ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ಟಾಮ್ ಲೇಥಮ್ ನೇತೃತ್ವದ ನ್ಯೂಜಿಲೆಂಡ್ ತಂಡವು 9 ವಿಕೆಟ್ ಅನಾಯಾಸ ಗೆಲುವು ಸಾಧಿಸಿದೆ.
ಡೆವೊನ್ ಕಾನ್‌ವೇ ಹಾಗೂ ರಚಿನ್ ರವೀಂದ್ರ ಬಾರಿಸಿದ ಅಜೇಯ ಶತಕಗಳ ನೆರವಿನಿಂದ ಇನ್ನು 13.4 ಓವರ್ ಬಾಕಿ ಇರುವಂತೆಯೇ ಕಿವೀಸ್ ಪಡೆ ಅಧಿಕಾರಯುತ ಗೆಲುವು ಸಾಧಿಸಿದೆ. ಇದರೊಂದಿಗೆ ನ್ಯೂಜಿಲೆಂಡ್ ನೆಟ್ ರನ್‌ರೇಟ್ +2.149ಕ್ಕೆ ಹೆಚ್ಚಿಸಿಕೊಂಡರೆ, ಇಂಗ್ಲೆಂಡ್ ನೆಟ್ ರನ್‌ರೇಟ್ -2.14ಕ್ಕೆ ಕುಸಿದಿದೆ.
ಇನ್ನು ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಕಿವೀಸ್ ತಂಡವು ಕಳೆದ ವಿಶ್ವಕಪ್ ಫೈನಲ್‌ನಲ್ಲಿ ವಿಚಿತ್ರ ಬೌಂಡರಿ ಕೌಂಟ್ ನಿಯಮದಿಂದಾಗಿ ವಿಶ್ವಕಪ್ ಗೆಲ್ಲುವ ಅವಕಾಶ ವಂಚಿತರಾಗಿದ್ದ ಸೋಲಿಗೆ ಇದೀಗ ಆ ಬೌಂಡರಿ ಲೆಕ್ಕಾಚಾರದಲ್ಲೂ ಆಂಗ್ಲರ ಎದುರು ಮೇಲುಗೈ ಸಾಧಿಸಿದೆ.
ಹೌದು, 2019ರ ವಿಶ್ವಕಪ್ ಫೈನಲ್ ಪಂದ್ಯವು ಕೊನೆಯ ಎಸೆತದಲ್ಲಿ ರೋಚಕ ಟೈ ಆಗಿತ್ತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಆದರೆ ಸೂಪರ್ ಓವರ್ ಕೂಡಾ ಟೈ ಆಗಿದ್ದರಿಂದ, ಅತಿಹೆಚ್ಚು ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು.
ಹೌದು, 2019ರ ವಿಶ್ವಕಪ್ ಫೈನಲ್ ಪಂದ್ಯವು ಕೊನೆಯ ಎಸೆತದಲ್ಲಿ ರೋಚಕ ಟೈ ಆಗಿತ್ತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಆದರೆ ಸೂಪರ್ ಓವರ್ ಕೂಡಾ ಟೈ ಆಗಿದ್ದರಿಂದ, ಅತಿಹೆಚ್ಚು ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು.
ಐಸಿಸಿಯ ಈ ನಿಯಮ ಕಿವೀಸ್ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಕನಸಿಗೆ ತಣ್ಣೀರೆರಚಿತ್ತು. ಐಸಿಸಿಯ ಈ ನಡೆ ವ್ಯಾಪಕ ಟೀಕೆಗೆ ಕೂಡಾ ಗುರಿಯಾಗಿತ್ತು. ಇದೀಗ ಐಸಿಸಿ 'ಬೌಂಡರಿ ಕೌಂಟ್' ನಿಯಮವನ್ನು ರದ್ದು ಮಾಡಿದ್ದು, ಫಲಿತಾಂಶ ಬರುವವರೆಗೂ ಸೂಪರ್ ಓವರ್ ಆಡಿಸಲು ತೀರ್ಮಾನಿಸಲಾಗಿದೆ.
ಇದೀಗ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್‌ನ ಎಲ್ಲಾ 11 ಬ್ಯಾಟರ್‌ಗಳು ಸೇರಿ 26 ಬೌಂಡರಿ ಬಾರಿಸಿದರೆ, ನ್ಯೂಜಿಲೆಂಡ್ ಪರ ಕೇವಲ ಡೆವೊನ್ ಕಾನ್‌ವೇ ಹಾಗೂ ರಚಿನ್ ರವೀಂದ್ರ ಇಬ್ಬರೇ 38 ಬೌಂಡರಿ ಬಾರಿಸಿ ಇಂಗ್ಲೆಂಡ್ ಸೋಲು ಎನ್ನುವ ಗಾಯದ ಮೇಲೆ ಬರೆ ಎಳೆದಂತೆ ಮಾಡಿದರು.