ಪಾಕಿಸ್ತಾನದ ಕ್ರಿಕೆಟಿಗ ರಮೀಜ್ ರಾಜಾಗೆ ದೀಪಿಕಾ ಪಡುಕೋಣೆ ಫೇವರೇಟ್‌ ಅಂತೆ!

Published : Oct 06, 2023, 05:40 PM IST

ಮಾಜಿ ಪಾಕಿಸ್ತಾನದ ಕ್ರಿಕೆಟಿಗ ರಾಮಿಜ್ ರಾಜಾ (Ramiz Raja) ಅವರು ದೀಪಿಕಾ ಪಡುಕೋಣೆ Deepika Padukone) ನನ್ನ ನೆಚ್ಚಿನ ನಟಿ ಎಂದು ಬಹಿರಂಗಪಡಿಸಿದ್ದಾರೆ. ರಾಮಿಜ್‌ ರಾಜಾ ಅವರ ಈ ಹೇಳಿಕೆ ಸಖತ್‌ ಸದ್ದು ಮಾಡುತ್ತಿದೆ.  World Cup 2023ರ ಸಮಯದಲ್ಲಿ ಪಾಕಿಸ್ತಾನಿ ಕ್ರಿಕೆಟಿಗನ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

PREV
110
ಪಾಕಿಸ್ತಾನದ ಕ್ರಿಕೆಟಿಗ ರಮೀಜ್ ರಾಜಾಗೆ ದೀಪಿಕಾ ಪಡುಕೋಣೆ ಫೇವರೇಟ್‌ ಅಂತೆ!

ನಟಿ ದೀಪಿಕಾ ಪಡುಕೋಣೆ ಚಲನಚಿತ್ರೋದ್ಯಮದಲ್ಲಿ ದೊಡ್ಡ ಹೆಸರು. ಅವರು ಅನೇಕ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ಜಾಗತಿಕ ಐಕಾನ್ ಆಗಿದ್ದಾರೆ. 

210

ದೀಪಿಕಾ ಪ್ರಪಂಚದಾದ್ಯಂತದ ಅಭಿಮಾನಿ ಬಳಗವನ್ನು ಹೊಂದಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಅವರ ಫ್ಯಾನ್ ಕ್ಲಬ್‌ಗೆ ಮಾಜಿ ಪಾಕಿಸ್ತಾನದ ಕ್ರಿಕೆಟಿಗ ರಾಮಿಜ್ ರಾಜಾ ಕೂಡ ಸೇರಿದ್ದಾರೆ.

310

'ದಿ ಕ್ರಿಕೆಟ್ ಶೋ' ಎಂಬ ವಿಶೇಷ ಪ್ರದರ್ಶನ ವಿಭಾಗದಲ್ಲಿ, ರಾಮಿಜ್ ಅವರಿಗೆ ಯಾವ ಬಾಲಿವುಡ್ ನಟಿಯನ್ನು  ಹೆಚ್ಚು ಇಷ್ಟಪಡುತ್ತೀರೆ ಎಂದು ಕೇಳಲಾಯಿತು. ಅವರು 'ದೀಪಿಕಾ ಪಡುಕೋಣೆ' ಎಂದು ಉತ್ತರಿಸಿದರು.  

410

ದೀಪಿಕಾ ತಮ್ಮ ನೆಚ್ಚಿನ ನಟಿ ಎಂದು ರಾಮಿಜ್ ರಾಜಾ ಹೇಳಿರುವ ಹೇಳಿಕೆ ಸಖತ್‌ ವೈರಲ್‌ ಆಗಿದೆ. ವಿಶೇಷವಾಗಿ ವಿಶ್ವಕಪ್ 2023ರ ಭಾರತ ಮತ್ತು ಪಾಕಿಸ್ತಾನ  ಪಂದ್ಯಗಳ ಕಾರಣದಿಂದ ಹೆಚ್ಚು ಟ್ರೆಂಡ್‌ ಆಗುತ್ತಿದೆ.

510

61ರ ಹರೆಯದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಮಿಜ್ ರಾಜಾ ಅವರು ತಮ್ಮ ಹೇಳಿಕೆಗಳಿಗಾಗಿ  ಹಲವು ಬಾರಿ ವಿವಾದಗಳನ್ನು ಸೃಷ್ಟಿಸಿದ್ದಾರೆ.

610

ಆದರೆ, ಏನೇ ಅನ್ನಿ, ಪಾಕಿಸ್ತಾನದ ಕ್ರಿಕೆಟಿಗರಿಗೂ, ಭಾರತದ ಬಾಲಿವುಡ್‌ಗೂ ವಿಶೇಷ ನಂಟಿದೆ. ಅನೇಕ ನಟಿಯರು ಹೆಸರೂ ಪಾಕ್ ಕ್ರಿಕೆಟಿಗರ ಜೊತೆ ಥಳಕು ಹಾಕಿ ಕೊಂಡಿದ್ದನ್ನೂ ಮರೀಬಾರದು.

710

80ರ ದಶಕದ ನಟಿ ಸ್ಮಿತಾ ಪಾಟೀಲ್‌ನಿಂದ ಹಿಡಿದು, ಸುಸ್ಮಿತಾ ಸೇನ್ ಅವರವರೆಗೂ ಬಾಲಿವುಡ್ ಹಾಗೂ ಕ್ರಿಕೆಟಿಗರ ನಡುವೆ ಗುಸು ಗುಸು ಕೇಳಿ ಬರುತ್ತಲೇ ಇರುತ್ತದೆ.

810

ಬಾಲಿವುಡು ನಟಿಯರನ್ನು ಮನ ಪೂರ್ವಕವಾಗಿ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು ಪ್ರಶಂಸಿಸುವುದೂ ಇದೇ ಮೊದಲೇನಲ್ಲ. ಒಟ್ಟಿನಲ್ಲಿ ಪಾಕ್-ಇಂಡೋ ಮ್ಯಾಚ್ ವೇಳೆ ಈ ವಿಷಯಗಳು ಚರ್ಚೆಯಾಗುತ್ತದೆ. 

910

ಕೆಲಸದ ವಿಷಯಕ್ಕೆ ಬಂದರೆ ದೀಪಿಕಾ 'ಫೈಟರ್', 'ಸಿಂಗಮ್ 3' ಮತ್ತು 'ಕಲ್ಕಿ 2898 ಕ್ರಿ.ಶ.' ನಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಪ್ರಸ್ತುತ ಇಟಲಿಯಲ್ಲಿ 'ಫೈಟರ್' ಗಾಗಿ ಚಿತ್ರೀಕರಣ ಮಾಡುತ್ತಿದ್ದಾರೆ.

1010

ವಿಶ್ವಕಪ್ 2023 ರ ಅಕ್ಟೋಬರ್ 14, 2023 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಮ್ಯಾಚ್‌ ಅತಿದೊಡ್ಡ ಪೈಪೋಟಿಗೆ ಸಾಕ್ಷಿಯಾಗಲಿದೆ. ಇದುವರೆಗೂ ಭಾರತ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಎದುರು ವಿಶ್ವಕಪ್‌ನಲ್ಲಿ ಸೋತ ರೆಕಾರ್ಡ್‌ ಇಲ್ಲ.

Read more Photos on
click me!

Recommended Stories