯನ್‌ ಡಾಲರ್‌(1.28 ಲಕ್ಷ ಕೋಟಿ ರು.) ಇತ್ತು. ಆದರೆ ಈ ವರ್ಷ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ ಮೌಲ್ಯ ಶೇ.6.5ರಷ್ಟು ಹೆಚ್ಚಳವಾಗಿದೆ. 

ಇನ್ನು ಟೂರ್ನಿಯ ಬ್ರ್ಯಾಂಡ್‌ ಮೌಲ್ಯ ಕೂಡಾ ಶೇಕಡಾ 6.3ರಷ್ಟು ಏರಿಕೆಯಾಗಿದ್ದು, ಒಟ್ಟು 3.4 ಬಿಲಿಯನ್‌ ಡಾಲರ್‌(₹28,000 ಕೋಟಿ)ಗೆ ಹೆಚ್ಚಳವಾಗಿದೆ.

ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ಮೌಲ್ಯಯುತ ತಂಡ ಎಂದರೆ 5 ಬಾರಿಯ ಚಾಂಪಿಯನ್‌ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಥವಾ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಅಲ್ಲವೇ ಅಲ್ಲ.

ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ವರದಿ ಪ್ರಕಾರ 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವೆಂದು ಘೋಷಿಸಿದೆ.

ಅತ್ಯಂತ ಮೌಲ್ಯಯುತ ತಂಡಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನದಲ್ಲಿದ್ದರೆ, ಆರ್‌ಸಿಬಿ, ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್‌, ಮುಂಬೈ ಇಂಡಿಯನ್ಸ್‌ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ.

click me!