ಕೊಹ್ಲಿಯ 8 ಗಂಟೆಯ ಸಂಪಾದನೆ = ನೇಪಾಳ ಕ್ರಿಕೆಟರ ಒಂದು ತಿಂಗಳ ಸ್ಯಾಲರಿ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

First Published Jun 8, 2024, 6:35 PM IST

ಬೆಂಗಳೂರು: ಸದ್ಯ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ನೆರೆಯ ನೇಪಾಳ ಸೇರಿದಂತೆ ಒಟ್ಟು 20 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ. ಆದರೆ ನೇಪಾಳ ಆಟಗಾರರು ಪಡೆಯುವ ಸಂಬಳಕ್ಕೂ ಹಾಗೂ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಪಡೆಯುವ ಸಂಬಳಕ್ಕೂ ಅಜಗಜಾಂತರವಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಭರ್ಜರಿಯಾಗಿಯೇ ಸಾಗುತ್ತಿದೆ. ಈ ಟೂರ್ನಿಯಲ್ಲಿ ಭಾರತ, ನೇಪಾಳ ಸೇರಿದಂತೆ ಒಟ್ಟು 20 ತಂಡಗಳು ಪಾಲ್ಗೊಂಡಿವೆ.

ಇನ್ನು ಟೀಂ ಇಂಡಿಯಾ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಅದೇ ರೀತಿ ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ, ತನ್ನ ಸ್ಟಾರ್ ಆಟಗಾರರಿಗೆ ಕೈತುಂಬಾ ಸಂಭಾವನೆ ಕೊಡುತ್ತಿದೆ. ಆದರೆ ಅದು ಪಕ್ಕದ ನೇಪಾಳ ರಾಷ್ಟ್ರದ ಆಟಗಾರರ ಸಂಭಾವನೆಗೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸವಿದೆ.

Latest Videos


ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 8 ಗಂಟೆಯಲ್ಲಿ ಪಡೆಯುವ ಸಂಭಾವನೆಯನ್ನು ನೇಪಾಳದ ಸ್ಟಾರ್ ಆಟಗಾರರ ಒಂದು ತಿಂಗಳ ಸಂಬಳ ಎಂದರೆ ನೀವು ಅಚ್ಚರಿ ಎನಿಸಿದರೂ ನಂಬಲೇಬೇಕಾದ ಸತ್ಯ.

ಹೌದು, ನಾವೇನೂ ಜೋಕ್ ಮಾಡುತ್ತಿಲ್ಲ. ಕಳೆದ 2024ರ ಫೆಬ್ರವರಿ ತಿಂಗಳಿನಲ್ಲಿ ನೇಪಾಳ ಕ್ರಿಕೆಟಿಗರ ವೇತನ ಹೆಚ್ಚು ಮಾಡಲಾಗಿದೆ. ಹೀಗಿದ್ದೂ ಅವರಿಗೆ ಸಿಗುತ್ತಿರುವ ಹಣ, ಭಾರತೀಯ ಕ್ರಿಕೆಟಿಗರಿಗೆ ಹೋಲಿಸಿದರೆ ತೀರಾ ಕಡಿಮೆ.

ನೇಪಾಳ ಕ್ರಿಕೆಟ್ ತಂಡದಲ್ಲಿ 'ಎ' ಗ್ರೇಡ್ ಹೊಂದಿದ ಆಟಗಾರರಿಗೆ ನೇಪಾಳ ಕ್ರಿಕೆಟ್ ಸಂಸ್ಥೆಯು ಒಂದು ತಿಂಗಳಿಗೆ ಒಂದು ಲಕ್ಷ ನೇಪಾಳಿ ರುಪಾಯಿಗಳನ್ನು ನೀಡುತ್ತಿದೆ. ಅಂದರೆ ಅದು ಭಾರತೀಯ ರುಪಾಯಿಯ ಲೆಕ್ಕಾಚಾರದಲ್ಲಿ ಕೇವಲ ₹63,000 ಗಳಷ್ಟೇ.

ನೇಪಾಳ ತಂಡದ ನಾಯಕ ರೋಹಿತ್ ಪೌದೆಲ್, ಸೋಮ್‌ಪಾಲ್ ಕಾಮಿ, ಕರಣ್ ಕೆ ಸಿ, ದೀಪೇಂದ್ರ ಸಿಂಗ್ ಐರೆ ಹಾಗೂ ಆಸಿಫ್ ಶೇಖ್ 'ಎ' ಗ್ರೇಡ್ ಗುತ್ತಿಗೆ ಪಡೆದಿದ್ದು, ಇವರೆಲ್ಲರೂ ತಲಾ ಒಂದು ತಿಂಗಳಿಗೆ ಒಂದು ಲಕ್ಷ ನೇಪಾಳಿ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಇನ್ನು ನೇಪಾಳ ಕ್ರಿಕೆಟ್ ತಂಡದಲ್ಲಿ 'ಬಿ' ಗ್ರೇಡ್ ಹೊಂದಿದ ಆಟಗಾರರು 70,000 ನೇಪಾಳಿ ರುಪಾಯಿ(₹44,000) ಹಾಗೂ 'ಸಿ' ಗ್ರೇಡ್ ಹೊಂದಿದ ಆಟಗಾರರು 55,000 ನೇಪಾಳಿ ರುಪಾಯಿ(₹34,000) ಪ್ರತಿ ತಿಂಗಳು ಸಂಭಾವನೆ ಪಡೆಯುತ್ತಾರೆ.

ಇನ್ನು ಬಿಸಿಸಿಐ ತನ್ನ ಟೀಂ ಇಂಡಿಯಾ 'ಎ+' ಗ್ರೇಡ್ ಹೊಂದಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾಗೆ ಪ್ರತಿ ವರ್ಷ ತಲಾ 7 ಕೋಟಿ ರುಪಾಯಿ ರುಪಾಯಿ ಸಂಭಾವನೆ ನೀಡುತ್ತಿದೆ.

ಸಿಂಪಲ್ ಲೆಕ್ಕಾಚಾರ ಹಾಕಿದರೂ, ನೇಪಾಳ ಆಟಗಾರರು ಒಂದು ತಿಂಗಳಿಗೆ ಪಡೆಯುವ ಸಂಬಳವು, ವಿರಾಟ್ ಕೊಹ್ಲಿ ಪಡೆಯುವ 8 ಗಂಟೆಯ ಸಂಪಾದನೆಗೆ ಸಮ ಎನಿಸಿದೆ.

click me!