ಟೀಂ ಇಂಡಿಯಾ ಯಶಸ್ಸಿನ ಹಿಂದೆ ಏಕೈಕ ಮಹಿಳಾ ಸಿಬ್ಬಂದಿ..! ಯಾರೀ ಮಿಸ್ಟ್ರಿ ಗರ್ಲ್‌? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

First Published | Jun 13, 2024, 1:54 PM IST

ನ್ಯೂಯಾರ್ಕ್‌: ಐಸಿಸಿ ಟಿ20  ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನದ ಮೂಲಕ ಇದೀಗ ಸೂಪರ್8 ಹಂತಕ್ಕೆ ಲಗ್ಗೆಯಿಟ್ಟಿದೆ. ಟೀಂ ಇಂಡಿಯಾ ಪಾಳಯದಲ್ಲಿ ಓರ್ವ ಮಹಿಳೆ ತೆರೆಮರೆಯಲ್ಲಿ ಟೀಂ ಇಂಡಿಯಾ ಯಶಸ್ಸಿಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅಷ್ಟು ಯಾರು ಆ ಮಹಿಳಾ ಸಿಬ್ಬಂದಿ? ಟೀಂ ಇಂಡಿಯಾ ಯಶಸ್ಸಿನಲ್ಲಿ ಆಕೆಯ ಪಾತ್ರ ಏನು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ.
 

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ 'ಎ' ಗುಂಪಿನಲ್ಲಿ ಮೊದಲ ತಂಡವಾಗಿ ಸೂಪರ್ 8 ಹಂತಕ್ಕೆ ಲಗ್ಗೆಯಿಟ್ಟಿದೆ.
 

ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಈ ಚುಟುಕು ಮಹಾ ಸಂಗ್ರಾಮದಲ್ಲಿ ಭಾರತ ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದು, ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಬೀಗುತ್ತಿದೆ.

Tap to resize

ಇನ್ನು ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾ ಪಾಳಯದಲ್ಲಿ ಓರ್ವ ಮಹಿಳಾ ಸಿಬ್ಬಂದಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವುದನ್ನು ನೀವು ನೋಡಿರಬಹುದು. ಆಕೆ ಯಾರಿರಬಹುದು ಎನ್ನುವುದರ ಬಗ್ಗೆ ನೀವೂ ತಲೆಕೆಡಿಸಿಕೊಂಡರಿಬಹುದು.

ಈ ಎಲ್ಲಾ ಪ್ರಶ್ನೆಗೆ ನಾವಿಂದು ಉತ್ತರ ಕೊಡುತ್ತಿದ್ದೇವೆ ನೋಡಿ. ಈಕೆಯ ಹೆಸರು ರಾಜಲ್ ಅರೋರ. ಈಕೆಗೆ ಭಾರತ ತಂಡದಲ್ಲಿ ಮಹತ್ವದ ಸ್ಥಾನವಿದೆ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ರಾಜಲ್ ಅಥವಾ ರಾಜ್ ಲಕ್ಷ್ಮಿ ಅರೋರ ಅವರು ಟೀಂ ಇಂಡಿಯಾದ ಝಲಕ್‌ ಅನ್ನು ಜಗತ್ತಿನ ಮುಂದೆ ಹೇಗೆ ಪ್ರಚುರ ಪಡಿಸಬೇಕು, ಟೀಂ ಇಂಡಿಯಾವನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಗೆ ಹೈಲೈಟ್ ಮಾಡಬೇಕು ಎನ್ನುವುದರ ಮಾಸ್ಟರ್ ಮೈಂಡ್ ಇದೇ ಯಂಗ್ ಲೇಡಿ.

ಅಂದರೆ ನಿಮಗೀಗ ಈಕೆಯ ಬಗ್ಗೆ ಅರ್ಥವಾಗಿರಬಹುದು. ಹೌದು, ರಾಜಲ್ ಅರೋರ, ಭಾರತ ಕ್ರಿಕೆಟ್ ತಂಡದ ಸೋಷಿಯಲ್ ಮೀಡಿಯಾ ಟೀಂ ಮುಖ್ಯಸ್ಥೆಯಾಗಿದ್ದು, ಮೈದಾನದಾಚೆಗಿನ ಟೀಂ ಇಂಡಿಯಾ ಚಟುವಟಿಗಳನ್ನು ನಮ್ಮ ಮುಂದೆ ಇವರ ನಿರ್ದೇಶನದಂತೆಯೇ ಕಾಣಲು ಸಿಗುವುದು.

ರಾಜಲ್ ಅರೋರ ಪುಣೆಯ ಸಿಂಬೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಅಂಡ್ ಕಮ್ಯುನಿಕೇಷನ್‌ನಲ್ಲಿ ಪದವಿ ಪಡೆದ ಬಳಿಕ ಕಂಟೆಂಟ್ ರೈಟರ್ ಆಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು.

ಇದಾದ ಬಳಿಕ ಬಿಸಿಸಿಐ ಕದ ತಟ್ಟಿದ ರಾಜಲ್ ಅರೋರ, ಇಲ್ಲಿ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದರು. ಇಲ್ಲಿ ಬರೋಬ್ಬರಿ 9 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ಸೀನಿಯರ್ ಪ್ರಡ್ಯೂಸರ್ ಆಗಿ ಬಡ್ತಿ ಪಡೆದರು.

ಇನ್ನು ರಾಜಲ್ ಅರೋರ ಭಾರತ ಕ್ರಿಕೆಟ್ ತಂಡದ ಸೋಷಿಯಲ್ ಮೀಡಿಯಾವನ್ನು ನಿಭಾಯಿಸುವುದರ ಜತೆಗೆ ಬಿಸಿಸಿಐ ಇಂಟರ್‌ನಲ್ ಕಂಪ್ಲೈಂಟ್ ಕಮಿಟಿಯ ಮುಖ್ಯಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂದರೆ ರಾಜಲ್ ಅರೋರ ತಂಡದ ಆಟಗಾರರ ಅಸಭ್ಯ ವರ್ತನೆಯ ಮೇಲೂ ಸದಾ ಹದ್ದಿಗಗಣ್ಣಿರುತ್ತಾರೆ. ಇನ್ನು ರಾಜಲ್ ಅರೋರಾ ಅವರನ್ನೂ ಇನ್‌ಸ್ಟಾಗ್ರಾಂನಲ್ಲಿ 75 ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

Latest Videos

click me!